ಬ್ರೇಕಿಂಗ್ ನ್ಯೂಸ್
29-06-24 11:17 pm Mangalore Correspondent ಕರಾವಳಿ
ಮಂಗಳೂರು, ಜೂನ್ 29: ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ ನೂತನ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ವಿಮಾನ ನಿಲ್ದಾಣದಿಂದಲೇ ಮೆರವಣಿಗೆಯಲ್ಲಿ ಬಂದ ಚೌಟ ಅವರನ್ನು ದಾರಿಯುದ್ದಕ್ಕೂ ಅಭಿಮಾನಿಗಳು, ಕಾರ್ಯಕರ್ತರು ಹೂಹಾರ ಹಾಕಿ ಸ್ವಾಗತಿಸಿದರು.
ಏರ್ಪೋರ್ಟ್ ಆವರಣದಿಂದಲೇ ಕಾವೂರಿನ ವರೆಗೆ ಮೆರವಣಿಗೆಯಲ್ಲಿ ಬಂದಿದ್ದು, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ನೇತೃತ್ವದಲ್ಲಿ ಭಾರೀ ಸಂಖ್ಯೆಯ ಕಾರ್ಯಕರ್ತರು ಸ್ವಾಗತಿಸಿದ್ದು, ಜೈಕಾರ ಹಾಕುತ್ತಲೇ ಘೋಷಣೆ ಕೂಗಿದ್ದಾರೆ. ಆನಂತರ, ಬೋಂದೆಲ್, ಪದವಿನಂಗಡಿ, ಯೆಯ್ಯಾಡಿ, ಕದ್ರಿ ಕೆಪಿಟಿ ವರೆಗೂ ಭಾರೀ ಸಂಖ್ಯೆಯ ಕಾರ್ಯಕರ್ತರು ಅಲ್ಲಲ್ಲಿ ಎದುರುಗೊಂಡು ಹೂ ಅರ್ಪಿಸಿ, ಕೈಕುಲುಕಿ ಸ್ವಾಗತ ನೀಡಿದ್ದಾರೆ.
ಕೆಪಿಟಿ ಬಳಿಯ ಕದ್ರಿ ಯುದ್ಧ ಸ್ಮಾರಕದ ಮುಂದೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮತ್ತು ಮೇಯರ್ ಸುಧೀರ್ ಶೆಟ್ಟಿ ನೇತೃತ್ವದಲ್ಲಿ ಸ್ವಾಗತ ನಡೆದಿದ್ದು, ಪಟಾಕಿ ಸಿಡಿಸಿ ಹೂಹಾರ ಅರ್ಪಿಸಿ ಸ್ವಾಗತಿಸಿದ್ದಾರೆ. ನೂರಾರು ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದರು. ಆನಂತರ, ವಾಹನಗಳ ಮೆರವಣಿಗೆಗೆ ಮತ್ತಷ್ಟು ಕಳೆ ಬಂದಿದ್ದು, ಒಂದು ಕಡೆ ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ಮತ್ತು ವಾಹನಗಳಲ್ಲಿ ಸಾಗಿದ್ದಾರೆ. ಕೆಎಸ್ಸಾರ್ಟಿಸಿ, ಲಾಲ್ ಬಾಗ್, ಬಳ್ಳಾಲ್ ಬಾಗ್ ನಲ್ಲಿಯೂ ಕಾರ್ಯಕರ್ತರು ನೆರೆದಿದ್ದು, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಹಾಲ್ ಸಮೀಪಿಸುತ್ತಿದ್ದಂತೆ ಧೋ ಎಂದ ಮಳೆ
ಮೆರವಣಿಗೆ ಟಿಎಂಎ ಪೈ ಹಾಲ್ ಸಮೀಪಿಸುತ್ತಿದ್ದಂತೆ ಎಲ್ಲಿಂದ ಬಂತೋ ಅನ್ನುವ ರೀತಿ ಮಳೆರಾಯ ಧೋ ಎಂದು ಸುರಿಯಿತು. ಸಂಜೆ ನಾಲ್ಕರಿಂದ ಮಳೆ ಬಿಡುವು ಕೊಟ್ಟು ಮೆರವಣಿಗೆ ಅಲ್ಲಿ ತಲುಪುವ ವರೆಗೂ ಸಾಥ್ ಕೊಟ್ಟಿದ್ದರೆ, ಹಾಲ್ ಸಮೀಪಿಸುತ್ತಿದ್ದಂತೆ ಭೋರ್ಗರೆಯಿತು. ಮಳೆಯಿಂದ ತಪ್ಪಿಸಿಕೊಳ್ಳಲು ಕಾರ್ಯಕರ್ತರು, ಮುಖಂಡರು ದಡಬಡನೆ ವಾಹನದಿಂದ ಇಳಿದು ಟಿಎಂಎ ಪೈ ಹಾಲ್ ನತ್ತ ಓಡಿದರು. ಆನಂತರ, ಮೊದಲ ಮಹಡಿಯಲ್ಲಿ ನೆರೆದಿದ್ದ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ನೂತನ ಸಂಸದ ಬ್ರಿಜೇಶ್ ಚೌಟರಿಗೆ ಅಭಿನಂದನಾ ಸಮಾರಂಭ ನಡೆಯಿತು.
ಹಿಂದುತ್ವ, ಕಾರ್ಯಕರ್ತರ ಗೆಲುವು
ಇದೇ ವೇಳೆ, ಮಾತನಾಡಿದ ಸಂಸದ ಚೌಟ, ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭೆ ಗೆಲುವು ನನ್ನ ಗೆಲುವಲ್ಲ. ಇದು ಕಾರ್ಯಕರ್ತರ ಗೆಲುವು, ಹಿಂದುತ್ವದ ಗೆಲುವು. ಹಿಂದುತ್ವವನ್ನು ಈ ಜಿಲ್ಲೆಯ ಜನರು ತಮ್ಮ ಹೃದಯದಲ್ಲಿ ಇಟ್ಟುಕೊಂಡಿದ್ದಾರೆ. ಜನರು ರಾಷ್ಟ್ರೀಯತೆಗೆ ಕೊಟ್ಟ ಗೆಲುವು, ಬದಲಾವಣೆಗೆ ಕೊಟ್ಟ ಗೆಲುವು, ಯುವ ನಾಯಕತ್ವಕ್ಕೆ ಕೊಟ್ಟ ಗೆಲುವು ಎಂದು ಭಾವುಕರಾಗಿ ನುಡಿದರು.
ಯಾರು ಹಿಂದುತ್ವ ಒಡೆಯಲು ನೋಡಿದ್ದಾರೋ, ಅಂಥವರಿಗೆ ಈ ಜಿಲ್ಲೆಯ ಜನರು ಉತ್ತರ ಕೊಟ್ಟಿದ್ದಾರೆ. ನಾನಿದಕ್ಕೆ ಆಭಾರಿಯಾಗಿದ್ದೇನೆ. ಜಿಲ್ಲೆಯ ಅಭಿವೃದ್ಧಿಗಾಗಿ ಕೆಲಸ ಮಾಡಲು ನಾನು ತುಳುನಾಡಿನ ಜನರ, ದೈವ ದೇವರ ಆಶೀರ್ವಾದ ಕೇಳುತ್ತೇನೆ. ಕಾಂಗ್ರೆಸ್ ಸರಕಾರ ಬಂದ ಬಳಿಕ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಕ್ಕೆ ತೊಡಕಾಗಿದೆ. ಶಾಸಕರು, ಕಾರ್ಯಕರ್ತರ ಜೊತೆಗಿದ್ದು ಅಭಿವೃದ್ಧಿ ಕೆಲಸಕ್ಕೆ ಕೈಜೋಡಿಸುತ್ತೇನೆ. ಭ್ರಷ್ಟ ರಾಜ್ಯ ಸರಕಾರವನ್ನು ಕಿತ್ತೊಗೆಯುವ ಕೆಲಸದಲ್ಲಿ ನೀವೆಲ್ಲ ನಮ್ಮ ಜೊತೆ ನಿಲ್ಲಬೇಕೆಂದು ಕೇಳಿಕೊಳ್ಳುತ್ತೇನೆ, ಈಗಾಗಲೇ ಕ್ಷೇತ್ರದ ಅಭಿವೃದ್ಧಿಗಾಗಿ ನವಪಥ ನವಯುಗ ಎನ್ನುವ ಸಂಕಲ್ಪ ತೊಟ್ಟಿದ್ದು, ಅದನ್ನು ಈಡೇರಿಸಲು ಕಟಿಬದ್ಧನಾಗಿದ್ದೇನೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರು, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಶಾಸಕ ನಾಗರಾಜ ಶೆಟ್ಟಿ, ಎಂಎಲ್ಸಿ ಪ್ರತಾಪಸಿಂಹ ನಾಯಕ್, ಗಣೇಶ್ ಕಾರ್ಣಿಕ್ ಮತ್ತಿತರರು ಇದ್ದರು. ಒಟ್ಟು ಕಾರ್ಯಕ್ರಮದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಉಳಿದಂತೆ, ಚುನಾವಣೆ ಸಂದರ್ಭದಲ್ಲಿ ದೂರ ನಿಂತಿದ್ದ ಕೆಲವು ಮುಖಂಡರು ಇಂದಿನ ಸಮಾರಂಭದಲ್ಲಿ ಹಾಜರಾಗಿದ್ದರು.
Grand welcome in Mangalore city to new Dakhina Kannada MP Captian Brijesh Chowta by BJP. He was grandly welcomed by BJP members holding procession from Airport to TMA pai hall in city. Chowta has promised to bring more development to the region, known for its rich cultural history and also for its banking tradition. He has come out with a vision document―nine paths to turn his constituency into a developed area as part of the prime minister’s Viksit Bharat dream.
22-08-25 10:28 pm
Bangalore Correspondent
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
Tumkur School, Compound News, Student: ಸ್ಕೂಲ್...
22-08-25 12:29 pm
Mahesh Thimarodi, Kalladka Prabhakar Bhat: ಮಹ...
22-08-25 09:47 am
Dharmasthala Case, Minister Eshwar Khandre: ಧ...
21-08-25 10:31 pm
22-08-25 10:00 pm
HK News Desk
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
ಚಿತ್ರನಟಿ ಆರೋಪ ಬೆನ್ನಲ್ಲೇ ಮಂಗಳಮುಖಿಯಿಂದಲೂ ದೂರು,...
22-08-25 01:11 pm
ಮಹಾ ಸಿಎಂ ದೇವೇಂದ್ರ ಫಡ್ನವೀಸ್ - ಎಂಎನ್ಎಸ್ ಮುಖ್ಯಸ್...
21-08-25 06:09 pm
22-08-25 05:07 pm
Mangalore Correspondent
ಪೊಲೀಸರ ಕರ್ತವ್ಯಕ್ಕೆ ಅಡ್ಡಿ ; ಬೆಳ್ತಂಗಡಿ ಠಾಣೆಯಲ್ಲ...
22-08-25 04:21 pm
Activist Mahesh Shetty Timarodi Arrest: ಬಿ.ಎಲ...
21-08-25 09:35 pm
Vhp, Mangalore, Sharan Pumpwell: ಗಣೇಶೋತ್ಸವ, ದ...
21-08-25 09:12 pm
FIR, YouTuber Sameer MD, Doota Arrest: ಸಾವಿರಾ...
21-08-25 03:44 pm
22-08-25 09:57 pm
HK News Desk
Lucky Scheme, Shine Enterprises, Arrest, Mang...
22-08-25 09:17 pm
Mangalore Church, Moodbidri, Fraud: ಕಿಡ್ನಿ ವೈ...
21-08-25 11:00 pm
ಶೀಲ ಶಂಕೆ ; ಕ್ರಿಮಿನಾಶಕ ಕೊಡಿಸಿ ಕೊಲೆ, ಪ್ರಿಯಕರನೊ...
21-08-25 10:39 pm
Mangalore, Derlakatte, Robbery, Muthoot finan...
20-08-25 08:10 pm