ಬ್ರೇಕಿಂಗ್ ನ್ಯೂಸ್
12-06-24 10:43 pm Mangalore Correspondent ಕರಾವಳಿ
ಮಂಗಳೂರು, ಜೂನ್ 12: ಭಾರತ್ ಮಾತಾ ಕೀ ಜೈ ಅಂದ್ರೆ ಚಾಕು ಚುಚ್ಚಬೇಕಿತ್ತಾ.. ಪಾಕಿಸ್ತಾನದ ಕುನ್ನಿಗಳು ಅಂದ್ರೆ ನಿಮಗೆ ಯಾಕೆ ಕೋಪ ಕಮಿಷನರ್ ಅವ್ರೇ.. ಆ ತರ ಹೇಳಿದ್ದಾರೆ ಅಂದ್ರೆ, ಅದನ್ನೂ ವಿಡಿಯೋ ಇದ್ರೆ ಬಿಡುಗಡೆ ಮಾಡಿ.. ಅದನ್ನು ಯಾಕೆ ಇಟ್ಟುಕೊಂಡಿದ್ದೀರಿ. ಅಮಾಯಕ ಕಾರ್ಯಕರ್ತರ ಮೇಲೆ ಸುಮ್ನೆ ಕೇಸು ಹಾಕಿ, ಚೂರಿ ಇರಿತ ಪ್ರಕರಣವನ್ನು ನಗಣ್ಯ ಮಾಡೋದು ಇದರ ಹಿಂದಿರುವ ಷಡ್ಯಂತ್ರ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೋಳಿಯಾರು ಚೂರಿ ಇರಿತ ಘಟನೆ ಬಗ್ಗೆ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಸ್ಪೀಕರ್ ಕ್ಷೇತ್ರದಲ್ಲಿಯೇ ಇಂತಹ ಕೃತ್ಯ ನಡೆದಿರೋದು ರಾಜ್ಯದ ಕಾನೂನು ಸುವ್ಯವಸ್ಥೆ ಹೇಗಿದೆ ಎನ್ನುವುದನ್ನು ಸೂಚಿಸುತ್ತದೆ. ನಿನ್ನೆ ಸ್ಪೀಕರ್ ಮತ್ತು ಆರೋಗ್ಯ ಸಚಿವರು ಅದೇ ಆಸ್ಪತ್ರೆಗೆ ತೆರಳಿಯೂ ಅಲ್ಲಿದ್ದ ಚೂರಿ ಇರಿತಕ್ಕೊಳಗಾದವರನ್ನು ನೋಡಲು ಹೋಗಿಲ್ಲ. ಇವರಿಗೆ ಮನುಷ್ಯತ್ವ, ಒಂಚೂರು ಸೌಜನ್ಯಾ ಆದ್ರೂ ಇದೆಯಾ.. ಘಟನೆಯಾದ ಮರುದಿನ ಕೇಸು ಹಾಕುತ್ತಾರೆ ಅಂದ್ರೆ, ಅಲ್ಲಿ ವರೆಗೆ ಇವರೇನು ಮಣ್ಣು ತಿಂತಿದ್ರಾ ಎಂದು ಪ್ರಶ್ನಿಸಿದರು.
ಕರಾವಳಿಯಲ್ಲಿ ನಾಲ್ಕು ಜನ ಶಾಸಕರ ಮೇಲೆ ವಿನಾಕಾರಣ ಕೇಸು ಹಾಕಿದ್ದಾರೆ. ಇಲ್ಲಿ ಕಾನೂನೇ ಇಲ್ಲ. ರಾಜ್ಯದಲ್ಲಿ ಗೃಹ ಸಚಿವರು ಎಲ್ಲಿದ್ದಾರೆಂದು ಹುಡುಕಬೇಕಾಗಿದೆ. ಕರ್ನಾಟಕದ ಕ್ರೈಮ್ ರೇಟ್ ದೇಶದಲ್ಲಿ 40 ಶೇಕಡಾದಷ್ಟು ಒಂದೇ ವರ್ಷದಲ್ಲಿ ಏರಿಕೆಯಾಗಿದೆ. ಕರ್ನಾಟಕದಲ್ಲಿ ಜೈಶ್ರೀರಾಮ್, ಭಾರತ್ ಮಾತಾಕಿ ಅಂದ್ರೆ ತಪ್ಪು. ಗೂಂಡಾಗಳ ಕೈಗೆ ಆಡಳಿತ ಕೊಟ್ಟ ರೀತಿ ಆಗಿದೆ. ನಿಮ್ಮ ಮುಸುಡಿಗೆ ಲೋಕಸಭೆಯಲ್ಲಿ ಡಬಲ್ ಡಿಜಿಟ್ ತಗೊಂಡಿಲ್ಲ, 20 ಸೀಟು ಅಂತ ಹೇಳಿಕೊಂಡು ತಿರುಗುತ್ತಿದ್ದರು. ನಿಮ್ಮ ಗ್ಯಾರಂಟಿ ಏನಾಯ್ತು, ಯಾಕೆ ಗ್ಯಾರಂಟಿಗೆ ಓಟು ಬಂದಿಲ್ಲ. ಆಡಳಿತ ಇದ್ದೂ ಲೋಕಸಭೆ ಸೀಟು ಬಂದಿಲ್ಲ ಅಂದ್ರೆ, ಜನರ ವಿಶ್ವಾಸ ಉಳಿಸಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ 80 ಶೇಕಡಾ ತಿಂದಿದ್ದಾರೆ
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಹೋರಾಟ ಏನಾಯ್ತು ಎಂದು ಕೇಳಿದ ಪ್ರಶ್ನೆಗೆ, ನಾವು ರಾಜ್ಯಪಾಲರಿಗೆ ದೂರು ಕೊಟ್ಟ ಬಳಿಕ ಸಚಿವ ನಾಗೇಂದ್ರ ರಾಜಿನಾಮೆ ಕೊಡುವಂತಾಯ್ತು. ಪ್ರಕರಣದಲ್ಲಿ ಸಚಿವರ ಪಿಎ ಯನ್ನೇ ಅರೆಸ್ಟ್ ಮಾಡಿದ್ದಾರೆ. 20 ಪರ್ಸೆಂಟ್ ಸಚಿವರು ಮತ್ತು ಪಿಎ ತಿಂದಿರಬಹುದು. ಉಳಿದ 80 ಶೇಕಡಾ ಸಿದ್ದರಾಮಯ್ಯ ಅವರೇ ತಿಂದಿರಬೇಕಲ್ಲ. ಮುಖ್ಯಮಂತ್ರಿ ರಾಜಿನಾಮೆಗೆ ನಾವು ಸದನದಲ್ಲಿ ಹೋರಾಟ ನಡೆಸುತ್ತೇವೆ. ಹಣಕಾಸು ಇವರಲ್ಲೇ ಇರುವಾಗ ಇವರಿಗೆ ತಿಳಿಯದೆ ಹಣ ವರ್ಗಾವಣೆ ಆಗುತ್ತಾ.. 180 ಕೋಟಿ ಹಣ ಬೇನಾಮಿ ಖಾತೆಗಳಿಗೆ ಹೋಗಿದ್ದು ತೆಲಂಗಾಣದಲ್ಲಿ ಡ್ರಾ ಆಗಿದೆ. ಅಲ್ಲಿಯೂ ಕಾಂಗ್ರೆಸ್ ಸರಕಾರ ಇದೆ, ಹಣವನ್ನು ಯಾರು ಬಳಸಿಕೊಂಡಿದ್ದಾರೆ, ಕಾಂಗ್ರೆಸ್ ಚುನಾವಣೆ ಕೆಲಸಕ್ಕೆ ಬಳಕೆ ಮಾಡಿದ್ಯಾ ಎನ್ನೋದು ತನಿಖೆಯಾಗತ್ತೆ. ಸಿಬಿಐ ತನಿಖೆ ಶುರು ಮಾಡಿದೆ ಎಂದರು.
ಜಿಪಂ ಚುನಾವಣೆಗೂ ನಿಮ್ಮ ಮೈತ್ರಿ ಇರುತ್ತಾ ಎಂದು ಕೇಳಿದ ಪ್ರಶ್ನೆಗೆ, ಜಿಪಂ, ಬೆಂಗಳೂರು ಬಿಬಿಎಂಪಿ ಚುನಾವಣೆಗೂ ಜೆಡಿಎಸ್ ಜೊತೆಗಿನ ಮೈತ್ರಿ ಇರುತ್ತದೆ. ಮೈತ್ರಿಯಿಂದ ನಮಗೆ ವೋಟಿಂಗ್ ಪರ್ಸೆಂಟ್ ಹೆಚ್ಚಾಗಿದೆ. ನಮಗೆ 52 ಪರ್ಸೆಂಟ್ ಮತ ಸಿಕ್ಕಿದ್ದರೆ, ಆಡಳಿತ ಇರುವ ಕಾಂಗ್ರೆಸಿಗೆ ಸಿಕ್ಕಿದ್ದು 42 ಪರ್ಸೆಂಟ್. ರಾಜ್ಯದ 143 ಕ್ಷೇತ್ರಗಳಲ್ಲಿ ನಾವೇ ಲೀಡ್ ಪಡೆದಿದ್ದು, ಸಿದ್ದರಾಮಯ್ಯ ಸರಕಾರದ ಒಂದು ವರ್ಷದ ಸಾಧನೆ ಶೂನ್ಯ ಎಂದು ತೋರಿಸಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಭರತ್ ಶೆಟ್ಟಿ, ಹರೀಶ್ ಪೂಂಜ, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮತ್ತಿತರರಿದ್ದರು.
Leader of Opposition in Legislative Assembly R. Ashok accused the Congress of running a ‘Taliban-type’ government in Karnataka speaking about Boliyar Stabbing incident.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm