ಬ್ರೇಕಿಂಗ್ ನ್ಯೂಸ್
23-06-24 11:01 pm Mangalore Correspondent ಕರಾವಳಿ
ಮಂಗಳೂರು, ಜೂನ್ 23: ಬೈಕಂಪಾಡಿ ಕೈಗಾರಿಕಾ ಸಂಕೀರ್ಣದ ಪತಂಜಲಿ ಫುಡ್ಸ್ (ರುಚಿಗೋಲ್ಡ್) ಕೈಗಾರಿಕಾ ಘಟಕದ ಒಳಭಾಗದಿಂದ ಫಲ್ಗುಣಿ ನದಿಗೆ ತ್ಯಾಜ್ಯವನ್ನು ಬಿಡಲಾಗುತ್ತಿದ್ದು, ಮಳೆಗಾಲದಲ್ಲಿಯೇ ಫಲ್ಗುಣಿ ನದಿ ನೀರು ಮಲಿನಗೊಳ್ಳುತ್ತಿದೆ. ಕಳೆದ ಒಂದು ವಾರದಿಂದ ಸಂಸ್ಕರಿಸದ ತ್ಯಾಜ್ಯ ನೀರು ನದಿಯ ಒಡಲು ಸೇರುತ್ತಿದ್ದು, ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮುನೀರ್ ಕಾಟಿಪಳ್ಳ ನೇತೃತ್ವದ ಹೋರಾಟ ಸಮಿತಿ ಸ್ಥಳಕ್ಕೆ ಭೇಟಿ ನೀಡಿದ್ದು, ಕೈಗಾರಿಕಾ ತ್ಯಾಜ್ಯವನ್ನು ನೇರವಾಗಿ ನದಿಗೆ ಬಿಡುತ್ತಿರುವುದನ್ನು ವಿರೋಧಿಸಿ ಕಂಪನಿಯ ಸಿಬಂದಿಯನ್ನು ತರಾಟೆಗೆತ್ತಿಕೊಂಡಿದೆ. ಹೋರಾಟ ಸಮಿತಿಯ ಸದಸ್ಯರು ಪತಂಜಲಿ ಸಂಸ್ಥೆಯ ಒಳಭಾಗಕ್ಕೆ ತೆರಳಿದಾಗ, ತ್ಯಾಜ್ಯವನ್ನು ನೇರವಾಗಿ ತೋಕೂರು ಹಳ್ಳಕ್ಕೆ ಬಿಡುತ್ತಿರುವುದು ಪತ್ತೆಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಪರಿಸರ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೂ ದೂರು ನೀಡಿದ್ದರೂ, ನಿರ್ಲಕ್ಷ್ಯ ವಹಿಸಿದ್ದರು. ಸತತ ದೂರಿನ ಬಳಿಕ ಭಾನುವಾರ ಸಂಜೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಡಾ. ಮಹೇಶ್ವರಿ ಮತ್ತು ತಂಡವು ತ್ಯಾಜ್ಯ ಹರಿಯುತ್ತಿರುವ ಜಾಗಕ್ಕೆ ಭೇಟಿ ನೀಡಿದೆ.
ಪತಂಜಲಿ ಫುಡ್ಸ್ ಸಂಸ್ಥೆಯ ಕೈಗಾರಿಕಾ ಘಟಕದ ಒಳಭಾಗಕ್ಕೆ ತೆರಳಿದ ಪರಿಸರ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಹೋರಾಟ ಸಮಿತಿಯ ಸದಸ್ಯರನ್ನೂ ಕರೆದೊಯ್ದಿದ್ದು, ಒಳಭಾಗದಲ್ಲಿಯೇ ಕೈಗಾರಿಕೆಯ ಮಾಲಿನ್ಯವನ್ನು ನೇರವಾಗಿ ಸಂಸ್ಕರಿಸದೆ ಮಳೆನೀರಿನ ಜೊತೆಗೆ ಚರಂಡಿಗೆ ಬಿಡುತ್ತಿರುವುದು ಕಂಡುಬಂದಿದೆ. ಕೈಗಾರಿಕಾ ತ್ಯಾಜ್ಯವನ್ನು ಶುದ್ಧೀಕರಿಸದೆ ಹೊರಗೆ ಬಿಡುತ್ತಿರುವುದು ಪತ್ತೆಯಾಗಿದೆ ಎಂದು ಹೋರಾಟ ಸಮಿತಿಯ ಪ್ರಮುಖರಾದ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ವರ್ಷದ ಹಿಂದೆಯೂ ಬಾಬಾ ರಾಮದೇವ್ ಅವರಿಗೆ ಸೇರಿದ ಪತಂಜಲಿ ಫುಡ್ಸ್ ಸಂಸ್ಥೆಯ ತ್ಯಾಜ್ಯವನ್ನು ನೇರವಾಗಿ ನದಿಗೆ ಬಿಡುತ್ತಿರುವುದು ಪತ್ತೆಯಾಗಿತ್ತು. ಆಗ ಹೊಸ ಶುದ್ಧೀಕರಣ ಘಟಕ ಮೂರು ತಿಂಗಳಲ್ಲಿ ಸಿದ್ಧಪಡಿಸಿ, ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಮರು ಬಳಕೆ ಮಾಡುವುದಾಗಿ ಹೇಳಿದ್ದರೂ ಕಂಪನಿ ತನ್ನ ಮಾತನ್ನು ಈಡೇರಿಸಿಲ್ಲ. ಈಗ ಮಳೆಗಾಲದಲ್ಲಿ ಹರಿಯುವ ನೀರಿನ ಜೊತೆಗೆ ಕಪ್ಪಗಿನ ತ್ಯಾಜ್ಯ ಹೊರಗೆ ಬರುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ರೀತಿ ತ್ಯಾಜ್ಯ ನದಿಗೆ ಸೇರಿದರೆ, ಸ್ಥಳೀಯ ಅಂತರ್ಜಲಕ್ಕೂ ಹಾನಿ. ಜೊತೆಗೆ, ನದಿಗಳಲ್ಲಿ ಮೀನುಗಳ ನಾಶಕ್ಕೂ ಕಾರಣವಾಗಲಿದೆ. ಪರಿಸರ ನಿಯಂತ್ರಣ ಮಂಡಳಿಯವರು ಪ್ರತಿ ಬಾರಿ ಪರಿಶೀಲನೆಯ ನಾಟಕ ಮಾಡುತ್ತಿದ್ದು, ಜನರ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ.
Waste is being discharged into the palguni River from inside the industrial unit of Patanjali Foods (Ruchigold) of Baikampadi Industrial Complex, and the water of the palguni River is being polluted during the rainy season itself.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm