ಬ್ರೇಕಿಂಗ್ ನ್ಯೂಸ್
27-06-24 10:57 am Mangalore Correspondent ಕರಾವಳಿ
ಮಂಗಳೂರು, ಜೂನ್ 27: ಕಡಿದು ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಇಬ್ಬರು ರಿಕ್ಷಾ ಚಾಲಕರು ದುರಂತ ಸಾವನ್ನಪ್ಪಿದ ಘಟನೆ ನಗರದ ಪಾಂಡೇಶ್ವರದ ರೊಸಾರಿಯೋ ಸ್ಕೂಲ್ ಬಳಿ ನಡೆದಿದೆ.
ಪುತ್ತೂರು ರಾಮಕುಂಜ ನಿವಾಸಿ ದೇವರಾಜ್ ಗೌಡ(46), ಹಾಸನ ಜಿಲ್ಲೆಯ ಆಲೂರು ಮೂಲದ ರಾಜು (50) ಮೃತರು. ಇವರು ರೊಸಾರಿಯೋ ಸ್ಕೂಲ್ ಬಳಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ನಿನ್ನೆ ರಾತ್ರಿ ಇವರ ಮನೆ ಬಳಿಯಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದಿತ್ತು. ಎಂದಿನಂತೆ ನಸುಕಿನಲ್ಲಿ ನಾಲ್ಕು ಗಂಟೆ ವೇಳೆಗೆ ಚಾಲಕ ರಾಜು ತನ್ನ ಆಟೋ ತೊಳೆಯಲೆಂದು ಹೊರಗೆ ಬಂದಿದ್ದು ಶಾಕ್ ಆಗಿದ್ದಾರೆ. ಹೊರಗೆ ಬಿದ್ದುಕೊಂಡಿದ್ದ ವಿದ್ಯುತ್ ತಂತಿಯನ್ನು ನೋಡದೆ ತುಳಿದು ಶಾಕ್ ಆಗಿತ್ತು. ಇದನ್ನು ತಿಳಿದ ಮನೆಯ ಒಳಗಿದ್ದ ಇನ್ನೊಬ್ಬ ಗೆಳೆಯ ದೇವರಾಜು ಓಡಿ ಬಂದಿದ್ದು ಅಲ್ಲಿದ್ದ ಗೋಣಿ ಚೀಲದಲ್ಲಿ ರಾಜು ಅವರನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಮಳೆ ಬರುತ್ತಿದ್ದುದರಿಂದ ಅವರಿಗೂ ತೀವ್ರ ಶಾಕ್ ಆಗಿದ್ದು ನೆಲಕ್ಕೆ ಉರುಳಿದ್ದಾರೆ.


ಇಬ್ಬರೂ ನೆಲಕ್ಕೆ ಬಿದ್ದು ಸ್ಥಳದಲ್ಲೇ ಸಾವು ಕಂಡಿದ್ದಾರೆ. ನಸುಕಿನಲ್ಲಿ 4 ಗಂಟೆಗೆ ಘಟನೆ ನಡೆದಿದ್ದು ಇಬ್ಬರು ಆಟೋ ಚಾಲಕರು ಸಾವನ್ನಪ್ಪಿದ ಘಟನೆ ಬೆಳಗಾದ ಬಳಿಕವೇ ಸ್ಥಳೀಯರಿಗೆ ಗೊತ್ತಾಗಿದೆ.
ವಿದ್ಯುತ್ ಕಂಬ ರಾತ್ರಿ 9 ಗಂಟೆಗೆ ಮಳೆಗೆ ಉರುಳಿ ಬಿದ್ದಿದ್ದು ಅದರಲ್ಲಿನ ತಂತಿಯಲ್ಲಿ ವಿದ್ಯುತ್ ಪ್ರವಹಿಸುವುದು ನಿಂತಿರಲಿಲ್ಲ. ಹೀಗಾಗಿ ಬೆಳಗ್ಗಿನ ವೇಳೆಗೆ ದುರಂತ ಸಂಭವಿಸಿದೆ. ಸಿಸಿಟಿವಿಯಲ್ಲಿ ಪರಿಶೀಲನೆ ನಡೆಸಿದಾಗ, ರಾತ್ರಿ ವೇಳೆಯೇ ವಿದ್ಯುತ್ ಕಂಬ ಬಿದ್ದಿರುವುದು ಪತ್ತೆಯಾಗಿದೆ. ಹೀಗಾಗಿ ಮೆಸ್ಕಾಂ ಸಿಬಂದಿ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಪಾಂಡೇಶ್ವರ ಪೊಲೀಸರು 304 ಎ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.
In a tragic incident near Rosario church on Wednesday night, two auto-rickshaw drivers were electrocuted when an electricity wire snapped and one among them came in contact with it. The other driver died while attempting to rescue his friend. The deceased have been identified as Devaraj Gowda (46) from Puttur and Raju Paalya (50) from Hassan. Both were residing in a rented room near Rosario church.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm