ಬ್ರೇಕಿಂಗ್ ನ್ಯೂಸ್
04-12-20 11:05 pm Mangaluru Correspondent ಕರಾವಳಿ
ಮಂಗಳೂರು, ಡಿ. 4: ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ , ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕೆ.ಕೃಷ್ಣಪ್ಪ ಮೆಂಡನ್ (88) ಶುಕ್ರವಾರ ಮುಂಜಾನೆ ಅಳಪೆ ಸ್ವಗೃಹದಲ್ಲಿ ನಿಧನ ಹೊಂದಿದರು.
ಅವರು ನಗರ ಪಾಲಿಕೆ ಕಂಕನಾಡಿ ಅಳಪೆ ವಾರ್ಡ್ ನಿಂದ ನಾಲ್ಕು ಬಾರಿ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದು, ಮೇಯರ್ ಆಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ವೇಳೆ ಸಜ್ಜನ ರಾಜಕಾರಣಿಯೆಂದೇ ಗುರುತಿಸಲ್ಪಟ್ಟಿದ್ದರು.
ಅತ್ತಾವರ ಶ್ರೀ ವಿಷ್ಣುಮೂರ್ತಿ ಉಮಾಮಹೇಶ್ವರ ದೇವಸ್ಥಾನದ ಮೊಕ್ತೇಶ್ವರರಾಗಿದ್ದರು. ಅಳಪೆ ಕರ್ಮಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ, ಕರಾವಳಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಕಂಕನಾಡಿ ಯುವಕ ವೃಂದದ ಸ್ಥಾಪಕ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ದ.ಕ. ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷರಾಗಿ ಸಾಮಾಜಿಕ ಮುಖಂಡರಾಗಿದ್ದರು. ಅವರು ಪತ್ನಿ, ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಶಾಸಕ ಯು.ಟಿ.ಖಾದರ್, ಐವನ್ ಡಿಸೋಜ, ಮಾಜಿ ಶಾಸಕ ಮೊಯಿದೀನ್ ಬಾವ ಅಂತಿಮ ನಮನ ಸಲ್ಲಿಸಿದರು.
ಮಾಜಿ ಮೇಯರ್ ಗಳಾದ ಶಶಿಧರ ಹೆಗ್ಡೆ, ಹಿಲ್ಡಾ ಆಳ್ವ, ಭಾಸ್ಕರ್ ಮೊಯ್ಲಿ, ಜೇಸಿಂತ ಆಲ್ಫ್ರೆಡ್, ಮಂಗಳೂರು ನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ವಿಶ್ವಾಸ್ ಕುಮಾರ್ ದಾಸ್, ದಕ್ಷಿಣ ಬ್ಲಾಕ್ ಅಧ್ಯಕ್ಷರಾದ ಸಲೀಮ್, ಕಾರ್ಪೊರೇಟರ್ ಗಳಾದ ಪ್ರವೀಣ್ ಚಂದ್ರ ಆಳ್ವ, ಕೇಶವ ಮರೋಳಿ, ಅಶ್ರಫ್, ವಿರೋಧ ಪಕ್ಷದ ನಾಯಕ ಅಬ್ದುಲ್ ರಾವೂಫ್, ರೂಪಶ್ರೀ ಪೂಜಾರಿ, ಸಂದೀಪ್ ಗರೋಡಿ ಮಾಜಿ ಕಾರ್ಪೊರೇಟರ್ ಗಳಾದ ಪದ್ಮನಾಭ ಅಮೀನ್, ಆಶಾ ಡಿಸಿಲ್ವ, ಪ್ರಕಾಶ್ ಪಡೀಲ್ ಮತ್ತು ಟಿ.ಕೆ. ಸುಧೀರ್, ಡೆನ್ನಿಸ್ ಡಿಸಿಲ್ವಾ ಮತ್ತಿತರರು ಅಂತಿಮ ದರ್ಶನ ಪಡೆದರು.
The former Mayor K. Krishnappa Mendon died here on Friday. He was 88 and is survived by his wife and two daughters.
13-08-25 07:03 pm
Bangalore Correspondent
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
ರಾಜ್ಯಪಾಲರ ವಿರುದ್ಧ ಅವಹೇಳನ ಹೇಳಿಕೆ ; ಐವಾನ್ ಡಿಸೋಜ...
11-08-25 10:26 pm
13-08-25 11:56 am
HK News Desk
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
ಕರ್ನಾಟಕ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿ...
12-08-25 11:35 am
13-08-25 08:23 pm
HK News Desk
ಹಠಾತ್ ಕುಸಿದು ಬಿದ್ದು ಕಾಲೇಜು ಬಸ್ ನಿರ್ವಾಹಕ ಸಾವು...
13-08-25 01:49 pm
ಶವ ಹೂತ ಪ್ರಕರಣ ; ಕೊನೆಗೂ ಎಂಟ್ರಿಯಾದ ರಾಷ್ಟ್ರೀಯ ಮಾ...
13-08-25 10:37 am
ನಿಯಂತ್ರಣ ತಪ್ಪಿದ ಸ್ಕೂಟರ್ ಆವರಣ ಗೋಡೆಗೆ ಡಿಕ್ಕಿ ;...
13-08-25 10:17 am
ಧರ್ಮಸ್ಥಳ ಕೇಸ್ ; ಜಿಪಿಆರ್ ಬಳಸಿದರೂ ಸಿಗಲಿಲ್ಲ ಎಲುಬ...
12-08-25 11:06 pm
13-08-25 05:40 pm
Udupi Correspondent
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm