ಬ್ರೇಕಿಂಗ್ ನ್ಯೂಸ್
28-06-24 09:42 pm Mangalore Correspondent ಕರಾವಳಿ
ಮಂಗಳೂರು, ಜೂನ್ 28: ಕೋಟಿಗೂ ಹೆಚ್ಚು ಜನರು ಮಾತನಾಡುವ ತುಳು ಭಾಷೆಗೆ ನಮ್ಮನ್ನು ಆಳುವ ಸರ್ಕಾರಗಳು ಮಾನ್ಯತೆ ಕೊಟ್ಟಿಲ್ಲ. ಆದರೆ, ಜಾಗತಿಕವಾಗಿ ತುಳು ಭಾಷೆಗೆ ಗೂಗಲ್ ಸರ್ಚ್ ಇಂಜಿನ್ ಮಾನ್ಯತೆ ಕೊಟ್ಟಿದೆ. ಜಾಲತಾಣ ಬಳಕೆದಾರರು ಯಾವುದೇ ಪದಗಳ ಅರ್ಥ ತಿಳಿಯಲು Google Translater ಬಳಸುವುದು ಸಾಮಾನ್ಯ. ಅಂಥ ಗೂಗಲ್ ಟ್ರಾನ್ಸ್ ಲೇಟರ್ ಸರ್ಚ್ ಇಂಜಿನ್ನಲ್ಲಿ ಕರ್ನಾಟಕ ಕರಾವಳಿ ಜನರ ಆಡುಭಾಷೆ ತುಳು ಸೇರ್ಪಡೆಯಾಗಿದೆ. ಇನ್ನೀಗ ಜಗತ್ತಿನ ಯಾವುದೇ ಮೂಲೆಯ ವ್ಯಕ್ತಿಯೂ ಮನಸ್ಸು ಮಾಡಿದರೆ, ತುಳು ಭಾಷೆ ಕಲಿಯಲು ಸಾಧ್ಯ!
ಜೂನ್ 27ರಂದು ಒಂದೇ ಬಾರಿಗೆ ಜಾಗತಿಕವಾಗಿ 110 ಭಾಷೆಗಳನ್ನು ಗೂಗಲ್ ಸಂಸ್ಥೆ ತನ್ನ Translater ಇಂಜಿನ್ ಗೆ ಸೇರ್ಪಡೆ ಮಾಡಿದ್ದು, ಇಂಗ್ಲಿಷ್ ಅಥವಾ ಯಾವುದೇ ಭಾಷೆಯ ಪದಗಳನ್ನು ಉಲ್ಲೇಖಿಸಿ ತುಳುವಿನಲ್ಲಿ ಅರ್ಥ ಕೇಳಿದರೆ ಅದಕ್ಕೀಗ ಸಂವಾದಿ ಅರ್ಥ ಕೊಡಬಲ್ಲ ಪದಗಳನ್ನು ತೋರಿಸುತ್ತದೆ. ಭಾರತೀಯ ಭಾಷೆಗಳಾದ ತುಳು, ಮಾರ್ವಾಡಿ, ಸಂತಾಲಿ, ಖಾಸಿ, ಅವಧಿ ಇನ್ನಿತರ ಕೆಲವು ಭಾಷೆಗಳನ್ನು ಟ್ರಾನ್ಸ್ ಲೇಟರ್ ಇಂಜಿನ್ನಿಗೆ ಸೇರ್ಪಡೆ ಮಾಡಿವೆ. ಈ ಹಿಂದೆ 133 ಭಾಷೆಗಳು ಗೂಗಲ್ ಇಂಜಿನ್ನಲ್ಲಿದ್ದರೆ, ಹೆಚ್ಚುವರಿ 110 ಭಾಷೆಗಳ ಸೇರ್ಪಡೆಯೊಂದಿಗೆ 243 ಭಾಷೆಗಳು ಗೂಗಲ್ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ವಿಶೇಷ ಅಂದ್ರೆ, ಈಗ ಸೇರ್ಪಡೆಯಾಗಿರುವ ಭಾಷೆಗಳಲ್ಲಿ 25 ಪರ್ಸೆಂಟ್ ಆಫ್ರಿಕಾದ್ದೇ ಇವೆ ಎನ್ನುವುದು ಗೂಗಲ್ ಮಾಹಿತಿ.
ಒಂದು ಭಾಷೆಯೆಂದರೆ ಆಯಾ ಭಾಗದ ಸಂಸ್ಕತಿ, ಸಾಹಿತ್ಯ, ಪರಂಪರೆಯನ್ನು ತೋರಿಸುತ್ತದೆ. ಭಾರತ ಸೇರಿ ಏಷ್ಯಾ ಉಪಖಂಡದಲ್ಲಿ ಸಾವಿರಕ್ಕೂ ಹೆಚ್ಚು ಪ್ರಾದೇಶಿಕ ವೈವಿಧ್ಯದ ಭಾಷೆಗಳಿದ್ದು, ರಾಷ್ಟ್ರೀಯ ಭಾಷೆಗಳ ನಡುವೆ ಅವುಗಳಿನ್ನೂ ಪ್ರಚಾರಕ್ಕೆ ಬಂದಿಲ್ಲ. ತುಳು ಪ್ರಾದೇಶಿಕ ಭಾಷೆಯಾಗಿದ್ದರೂ, ಕರಾವಳಿಯ ಜನರು ಇಡೀ ಜಗತ್ತಿನ ರಾಷ್ಟ್ರಗಳಲ್ಲಿದ್ದಾರೆ. ಹೆಚ್ಚಿನ ಮಂದಿ ತುಳುವನ್ನು ತಮ್ಮ ಮಾತೃಭಾಷೆಯಾಗಿಯೇ ಬಳಸುತ್ತಿದ್ದಾರೆ. ಈಗ ಗೂಗಲ್ ಇಂಜಿನ್ನಲ್ಲಿ ತುಳು ಸೇರ್ಪಡೆಯಾಗಿರುವುದು ಭಾಷೆಯ ಮಟ್ಟಿಗೆ ಒಂದು ಕ್ರಾಂತಿಕಾರಿ ಹೆಜ್ಜೆಯೇ ಸರಿ. ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತ ವ್ಯಕ್ತಿಯೂ ಸರ್ಚ್ ಇಂಜಿನ್ನಲ್ಲಿರುವ ಇತರ ಭಾಷೆಯ ಪದಗಳಿಗೆ ತುಳುವಿನಲ್ಲೂ ಅರ್ಥ ತಿಳಿದುಕೊಳ್ಳಬಹುದು. ಆರಂಭದಲ್ಲಿ ಸರಿಯಾದ ಪದಗಳ ಜೋಡಣೆ ಕಷ್ಟವೆನಿಸಿದರೂ, ಬಳಕೆ ಮಾಡಿದಂತೆ ಇದರ ಪ್ರಗತಿಯಾಗಲು ಸಾಧ್ಯ.
2022ರಲ್ಲಿ ಜಗತ್ತಿನಲ್ಲಿ ಹೆಚ್ಚು ಜನರು ಮಾತನಾಡುವ ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ಗೂಗಲ್ ಸರ್ಚ್ ಇಂಜಿನ್ನಲ್ಲಿ ಸೇರಿಸಬೇಕು ಎನ್ನುವ ಯೋಜನೆ ಮೊಳಕೆಯೊಡೆದಿತ್ತು. ಎಐ ಟೆಕ್ನಾಲಜಿಯನ್ನು ಬಳಸಿಕೊಂಡು ಈ ಗುರಿ ಮುಟ್ಟಬೇಕೆಂಬ ಪ್ರಯತ್ನವೂ ನಡೆದಿತ್ತು. ಇದೀಗ ಫಲ ಸಿಕ್ಕಿದ್ದು, ಎಐ ಟೆಕ್ನಾಲಜಿ ಆಧರಿತ PaLM 2 ಹೆಸರಿನ ಲ್ಯಾಂಗ್ವೇಜ್ ಮಾಡೆಲ್ ಒಂದನ್ನು ರೆಡಿ ಮಾಡಲಾಗಿದೆ. ಅದರಿಂದಾಗಿ ಒಂದೇ ಬಾರಿಗೆ 110 ಭಾಷೆಗಳು ಗೂಗಲ್ ಸಂಸ್ಥೆಯ ಇಂಜಿನ್ನಲ್ಲಿ ಸೇರಿಕೊಂಡಿವೆ ಎನ್ನುವುದು ಗೂಗಲ್ ಕಡೆಯಿಂದ ಸಿಗುವ ಮಾಹಿತಿ.
ತುಳು ವಿಕಿಪೀಡಿಯದಿಂದ ಗೂಗಲ್ ವರೆಗೆ..
ಎಂಟು ವರ್ಷಗಳ ಹಿಂದೆ ಮೊದಲ ಬಾರಿಗೆ ತುಳುವಿನಲ್ಲಿಯೂ ವಿಕಿಪೀಡಿಯ ಆಗಬೇಕೆಂದು ಒಂದಷ್ಟು ಆಸಕ್ತರು ಸೇರಿ ಪ್ರಯತ್ನ ಆರಂಭಿಸಿದ್ದರು. ಡಾ.ವಿಶ್ವನಾಥ ಬದಿಕಾನ, ಡಾ.ಕಿಶೋರ್ ಶೇಣಿ, ಭರತೇಶ್ ಅಲಸಂಡೆಮಜಲು ಅವರಂತಹ ಮಂಗಳೂರಿನ ಆಸಕ್ತರ ಬಳಗ ವಿಕಿಪೀಡಿಯಕ್ಕಾಗಿ ನಿರಂತರ ಕೆಲಸ ಮಾಡುತ್ತಲೇ ಬಂದಿದ್ದಾರೆ. ಈತನಕ ತುಳು ವಿಕಿಪೀಡಿಯಾದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಲೇಖನ, ಬರಹಗಳನ್ನು ಸೇರ್ಪಡೆ ಮಾಡಲಾಗಿದೆ. ವಿಕಿಪೀಡಿಯಾ ತಂಡದ ಕೆಲಸವು ತುಳು ಭಾಷೆಯನ್ನೀಗ ಗೂಗಲ್ ಇಂಜಿನ್ ಸ್ವೀಕರಿಸುವಲ್ಲಿ ಮಹತ್ತರ ಕೊಡುಗೆ ನೀಡಿದೆ. ಈ ಬಗ್ಗೆ ಭರತೇಶ್ ಅವರ ಅಭಿಪ್ರಾಯ ಕೇಳಿದಾಗ, ನಾವು ಗೂಗಲ್ ಸಂಸ್ಥೆಗೆ ಹಲವು ಬಾರಿ ಮೈಲ್ ಮಾಡಿದ್ದೇವೆ. ತುಳು ಭಾಷೆಯೂ ವಿಕಿಪೀಡಿಯಾದಲ್ಲಿದೆ ಎಂದು ಮನವರಿಕೆ ಮಾಡಿದ್ದೆವು. ಈಗ ಇತರ ಭಾಷೆಗಳ ಜೊತೆಗೆ ಸಮಾನ ಮಾನ್ಯತೆ ನೀಡಿದ್ದು ದೊಡ್ಡ ಹೆಜ್ಜೆ. ನಾವು ತುಳು ಭಾಷೆಯನ್ನು ಜಾಲತಾಣದಲ್ಲಿ ಬಳಸಿದಷ್ಟು ಅದು ಗೂಗಲ್ ಇಂಜಿನ್ ಗೆ ಹತ್ತಿರವಾಗುತ್ತದೆ. ತುಳು ವಿಕಿಪೀಡಿಯಾದಲ್ಲಿ ಯಾವುದೇ ವ್ಯಕ್ತಿಯೂ ಲೇಖನ, ಪದಗಳನ್ನು ಜೋಡಣೆ ಮಾಡಬಹುದು. ಜನರು ಹೆಚ್ಚಾಗಿ ಬಳಸಿದಷ್ಟು ಒಂದು ಭಾಷೆ ಗೂಗಲ್ ಸ್ನೇಹಿಯಾಗಲು ಸಾಧ್ಯ ಎಂದು ಹೇಳುತ್ತಾರೆ.
ತುಳು ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಪ್ರತಿಕ್ರಿಯೆ ನೀಡಿದ್ದು, ಗೂಗಲ್ ಟ್ರಾನ್ಸ್ ಲೇಟರ್ ನಲ್ಲಿ ತುಳು ಭಾಷೆ ಸೇರ್ಪಡೆಯಾಗಿರುವುದು ಜಾಗತಿಕವಾಗಿ ಸಂದ ಗೌರವವಾಗಿದೆ. ತುಳುವರು ಸಂಭ್ರಮ ಪಡುವ ದಿನ. ಗೂಗಲ್ ಇಂಜಿನ್ನಲ್ಲಿ ತುಳು ಭಾಷೆಯ ಶಬ್ದಗಳು ತಪ್ಪಾಗಿ ಉಲ್ಲೇಖವಾಗುವ ಸನ್ನಿವೇಶವೂ ಇರಬಹುದು. ಅಂತಹ ಸಂದರ್ಭದಲ್ಲಿ ಫೀಡ್ ಬ್ಯಾಕ್ ಕಾಲಂನಲ್ಲಿ ಸರಿಯಾದ ಶಬ್ದವನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದರೆ, ಗೂಗಲ್ ಅದನ್ನು ಮುಂದಕ್ಕೆ ಸರಿ ಮಾಡಿಕೊಳ್ಳುತ್ತದೆ. ಈ ಅಂಶವನ್ನು ತುಳುವರು ಸಮರ್ಪಕವಾಗಿ ಬಳಸಿಕೊಂಡರೆ, ತುಳುವರಿಗೂ ಹಾಗೂ ತುಳುವೇತರರಿಗೂ ಪ್ರಯೋಜನ ಆಗಲಿದೆ ಎಂದಿದ್ದಾರೆ.
Google Translate, a feature that has been helping millions of people communicate, has announced a new update. Google has said that it is using AI to expand the variety of languages it supports through the application. Backed by its PaLM 2 large language model, Google is now rolling out 110 new languages to Google Translate. The Alphabet Inc. company claims that this is its largest expansion ever.
20-07-25 08:35 pm
Bangalore Correspondent
ವಾಲ್ಮೀಕಿ ನಿಗಮ ಹಗರಣ ರೀತಿಯಲ್ಲೇ ಮತ್ತೊಂದು ಹಗರಣ ;...
20-07-25 07:55 pm
Dharmasthala SIT Case, Parameshwar: ಎಸ್ಐಟಿ ರ...
20-07-25 04:24 pm
Rcb, Bangalore: ಪೊಲೀಸರು 'ಆರ್ಸಿಬಿ ಸೇವಕರು' ಎಂಬ...
19-07-25 03:05 pm
ಎಲ್ಲ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ತಲಾ 50 ಕೋಟಿ ಅ...
18-07-25 10:59 pm
20-07-25 04:47 pm
HK News Desk
Kerala Nurse Yemen; ನರ್ಸ್ ನಿಮಿಷಾ ಉಳಿವಿಗೆ ಗಲ್ಫ...
16-07-25 09:58 pm
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
21-07-25 04:03 am
Mangaluru Correspondent
Mangalore Bantwal Rural PSI, Suicide: ಬಂಟ್ವಾಳ...
20-07-25 10:35 pm
Dharmasthala Case, SIT, Pronab Mohanty: ಧರ್ಮಸ...
20-07-25 03:06 pm
MRPL, MP Brijesh Chowta, Mangalore: MRPL ಹಸಿರ...
19-07-25 10:01 pm
Mangalore, Derlakatte Raid: ನಿಯಮ ಉಲ್ಲಂಘಿಸಿ ಕಾ...
19-07-25 07:18 pm
20-07-25 08:52 pm
HK News Desk
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm