ಬ್ರೇಕಿಂಗ್ ನ್ಯೂಸ್
14-06-24 11:02 pm Mangalore Correspondent ಕರಾವಳಿ
ಮಂಗಳೂರು, ಜೂನ್ 14: ಮಂಗಳೂರು ವಿಧಾನಸಭೆ ಕ್ಷೇತ್ರದ ಜನರಿಗೆ 24 ಗಂಟೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಕೊಣಾಜೆಯಲ್ಲಿ ನೀರು ಶುದ್ಧೀಕರಣ ಘಟಕದ ನಿರ್ಮಾಣ ಆಗಿದ್ದು, ಮೊದಲ ಹಂತ ಪೂರ್ಣಗೊಂಡಿದೆ. ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದು ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಶಾಸಕ ಮತ್ತು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಭವಿಷ್ಯದಲ್ಲಿ ಯಾರು ಶಾಸಕರು ಬಂದರೂ ಕುಡಿಯುವ ನೀರಿಗೆ ತೊಂದರೆ ಆಗಬಾರದು ಎನ್ನುವ ದೃಷ್ಟಿಯಿಂದ ಈ ಯೋಜನೆ ಮಾಡಿದ್ದೇವೆ. ಮೊದಲ ಹಂತದಲ್ಲಿ 249 ಕೋಟಿ ವೆಚ್ಚ ಆಗಿದೆ. ಹಿಂದೆ ನಗರಾಭಿವೃದ್ಧಿ ಸಚಿವನಾಗಿದ್ದಾಗ ಯೋಜನೆ ತರಲಾಗಿತ್ತು. ಇದೀಗ ಕಾರ್ಯಗತ ಆಗುತ್ತಿದ್ದು, ಸಜಿಪದಲ್ಲಿ ಜಾಕ್ ವೆಲ್ ನಿರ್ಮಾಣ ಆಗಿದೆ. ಕೋಣಾಜೆಯ ಪಜೀರಿನಲ್ಲಿ ಟ್ರೀಟ್ಮೆಂಟ್ ಪ್ಲಾಂಟ್ ನಿರ್ಮಾಣ ಬಹುತೇಕ ಕೆಲಸ ಆಗಿದೆ. ಎರಡನೇ ಹಂತದ ಕಾಮಗಾರಿಗೆ ಮತ್ತೆ 386 ಕೋಟಿ ವೆಚ್ಚದಲ್ಲಿ ಯೋಜನೆ ಹಾಕಲಾಗಿದೆ ಎಂದು ತಿಳಿಸಿದರು.
ನರಿಂಗಾನ, ಉಳ್ಳಾಲ, ಸೋಮೇಶ್ವರದಲ್ಲಿ ಎಲ್ಲ ಕಡೆಗೂ ನೀರಿನ ಪೈಪ್ ಲೈನ್ ಆಗಲಿದೆ. ಸೋಮೇಶ್ವರದಲ್ಲಿ ನೀರಿನ ಪೈಪ್ ಲೈನ್ ಹಾಕಲಾಗಿದೆ. ಉಳ್ಳಾಲದಲ್ಲಿ ಸಿಂಗಲ್ ಟ್ಯಾಂಕ್ ನಿರ್ಮಾಣ ಕೆಲಸ ಆಗಿದೆ. ಪೈಪ್ ಲೈನ್ ಸೇರಿದಂತೆ ಉಳಿದಿರುವ ಕೆಲಸಗಳಿಗಾಗಿ 386 ಕೋಟಿ ಮೊತ್ತದ ಯೋಜನೆಗೆ ಕ್ಲಿಯರೆನ್ಸ್ ಸಿಕ್ಕಿದ್ದು, ಹಣ ಬಿಡುಗಡೆ ಆಗಿದೆ. ಮುಖ್ಯಮಂತ್ರಿಯವರು ಮೊದಲ ಹಂತದ ಉದ್ಘಾಟನೆ ಮತ್ತು ಎರಡನೇ ಹಂತಕ್ಕೆ ಶಿಲಾನ್ಯಾಸ ಮಾಡಲಿದ್ದಾರೆ. ಇದಲ್ಲದೆ, ತೊಕ್ಕೊಟ್ಟಿನಿಂದ ಮುಡಿಪು ಸಂಪರ್ಕ ರಸ್ತೆಯನ್ನು ಆರು ಪಥದ ರಸ್ತೆಯನ್ನಾಗಿ ಮಾಡಲಾಗುತ್ತಿದ್ದು, ಇದಕ್ಕಾಗಿ 25 ಕೋಟಿ ಬಿಡುಗಡೆ ಆಗಿದೆ. ಗ್ರಾಮೀಣ ಮಟ್ಟದ ರಸ್ತೆ ಅಭಿವೃದ್ಧಿ, ಧಾರ್ಮಿಕ ಕೇಂದ್ರಗಳು, ಶಿಕ್ಷಣ, ವಕ್ಫ್ ಇನ್ನಿತರ ಉದ್ದೇಶಕ್ಕೆ ಮತ್ತೊಂದು 500 ಕೋಟಿ ಮೊತ್ತದ ಯೋಜನೆ ತಯಾರಿಸಿದ್ದು, ಅನುದಾನ ಬಿಡುಗಡೆಯಾಗಲಿದೆ.
ಕಡಲ್ಕೊರೆತಕ್ಕೆ ಪ್ರತ್ಯೇಕ ಯೋಜನೆ
ಉಳ್ಳಾಲ, ಬಟ್ಟಪ್ಪಾಡಿ ಕಡಲ್ಕೊರೆತಕ್ಕೆ ಎನ್ಐಟಿಕೆ ತಜ್ಞರು ಅಧ್ಯಯನ ಮಾಡಿ ರಿಪೋರ್ಟ್ ಕೊಟ್ಟಿದ್ದು, ಅದರಂತೆ ಯೋಜನೆ ತಯಾರಿಸಿದ್ದೇವೆ. ಪೋರ್ಟ್ ಇಲಾಖೆಯಿಂದ ನೀಡಿರುವ ಪ್ರಸ್ತಾವನೆಗೆ ಹಣಕಾಸು ಇಲಾಖೆ ಮಂಜೂರಾತಿ ನೀಡಿದೆ. ಕಡಲ್ಕೊರೆತ ಸಮಸ್ಯೆ ಬೇರೆ ಬೇರೆ ಜಾಗದಲ್ಲಿ ಪ್ರತ್ಯೇಕ ಇರುತ್ತದೆ. ಪಣಂಬೂರಿನಲ್ಲಿ ಇದ್ದ ಹಾಗೆ ಉಳ್ಳಾಲದಲ್ಲಿ ಇರುವುದಿಲ್ಲ. ಬೆಂಗ್ರೆಯಲ್ಲಿರೋದು ಸಸಿಹಿತ್ಲಿನಲ್ಲಿ ಇರಲ್ಲ. ಇಲ್ಲಿನ ಕಡಲ್ಕೊರೆತಕ್ಕೆ ಯಾವ ಫ್ರೆಂಚ್ ಟೆಕ್ನಾಲಜಿ ಯಾವುದೂ ಆಗಲ್ಲ. ಮುಂಬೈನಲ್ಲಿಯೂ ಕಾಮಗಾರಿ ನಡೆಸಿದ ಬಳಿಕ ಅದನ್ನು ನಿರ್ವಹಣೆ ಮಾಡುವುದೇ ದೊಡ್ಡ ಸವಾಲಿದೆ. ಅದಕ್ಕಿಂತ ಹೆಚ್ಚು ಖರ್ಚು ಬರುತ್ತದೆ. ಕಾಂಡ್ಲಾ ವನ ದೊಡ್ಡ ಮಾದರಿಯ ಕಡಲ್ಕೊರೆತ, ಅಲೆಗಳನ್ನು ಎದುರಿಸಲು ಆಗೋದಿಲ್ಲ ಎಂದರು.
ಬಾಂಬೆ ಟು ಕೊಚ್ಚಿ ಕ್ರೂಸ್ ಟೂರಿಸಂ ಇದೆ. ಅದರ ನಿಲುಗಡೆಯನ್ನು ಸೋಮೇಶ್ವರದಲ್ಲಿ ಮಾಡಬೇಕೆಂಬ ಯೋಜನೆ ಇದೆ. ಇದಕ್ಕಾಗಿ ಉಳ್ಳಾಲದಲ್ಲಿ ಟೂರಿಸಂ ಉದ್ದೇಶಕ್ಕೆ ಬಂದರು ಮಾಡಿದರೆ, ಪ್ರವಾಸೋದ್ಯಮ ಬೆಳೆಯುತ್ತದೆ. ಕ್ರೂಸ್, ಪ್ಯಾಸೆಂಜರ್ ಹಡಗುಗಳು ಉಳ್ಳಾಲಕ್ಕೆ ಬಂದು ಮಂಗಳೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಧ್ಯವಾಗುತ್ತದೆ. ಅದರ ಬಗ್ಗೆ ಚಿಂತನೆ ಮಾಡಿದ್ದೇವೆ ಎಂದರು.
The speaker of the Karnataka Legislative Assembly, U T Khader, discussed new projects focused on drinking water facilities, electrification, and road expansion in the Mangaluru (Ullal) constituency.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm