ಬ್ರೇಕಿಂಗ್ ನ್ಯೂಸ್
07-06-24 01:38 pm Mangalore Correspondent ಕರಾವಳಿ
ಮಂಗಳೂರು, ಜೂನ್ 7: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷ ಸೋತಿದ್ದಕ್ಕೆ ಜಿಲ್ಲಾಧ್ಯಕ್ಷರು ರಾಜಿನಾಮೆ ಕೊಡಬೇಕು ಎಂಬ ಕಾರ್ಯಕರ್ತರು ಜಾಲತಾಣದಲ್ಲಿ ಒತ್ತಾಯ ಮಾಡುತ್ತಿರುವುದಕ್ಕೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಗರಂ ಆಗಿದ್ದಾರೆ. ಸುದ್ದಿಗೋಷ್ಟಿ ಸಂದರ್ಭದಲ್ಲಿ ಈ ಬಗ್ಗೆ ಪ್ರಶ್ನೆ ಎತ್ತಿದಾಗ, ನಾನೇನು ರಾಜಿನಾಮೆಯನ್ನು ಕಿಸೆಯಲ್ಲಿ ಇಟ್ಟುಕೊಂಡು ಓಡಾಡುವುದಿಲ್ಲ. ರಾಜಿನಾಮೆಯನ್ನು ಮಾರುಕಟ್ಟೆಯಿಂದ ತರುವುದಕ್ಕೂ ಆಗುವುದಿಲ್ಲ. ಪಕ್ಷ ಸೋತಿದ್ದಕ್ಕೆ ಓಡಿ ಹೋಗುವುದಿಲ್ಲ. ಯಾರೋ ವಾಟ್ಸಪ್ ಯುನಿವರ್ಸಿಟಿಯಲ್ಲಿ ಬರೆಯುತ್ತಾರೆಂದು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
ಹಿಂದೆ ಜನಾರ್ದನ ಪೂಜಾರಿಯವರು ನಾಲ್ಕು ಬಾರಿ ಸೋತಿದ್ದರು. ಆಗೆಲ್ಲ ಪಕ್ಷದ ಜಿಲ್ಲಾಧ್ಯಕ್ಷರು ರಾಜಿನಾಮೆ ನೀಡಿರಲಿಲ್ಲ. ಅಂಥ ಪದ್ಧತಿ ಇರುತ್ತಿದ್ದರೆ ರಾಜಿನಾಮೆ ಕೇಳುವುದಕ್ಕೆ ಅರ್ಥ ಇದೆ. ಯಾರೋ ಕೇಳುತ್ತಾರೆಂದು ರಾಜಿನಾಮೆ ನೀಡುವುದಕ್ಕಾಗಲ್ಲ. ಯಾರಾದರೂ ಪಕ್ಷದಲ್ಲಿ ಜವಾಬ್ದಾರಿಯಿದ್ದವರು ರಾಜಿನಾಮೆ ಕೇಳಿದರೆ ಪರಿಗಣನೆ ಮಾಡಬಹುದು. ನಾನಂತೂ ವಾಟ್ಸಪ್ ಯುನಿವರ್ಸಿಟಿ ಸ್ಟೂಡೆಂಟ್ ಅಲ್ಲ. ಯಾರೋ ಮನೆಯಲ್ಲಿ ಕುಳಿತು ವಾಟ್ಸಪಲ್ಲಿ ಬರೆದ ಮಾತ್ರಕ್ಕೆ ಏನೂ ಆಗೋದಿಲ್ಲ. ಮನೆಯಲ್ಲಿ ಕುಳಿತಿದ್ದವನನ್ನು ಜಿಲ್ಲಾಧ್ಯಕ್ಷ ಮಾಡಿದ್ದಲ್ಲ. 1989ರಲ್ಲಿ ಮೊದಲ ಬಾರಿಗೆ ನನ್ನನ್ನು ಗುರುತಿಸಿ ಚುನಾವಣೆಗೆ ಟಿಕೆಟ್ ಕೊಟ್ಟಿದ್ದರು. ಬಿ ಫಾರಂ ಅನ್ನೂ ಕೊಟ್ಟು ಕೊನೆಯಲ್ಲಿ ಬದಲಾವಣೆ ಮಾಡಿದ್ದರು. ಹಾಗಂತ ನಾನು ಪಕ್ಷದ ವಿರುದ್ಧ ಹೋಗಿಲ್ಲ.
2004ರಲ್ಲಿ ಪಕ್ಷದಿಂದ ಟಿಕೆಟ್ ಸಿಕ್ಕಿತ್ತು. ಚುನಾವಣೆ ಸ್ಪರ್ಧಿಸಿ ಸೋತಿದ್ದೆ. ಹಾಗಂತ ಯಾರ ಮೇಲೂ ಬೆರಳು ತೋರಿಸಿಲ್ಲ. ಸುದೀರ್ಘ ಕಾಲದ ರಾಜಕೀಯ ಅನುಭವ ಪರಿಗಣಿಸಿ ಈ ಸ್ಥಾನ ನೀಡಿದ್ದಾರೆ. ಯಾರಿಂದಲೂ ಪಕ್ಷವನ್ನು ಸೋಲಿಸಲು, ಗೆಲ್ಲಿಸುವುದಕ್ಕೆ ಆಗಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಕ್ಷೇತ್ರದಲ್ಲಿ 30 ಸಾವಿರ ಓಟು ಪಡೆಯುವುದು, ಬದಲಾಯಿಸುವಷ್ಟು ಕೆಪಾಸಿಟಿ ಇದ್ದವರು ಯಾರೂ ಇಲ್ಲ. ಪಕ್ಷ ಯಾವಾಗ ನಿರ್ಧಾರ ತೆಗೆದುಕೊಳ್ಳುತ್ತದೋ ಆಗ ಹಿಂದೆ ಸರಿದು ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು. ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರ ಸೋತಿದ್ದಕ್ಕೆ ನಾವೆಲ್ಲ ಜವಾಬ್ದಾರಿ ಹೊರುತ್ತೇವೆ, ಕೇವಲ ಪದ್ಮರಾಜ್ ಮಾತ್ರ ಹೊಣೆ ಹೊತ್ತುಕೊಳ್ಳಬೇಕಾಗಿಲ್ಲ. ಪಕ್ಷ ಗೆದ್ದಾಗಲೂ ಎಲ್ಲರೂ ಹೊಣೆಯಾಗುತ್ತೇವೆ, ಸೋತಾಗಲೂ ಎಲ್ಲರೂ ಹೊಣೆ ಹೊರಬೇಕಾಗುತ್ತದೆ. ಸೋಲಿನಲ್ಲೂ ನಮ್ಮೆಲ್ಲರ ಷೇರು ಇದೆ ಎಂದರು.
ರಾಜ್ಯದಲ್ಲಿ ಸ್ಥಾನ ಕಡಿಮೆಯಾಗಿದೆ, ಆದರೆ ಶೇಕಡಾವಾರು ಮತ ಹೆಚ್ಚಾಗಿದೆ. ಸೋಲಿನ ಬಗ್ಗೆ ರಾಜ್ಯ ನಾಯಕರು ವಿಮರ್ಶೆ ಮಾಡಲಿದ್ದಾರೆ. ಚುನಾವಣೆಯಲ್ಲಿ ಕೆಲಸ ಮಾಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಪರಿಷತ್ ಚುನಾವಣೆ ಸೋತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಹರೀಶ್ ಕುಮಾರ್, ನೈರುತ್ಯ ಪರಿಷತ್ ಕ್ಷೇತ್ರದಲ್ಲಿ 1952ರಿಂದಲೂ ನಾವು ಗೆದ್ದಿಲ್ಲ. ಈ ಬಾರಿ ಗೆಲ್ಲುವ ಭರವಸೆ ಇತ್ತು. ಅಷ್ಟರ ಮಟ್ಟಿಗೆ ನಾವೆಲ್ಲ ಸೇರಿ ಕೆಲಸ ಮಾಡಿದ್ದೆವು. ಶಿಕ್ಷಕರ ಕ್ಷೇತ್ರದಲ್ಲಂತೂ ಭರವಸೆ ಇತ್ತು. ಕಾಂಗ್ರೆಸಿಗೆ ಶಿಕ್ಷಕ ಮತದಾರರ ಮನ ಗೆಲ್ಲಲು ಸಾಧ್ಯವಾಗಿಲ್ಲ ಅಂದುಕೊಳ್ಳುತ್ತೇನೆ ಎಂದರು. ಸುದ್ದಿಗೋಷ್ಟಿಯಲ್ಲಿ ಶುಭೋದಯ ಆಳ್ವ, ಪ್ರಕಾಶ್ ಸಾಲ್ಯಾನ್, ಲುಕ್ಮಾನ್ ಬಂಟ್ವಾಳ, ನೀರಜ್ ಪಾಲ್ ಮತ್ತಿತರರಿದ್ದರು.
Dakshina Kannada District Congress Committee (DCC) President Harish Kumar said that there is no question of him resigning for the party’s debacle in Dakshina Kannada (DK) Lok Sabha constituency.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm