ಬ್ರೇಕಿಂಗ್ ನ್ಯೂಸ್
11-06-24 08:41 pm Mangalore Correspondent ಕರಾವಳಿ
ಮಂಗಳೂರು, ಜೂನ್ 11: ಬೋಳಿಯಾರು ಇರಿತ ಘಟನೆಗೆ ಬಿಜೆಪಿ ಕಾರ್ಯಕರ್ತರು ಮಸೀದಿ ಎದುರಲ್ಲಿ ಘೋಷಣೆ ಕೂಗಿದ್ದೇ ಕಾರಣ. ಮುಸ್ಲಿಮರನ್ನು ಉದ್ದೇಶಿಸಿ ನೀವು ಪಾಕಿಸ್ತಾನಿಗಳು, ಮೋದಿ ಎದುರಲ್ಲಿ ನಿಲ್ಲುವುದಕ್ಕೆ ಭಯ ಪಡುತ್ತೀರಿ ಎನ್ನುವ ರೀತಿ ಅರ್ಥ ಬರುವಂತೆ ಪ್ರಚೋದನಕಾರಿ ಘೋಷಣೆ ಹಾಕಿದ್ದಾರೆ. ಭಾರತ್ ಮಾತಾ ಕಿ ಜೈ ಎನ್ನುವುದು ಮಾತ್ರ ಘೋಷಣೆ ಆಗಿರಲಿಲ್ಲ. ವಿಜಯೋತ್ಸವ ಸಂದರ್ಭದಲ್ಲಿ ಮುಸ್ಲಿಮರನ್ನು ಪ್ರಚೋದಿಸುವ ರೀತಿ ಘೋಷಣೆ ಕೂಗಿದ್ದಕ್ಕೆ ನಮ್ಮಲ್ಲಿ ಸಾಕ್ಷಿ ಇದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದ್ದಾರೆ.
ಬೋಳಿಯಾರಿನಲ್ಲಿ ಬಿಜೆಪಿ ಕಾರ್ಯಕರ್ತರಿಬ್ಬರ ಮೇಲೆ ಚೂರಿ ಇರಿತ ಘಟನೆಗೆ ಸಂಬಂಧಿಸಿ ಸುದ್ದಿಗೋಷ್ಟಿ ನಡೆಸಿದ ಕಮಿಷನರ್, ಪ್ರಕರಣದಲ್ಲಿ ಆರು ಮಂದಿಯನ್ನು ಬಂಧಿಸಿದ್ದೇವೆ. ಇನ್ನೂ ಹಲವರ ಬಂಧನ ಆಗಲಿಕ್ಕಿದೆ, ನಮ್ಮ ಮೂರು ವಿಶೇಷ ತಂಡಗಳು ಈ ಸಂಬಂಧ ಕಾರ್ಯಾಚರಣೆ ನಡೆಸ್ತಾ ಇದೆ ಎಂದರು. ಭಾರತ್ ಮಾತಾ ಕೀ ಜೈ ಘೋಷಣೆ ಕೂಗಿದ್ದಕ್ಕೆ ನೀವು ಕೇಸ್ ಹಾಕಿದ್ದೀರಾ ಎಂದು ಕೇಳಿದ ಪ್ರಶ್ನೆಗೆ, ಅಷ್ಟೇ ಘೋಷಣೆ ಕೂಗಿದ್ದು ಅಲ್ಲ. ಮುಸ್ಲಿಮರು ಪಾಕಿಸ್ತಾನಿಗಳು ಅನ್ನುವ ರೀತಿ ಪ್ರಚೋದನಕಾರಿ ಘೋಷಣೆ ಹಾಕಿದ್ದಾರೆ. ಮೆರವಣಿಗೆಯಲ್ಲೂ ಹಾಕಿದ್ದಾರೆ. ಆನಂತರ, ಮೂರು ಮಂದಿ ಯುವಕರು ಮಸೀದಿ ಬಳಿಗೆ ಬಂದು ಅಂತಹದ್ದೇ ಘೋಷಣೆ ಹಾಕಿದ್ದಾರೆ. ಇದರ ಬಗ್ಗೆ ಮಸೀದಿ ಕಮಿಟಿ ಅಧ್ಯಕ್ಷರು ನೀಡಿದ ದೂರಿನಂತೆ 153ಎ ಅಡಿ ಕೇಸು ದಾಖಲಿಸಿದ್ದೇವೆ. ಜೊತೆಗೆ, ನಮ್ಮ ಸಿಬಂದಿಯೂ ಅಲ್ಲಿದ್ದರು ಎಂದು ತಿಳಿಸಿದ್ದಾರೆ.

ತಂಡ ಚೂರಿ ಹಿಡಿದುಕೊಂಡು ಬಂದಿತ್ತೇ ಎಂದು ಕೇಳಿದ ಪ್ರಶ್ನೆಗೆ, ಅದರಲ್ಲಿ ಒಬ್ಬಾತ ರೌಡಿ ಶೀಟರ್ ಇದ್ದ. ಆತ ತನ್ನಲ್ಲಿದ್ದ ಚೂರಿಯಿಂದ ಹಲ್ಲೆ ಮಾಡಿದ್ದಾನೆ. ನಾವು ಸಿಸಿಟಿವಿ ವಿಡಿಯೋ ಆಧರಿಸಿ ಕಾರ್ಯಾಚರಣೆ ಮಾಡುತ್ತಿದ್ದೇವೆ ಎಂದು ಹೇಳಿದರು. ಏಂಟಿ ಕಮ್ಯುನಲ್ ವಿಂಗ್ ಬಗ್ಗೆ ಕೇಳಿದ ಪ್ರಶ್ನೆಗೆ, ಅದು ಏಕ್ಟಿವ್ ಇದೆ, ನಾವು ಈ ಬಾರಿ ಚುನಾವಣೆಗೂ ಮುನ್ನ ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದೇವೆ. ಕಮ್ಯುನಲ್ ಹಿಂಸೆಯ ಹಿನ್ನೆಲೆಯಿದ್ದ 300 ಮಂದಿಯ ಮೇಲೆ ಕ್ರಮ ಮಾಡಿದ್ದೇವೆ. 75 ಜನರನ್ನು ಗಡೀಪಾರು ಮಾಡಿದ್ದೇವೆ. ಎಂಟು ಮಂದಿ ಮೇಲೆ ಗೂಂಡಾ ಏಕ್ಟ್ ಜರುಗಿಸಿದ್ದೇವೆ. ಇಡೀ ರಾಜ್ಯಕ್ಕೆ ಹೋಲಿಸಿದರೆ ಮೂರನೇ ಒಂದು ಭಾಗದಷ್ಟು ಅಂದರೆ 35 ಶೇಕಡಾ ವರ್ಕೌಟ್ ನಮ್ಮಲ್ಲಿ ಆಗಿದೆ ಎಂದು ಹೇಳಿದರು. ಅಪರಾಧ ಹಿನ್ನೆಲೆಯವರಿಗೆ ನೋಟೀಸ್ ಜಾರಿ ಮಾಡುವುದು, ಠಾಣೆಗೆ ಕರೆಸಿ ಎಚ್ಚರಿಕೆ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದರು.
Mangalore Provocative sloganeering triggered communal strife at Boliyar over stabbing two says Police Commissioner Anupam Agarwal. Mangaluru city Police Commissioner Anupam Agrawal on Tuesday said a provocative statement referring to Pakistan by those celebrating the Narendra Modi swearing-in ceremony sparked tension leading to stabbing of two BJP workers at Boliyar near here on Sunday night.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm