ಬ್ರೇಕಿಂಗ್ ನ್ಯೂಸ್
25-06-24 11:49 am Mangaluru Correspondent ಕರಾವಳಿ
ಉಳ್ಳಾಲ, ಜೂ.25: ರಸ್ತೆ ಬದಿಯಲ್ಲಿ ಯಾವುದೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡು ನರಳುತ್ತಿದ್ದ ಬೀದಿ ಶ್ವಾನವೊಂದನ್ನ ಕಂಡು ಮರುಗಿದ ಮಹಿಳೆಯೋರ್ವರು ಸಮಾಜ ಸೇವಕ ಉದಯ ಗಟ್ಟಿಯವರ ಮುಖೇನ ಸ್ವಂತ ಖರ್ಚಲ್ಲಿ ಶ್ವಾನವನ್ನ ಮಂಗಳೂರಿನ ಶಕ್ತಿನಗರದ ಆನಿಮಲ್ ಕೇರ್ ಟ್ರಸ್ಟ್ ಗೆ ರವಾನಿಸಿದ್ದು, ವೈದ್ಯರ ಚಿಕಿತ್ಸೆಯಿಂದ ಶ್ವಾನವು ಇದೀಗ ಚೇತರಿಸಿಕೊಂಡಿದೆ.
ಸೋಮೇಶ್ವರ ಗ್ರಾಮದ ಪಿಲಾರು ಪಂಜಂದಾಯ ದೈವಸ್ಥಾನದ ಬಳಿಯ ನಿವಾಸಿ ಪ್ರಿಯಾ ಹರಿಕುಮಾರ್ ಶ್ವಾನವನ್ನ ರಕ್ಷಿಸಿದ ಮಹಿಳೆ. ಅವರು ಆದಿತ್ಯವಾರ ಮಧ್ಯಾಹ್ನದ ವೇಳೆ ದ್ವಿಚಕ್ರ ವಾಹನದಲ್ಲಿ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆ ದಾರಿಯಲ್ಲಿ ಸಾಗುತ್ತಿದ್ದಾಗ ರಸ್ತೆ ಬದಿಯಲ್ಲಿ ಬೀದಿ ಶ್ವಾನವೊಂದು ಅಪಘಾತದಿಂದ ಗಾಯಗೊಂಡು ನರಳಾಟ ನಡೆಸುತ್ತಿರುವುದನ್ನ ಕಂಡು ಮರುಗಿದ್ದಾರೆ. ಪ್ರಿಯಾ ಅವರು ತಕ್ಷಣ ಮಂಗಳೂರಿನ ಆನಿಮಲ್ ಕೇರ್ ಟ್ರಸ್ಟ್ ಗೆ ಕರೆ ಮಾಡಿದ್ದು ಕರೆಯನ್ನ ಯಾರೂ ಸ್ವೀಕರಿಸಿರಲಿಲ್ಲ. ಒಂಟಿಯಾಗಿದ್ದ ಪ್ರಿಯಾ ಅಸಹಾಯಕ ಸ್ಥಿತಿಯಿಂದ ಮನೆಗೆ ಮರಳಿದ್ದರು. ಸಂಜೆ ವೇಳೆ ಧಾರಾಕಾರ ಮಳೆ ಸುರಿದಿದ್ದು ಶ್ವಾನವನ್ನ ನೆನೆದು ಮರುಗಿದ ಮಹಿಳೆ ಮತ್ತೆ ದೇರಳಕಟ್ಟೆಗೆ ತೆರಳಿದ್ದಾರೆ. ಬಿದ್ದ ಜಾಗದಲ್ಲೇ ಜಡಿಮಳೆಗೆ ನೆನೆಯುತ್ತಿದ್ದ ಶ್ವಾನವನ್ನ ಸ್ಥಳೀಯರ ಸಹಕಾರದಿಂದ ಪ್ಲಾಸ್ಟಿಕ್ ಹೊದಿಸಿ ಮಳೆಯಿಂದ ರಕ್ಷಣೆ ನೀಡಿ ಉಪಚರಿಸಿದ್ದಾರೆ. ಮತ್ತೊಮ್ಮೆ ಅವರು ಆನಿಮಲ್ ಕೇರ್ ಟ್ರಸ್ಟ್ ಗೆ ಕರೆ ಮಾಡಿದ್ದು ಕರೆ ಸ್ವೀಕರಿಸಿದ ಸಿಬ್ಬಂದಿ ಭಾನುವಾರ ಆಗಿರುವುದರಿಂದ ವಾಹನ ಚಲಾಯಿಸಲು ಚಾಲಕರಿಲ್ಲ. ಶ್ವಾನವನ್ನ ಮಂಗಳೂರಿಗೆ ತಂದರೆ ಸೂಕ್ತ ಚಿಕಿತ್ಸೆ ನೀಡುವುದಾಗಿ ಹೇಳಿದ್ದಾರೆ.

ಸಕಾಲದಲ್ಲಿ ಸಹಾಯಕ್ಕೆ ಧಾವಿಸಿದ ಉದಯ ಗಟ್ಟಿ
ಶ್ವಾನವನ್ನ ಹೇಗೆ ರಕ್ಷಿಸುವುದೆಂದು ಪ್ರಿಯಾ ಅವರಿಗೆ ದಿಕ್ಕು ತೋಚದೆ ಇದ್ದಾಗ ಸಮಾಜ ಸೇವಕ ಉದಯ ಗಟ್ಟಿ ಪಿಲಾರು ಅವರಿಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಉದಯ್ ಗಟ್ಟಿ ಸುರಿಯುತ್ತಿರುವ ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ಗಾಯಗೊಂಡಿದ್ದ ಶ್ವಾನವನ್ನು ಆಟೋ ರಿಕ್ಷಾದಲ್ಲಿ ಹಾಕಿ ಶಕ್ತಿನಗರದ ಆನಿಮಲ್ ಕೇರ್ ಟ್ರಸ್ಟ್ ಗೆ ರವಾನಿಸಿದ್ದಾರೆ. ಅನಿಮಲ್ ಕೇರ್ ವೈದ್ಯರ ಚಿಕಿತ್ಸೆಯಿಂದ ಇದೀಗ ಶ್ವಾನವು ಚೇತರಿಸಿಕೊಂಡಿದ್ದು ಅನ್ನಾಹಾರ ಸೇವಿಸುತ್ತಿದೆ. ಮೂಕ ಪ್ರಾಣಿಯ ವೇದನೆಗೆ ಮರುಗಿದ ಮಹಿಳೆಯ ಕಾಳಜಿಗೆ ಸಮಾಜ ಸೇವಕ ಉದಯ ಗಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನನಗೆ ಮೂಕ ಪ್ರಾಣಿಗಳೆಂದರೆ ಬಹಳ ಇಷ್ಟ. ಅದರಲ್ಲೂ ಶ್ವಾನಗಳೆಂದರೆ ತುಂಬಾ ಪ್ರೀತಿ. ಈ ಹಿಂದೆನೂ ಗಾಯಗೊಂಡಿರುವ ಅನಾಥ ಪ್ರಾಣಿಗಳಿಗೆ ಅನಿಮಲ್ ಕೇರ್ ಟ್ರಸ್ಟ್ ನವರಿಂದಲೇ ಚಿಕಿತ್ಸೆ ಕೊಡಿಸಿದ್ದೇನೆ. ಸಾರ್ವಜನಿಕ ಸ್ಥಳಗಳಲ್ಲಿ ಕೆಲವರ ಮನೆ ಮುಂದುಗಡೆಯೇ ನಾಯಿ ಇತರ ಪ್ರಾಣಿಗಳು ಸತ್ತರೆ ಮೃತದೇಹದ ವಿಲೇವಾರಿಯನ್ನು ಯಾರೂ ನಡೆಸಲ್ಲ. ಇಂತಹ ಅನೇಕ ಸಂದರ್ಭಗಳಲ್ಲಿ ಸಮಾಜ ಸೇವಕರಾದ ಉದಯ ಗಟ್ಟಿ ಅವರಿಂದಲೇ ಅನಾಥ ಪ್ರಾಣಿಗಳ ಮೃತದೇಹಗಳನ್ನ ವಿಲೇವಾರಿ ಮಾಡಿಸಿದ್ದೇನೆ ಎಂದು ಪ್ರಿಯಾ ಹರಿಕುಮಾರ್ ಹೇಳಿದ್ದಾರೆ.
Mangalore derlakatte street dog suffering due to an accident rushed to animal care in shaktinagar by dog lovers. Priya Harikumar, a resident near Pilaru Panjandaya deity of Someswara village, was the woman who rescued the dog. she was traveling on his two-wheeler on the way to Yenepoya Hospital in Deralkatte on Sunday afternoon when he saw a stray dog suffering from an accident on the side of the road.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm