ಬ್ರೇಕಿಂಗ್ ನ್ಯೂಸ್
04-06-24 09:26 pm HK News Desk ಕರಾವಳಿ
ಮಂಗಳೂರು, ಜೂನ್.4: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಎನ್ಐಎ ಅಧಿಕಾರಿಗಳು ಮುಂಬೈ ಏರ್ಪೋರ್ಟ್ ನಲ್ಲಿ ಬಂಧಿಸಿದ್ದಾರೆ. ರಿಯಾಜ್ ಯೂಸುಫ್ ಹಾರಳ್ಳಿ ಅಲಿಯಾಸ್ ರಿಯಾಜ್ ಬಂಧಿತ ವ್ಯಕ್ತಿ. ಈತ ವಿದೇಶಕ್ಕೆ ಪರಾರಿಯಾಗಲು ಮುಂಬೈ ಏರ್ಪೋರ್ಟ್ ಬಂದಿದ್ದಾಗಲೇ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಮುಸ್ತಫಾ ಪೈಚಾರ್ ಬಂಧನವಾದ ಒಂದೇ ತಿಂಗಳಲ್ಲಿ ಮತ್ತೊಬ್ಬ ತಲೆಮರೆಸಿಕೊಂಡ ಆರೋಪಿಯನ್ನು ಬಂಧಿಸಲಾಗಿದೆ. ರಿಯಾಜ್ ಬಂಧನದೊಂದಿಗೆ ಒಟ್ಟು ಬಂಧಿತರ ಸಂಖ್ಯೆ 19ಕ್ಕೇರಿದೆ. ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮುಸ್ತಫಾ ಪೈಚಾರ್ ಮೇ 10ರಂದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಎನ್ಐಎ ಬಲೆಗೆ ಬಿದ್ದಿದ್ದ. ಆತನ ಜೊತೆಗೆ ಆಶ್ರಯ ನೀಡಿದ್ದ ಮನ್ಸೂರ್ ಪಾಶಾ ಎಂಬಾತನೂ ಬಂಧಿತನಾಗಿದ್ದ.
ಮುಸ್ತಫಾ ಪೈಚಾರ್ ಪಿಎಫ್ಐ ಸಂಘಟನೆಯ ಪುತ್ತೂರು ಜಿಲ್ಲಾ ಸೆಕ್ರೆಟರಿಯಾಗಿದ್ದ. ಅಲ್ಲದೆ, ಪ್ರವೀಣ್ ನೆಟ್ಟಾರು ಕೊಲೆಗೆ ಸಂಚು ನಡೆಸಿದ್ದವರಲ್ಲಿ ಪ್ರಮುಖನಾಗಿದ್ದ. ಪಿಎಫ್ಐ ಹಂತಕರ ಸರ್ವಿಸ್ ಟೀಮಿನ ಮುಖ್ಯಸ್ಥನಾಗಿದ್ದ. ಪ್ರವೀಣ್ ಕೊಲೆಗೆ ಮುಸ್ತಫಾನೇ ಇತರ ಆರೋಪಿಗಳನ್ನು ರೆಡಿ ಮಾಡಿಸಿದ್ದಲ್ಲದೆ, ಅವರು ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದ. ಎರಡು ವರ್ಷಗಳ ಬಳಿಕ ಮುಸ್ತಫಾನನ್ನು ಸಕಲೇಶಪುರದ ಕಾಫಿ ಎಸ್ಟೇಟಿನಲ್ಲಿ ಮೇ 10ರಂದು ಎನ್ಐಎ ಅಧಿಕಾರಿಗಳು ಬಂಧನ ಮಾಡಿದ್ದರು. ಎನ್ಐಎ ಅಧಿಕಾರಿಗಳು ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಈವರೆಗೆ 21 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
The National Investigation Agency (NIA) on Tuesday has made another arrest in the BJP leader Praveen Nettaru murder case which took place in Karnataka in July 2022 According to a statement issued by the NIA, the accused Riyaz Yousaf Haaralli alias Riyaz has been arrested from Mumbai airport while he was trying to sneak abroad.
20-07-25 04:24 pm
Bangalore Correspondent
Rcb, Bangalore: ಪೊಲೀಸರು 'ಆರ್ಸಿಬಿ ಸೇವಕರು' ಎಂಬ...
19-07-25 03:05 pm
ಎಲ್ಲ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ತಲಾ 50 ಕೋಟಿ ಅ...
18-07-25 10:59 pm
ರಾಜ್ಯದಲ್ಲಿ ಪರಮಾಣು ಸ್ಥಾವರಕ್ಕೆ ಒಪ್ಪಿಗೆ ; ಮತ್ತೆ...
18-07-25 10:31 pm
Accident in Chitradurga: ಟಾಟಾ ಏಸ್ ಗಾಡಿ ಹರಿದು...
18-07-25 08:01 pm
20-07-25 04:47 pm
HK News Desk
Kerala Nurse Yemen; ನರ್ಸ್ ನಿಮಿಷಾ ಉಳಿವಿಗೆ ಗಲ್ಫ...
16-07-25 09:58 pm
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
20-07-25 03:06 pm
Mangaluru Correspondent
MRPL, MP Brijesh Chowta, Mangalore: MRPL ಹಸಿರ...
19-07-25 10:01 pm
Mangalore, Derlakatte Raid: ನಿಯಮ ಉಲ್ಲಂಘಿಸಿ ಕಾ...
19-07-25 07:18 pm
RCB Stampede, DySP Anupama Shenoy: ಕಾಲ್ತುಳಿತ...
19-07-25 06:51 pm
Dharmasthala Case, Santosh Kumar, CPIM: ಧರ್ಮಸ...
19-07-25 06:14 pm
20-07-25 12:16 pm
HK News Desk
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm
Mangalore Fraud, WhatsApp, crime: ಕಂಪನಿಯ ಎಂಡಿ...
18-07-25 12:01 pm