ಬ್ರೇಕಿಂಗ್ ನ್ಯೂಸ್
12-06-24 10:55 pm Mangalore Correspondent ಕರಾವಳಿ
ಮಂಗಳೂರು, ಜೂನ್ 12: ಕರಾವಳಿಯ ಮಸೀದಿಗಳಲ್ಲಿ ಶಸ್ತ್ರಾಸ್ತ್ರ ಇಟ್ಟುಕೊಂಡು ಮತಾಂಧ ಕೆಲಸ ಮಾಡುತ್ತಿದ್ದಾರೆ ಅಂತ ನಾವು ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದೇವೆ. ಈಗಲೂ ಹೇಳುತ್ತೇವೆ. ಎಲ್ಲ ಮಸೀದಿಗಳನ್ನು ತಪಾಸಣೆ ನಡೆಸಿದರೆ, ಒಳಗೇನು ಇಟ್ಕೊಂಡಿದ್ದಾರೆ ಅಂತ ಹೊರಬರುತ್ತದೆ. ಮಸೀದಿ ಎದುರಲ್ಲಿ ಮೆರವಣಿಗೆ ಹೋದ ಮಾತ್ರಕ್ಕೆ ಚೂರಿ ಇರಿಯುತ್ತಾರಂದ್ರೆ, ಇವರು ಒಳಗೆ ಶಸ್ತ್ರಾಸ್ತ್ರ ಇಟ್ಕೊಂಡಿರ್ತಾರೆ ಅಂತ ಅರ್ಥ ಅಲ್ಲವೇ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರಶ್ನಿಸಿದ್ದಾರೆ.
ಬೋಳಿಯಾರು ಚೂರಿ ಇರಿತಕ್ಕೊಳಗಾದ ಬಿಜೆಪಿ ಕಾರ್ಯಕರ್ತರನ್ನು ಭೇಟಿಯಾಗಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಹರೀಶ್ ಪೂಂಜ, ಕಳೆದ ಬಾರಿ ಸಿದ್ದರಾಮಯ್ಯ ಸರಕಾರ ಇದ್ದಾಗ 24 ಹಿಂದುಗಳ ಹತ್ಯೆಯಾಗಿತ್ತು. ಈ ಬಾರಿ ಸಿದ್ದರಾಮಯ್ಯ ಎಷ್ಟು ಹತ್ಯೆ ಮಾಡಲು ಹೊರಟಿದ್ದಾರೆ ಅಂತ ಚಿಂತೆಯಾಗುತ್ತದೆ. ಈಗಲೇ ಅಶಾಂತಿ ಮೂಡಿದೆ, ಕೋಮು ಶಕ್ತಿಗಳು ಕಾನೂನು ಕೈಗೆ ತೆಗೆದುಕೊಂಡಿರುವುದು ಕಾಣುತ್ತದೆ.
ಬೋಳಿಯಾರಿನಲ್ಲಿ ಹತ್ಯೆಗೆ ಯತ್ನಿಸಿದವರೆಲ್ಲ ಇಲ್ಲಿನ ಶಾಸಕ ಯುಟಿ ಖಾದರ್ ಅವರ ಆಪ್ತ ವಲಯದಲ್ಲಿದ್ದವರು. ಅಲ್ಲ ಹೇಳಲಿ ನೋಡೋಣ ಖಾದರ್. ಉಸ್ತುವಾರಿ ಸಚಿವರು ಆಸ್ಪತ್ರೆಗೆ ಬಂದಾಗ ಕ್ಷೇತ್ರದ ಶಾಸಕರಾಗಿ ಅವರನ್ನು ತನ್ನ ಕ್ಷೇತ್ರದಲ್ಲಿ ಇರಿತಕ್ಕೊಳಗಾದ ಯುವಕರ ಬಳಿಗೊಯ್ದು ತೋರಿಸುವುದು ಜವಾಬ್ದಾರಿ ಅಲ್ಲವೇ. ಯಾಕೆ ಇವರಿಗೆ ಮುಸ್ಲಿಮರ ಭಯವೇ, ನೀವು ಮುಸ್ಲಿಮರಿಗೆ ಮಾತ್ರ ಶಾಸಕನಾ. ನೀವು ಯಾರ ಪರ ವಹಿಸ್ತೀರಿ ಎಂದು ಸ್ಪಷ್ಟನೆ ನೀಡಬೇಕು ಎಂದು ಖಾದರ್ ಅವರಿಗೆ ಆಗ್ರಹ ಮಾಡಿದ್ದಾರೆ.
ನೀವು ಭಾರತ್ ಮಾತಾಕೀ ಜೈ ಎಂದರೆ ಕೇಸು ಹಾಕುತ್ತೀರಿ ಎಂದಾದರೆ, ನಾವು ಯಾವ ದೇಶದಲ್ಲಿದ್ದೇವೆ ಎಂದು ಕೇಳಬೇಕಾಗುತ್ತದೆ. ನಮ್ಮ ದೇಶಕ್ಕೆ ಜೈಕಾರ ಹಾಕದೆ ಯಾರಿಗೆ ಹಾಕಬೇಕು ಸ್ವಾಮಿ. ಯುಟಿ ಖಾದರ್, ಜಿಲ್ಲಾಧಿಕಾರಿ ಅವರಿಗೆ ಆಗ್ರಹ ಮಾಡುತ್ತೀನಿ, ಕೂಡಲೇ ನೀವು ಹಾಕಿರುವ ಕೇಸನ್ನು ಹಿಂಪಡೆಯಬೇಕು, ಕೂಲಿ ಕೆಲಸ ಮಾಡುವವರು ಆಸ್ಪತ್ರೆಯಲ್ಲಿ ಮಲಗುವ ಸ್ಥಿತಿಯಾಗಿದೆ, ಆಸ್ಪತ್ರೆ ವೆಚ್ಚವನ್ನು ಭರಿಸಲು ಜಿಲ್ಲಾಧಿಕಾರಿ ವ್ಯವಸ್ಥೆ ಮಾಡಬೇಕು. ದನ ಕಳ್ಳತನ ಮಾಡಿದವರಿಗೆ ಪರಿಹಾರ ಮಾಡ್ತೀರಾದ್ರೆ ಚೂರಿ ಇರಿತಕ್ಕೊಳಗಾದವರಿಗೂ ಪರಿಹಾರ ನೀಡಬೇಕು ಎಂದು ಆಗ್ರಹ ಮಾಡುತ್ತೇವೆ. ಈ ದೇಶಕ್ಕೆ ಬದ್ಧತೆ ಇಲ್ಲದವರ ಮೇಲೆ ಪಾಕಿಸ್ತಾನ ಕುನ್ನಿಗಳು ಅನ್ನೋದಲ್ಲದೆ ಬೇರೇನು ಹೇಳಬೇಕು. ಅಷ್ಟಕ್ಕೇ ನೀವು ಎಫ್ಐಆರ್ ಮಾಡ್ತೀರಂದ್ರೆ ಅದನ್ನು ನಾವು ಸಹಿಸಿಕೊಳ್ಳಲ್ಲ ಎಂದು ಹೇಳಿದರು.
Belthangady MLA Harish poonja makes controversy statement on Boliyar Stabbing case. Every mosques have kept weapons and trying to disturb communial harmony. Every mosque should be examined by police he slammed.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm