ಬ್ರೇಕಿಂಗ್ ನ್ಯೂಸ್
04-06-24 05:57 pm Mangalore Correspondent ಕರಾವಳಿ
ಮಂಗಳೂರು, ಜೂನ್ 4: ಪೈಪೋಟಿ ನಿರೀಕ್ಷೆ ಮಾಡಿದ್ದ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ನಿರಾಯಾಸ ಗೆಲುವು ಸಾಧಿಸಿದ್ದಾರೆ. 19ನೇ ಸುತ್ತು ಮತ ಎಣಿಕೆ ಮುಕ್ತಾಯದಲ್ಲಿ ಬ್ರಿಜೇಶ್ ಚೌಟ 7,64,132 ಮತಗಳನ್ನು ಪಡೆದಿದ್ದಾರೆ. ನಿಕಟ ಪ್ರತಿಸ್ಪರ್ಧಿ ಕಾಂಗ್ರೆಸಿನ ಪದ್ಮರಾಜ್ ಪೂಜಾರಿ 6,12,103 ಮತಗಳನ್ನು ಪಡೆದಿದ್ದಾರೆ. ಆಮೂಲಕ 1,49,208 ಮತಗಳಿಂದ ಬ್ರಿಜೇಶ್ ಚೌಟ ಗೆಲುವಿನ ನಗೆ ಬೀರಿದ್ದಾರೆ.
ಸೌಜನ್ಯಾ ಪರ ಹೋರಾಟಗಾರರ ಅಭಿಯಾನದ ಹೆಸರಿನಲ್ಲಿ ನೋಟಾಗೆ 23515 ಮತಗಳು ಬಿದ್ದಿವೆ. ಉಳಿದಂತೆ ಅಭ್ಯರ್ಥಿ ಕ್ರಮ ಸಂಖ್ಯೆಯಲ್ಲಿ ಮೊದಲ ಸಾಲಿನಲ್ಲಿದ್ದ ಬಹುಜನ ಸಮಾಜ ಪಾರ್ಟಿಯ ಕಾಂತಪ್ಪ ಆಲಂಗಾರ್ 4202 ಮತಗಳನ್ನು ಪಡೆದಿದ್ದಾರೆ. ಅಂಚೆ ಮತಗಳ ಪೈಕಿ ಬಿಜೆಪಿ ಪರವಾಗಿ 4002, ಕಾಂಗ್ರೆಸ್ ಪರವಾಗಿ 2821 ಮತಗಳು ಬಿದ್ದಿವೆ. ಸರಕಾರಿ ನೌಕರರು ಕೂಡ ನೋಟಾ ಪರವಾಗಿ 61 ಮತಗಳನ್ನು ಚಲಾಯಿಸಿದ್ದು ವಿಶೇಷ.





ಬೆಳ್ತಂಗಡಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಗೆ 101408, ಕಾಂಗ್ರೆಸಿಗೆ 78101 ಮತ ಬಿದ್ದಿದೆ. ಮೂಡುಬಿದ್ರೆ ಕ್ಷೇತ್ರದಲ್ಲಿ ಬಿಜೆಪಿಗೆ 92496, ಕಾಂಗ್ರೆಸಿಗೆ 64308 ಮತ ಬಿದ್ದಿದೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಪರವಾಗಿ 108137, ಕಾಂಗ್ರೆಸಿಗೆ 76716 ಮತ ಬಿದ್ದಿದೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಪರವಾಗಿ 95531, ಕಾಂಗ್ರೆಸಿಗೆ 71187 ಮತ ಬಿದ್ದಿದೆ. ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಬಿಜೆಪಿಗೆ 64870, ಕಾಂಗ್ರೆಸಿಗೆ 97933 ಮತ ಸಿಕ್ಕಿದೆ. ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿಗೆ 94679, ಕಾಂಗ್ರೆಸಿಗೆ 88686 ಮತ ಬಿದ್ದಿದೆ. ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿಗೆ 100247, ಕಾಂಗ್ರೆಸ್ ಪರವಾಗಿ 71557 ಮತಗಳು ಬಿದ್ದಿವೆ. ಸುಳ್ಯ ಕ್ಷೇತ್ರದಲ್ಲಿ ಬಿಜೆಪಿಗೆ 1,02762, ಕಾಂಗ್ರೆಸಿಗೆ 63615 ಮತ ಬಿದ್ದಿದೆ.
ಮತದಾನದ ಅಂಕಿ ಅಂಶಗಳನ್ನು ನೋಡಿದರೆ, ಕೇಸರಿ ಭದ್ರಕೋಟೆ ಸುಳ್ಯದಲ್ಲಿ ಬಿಜೆಪಿಗೆ ಕುಸಿತವಾಗಿಲ್ಲ. ಅಲ್ಲಿ ಅತಿ ಹೆಚ್ಚು ಇರುವ ಬಿಜೆಪಿಯ ಸಾಂಪ್ರದಾಯಿಕ ಮತಬ್ಯಾಂಕ್ ಆಗಿರುವ ಗೌಡ ಸಮುದಾಯದ ಮತಗಳು ಸೌಜನ್ಯಾ ಹೆಸರಲ್ಲಿ ಚದುರಿ ಹೋಗುತ್ತವೆ ಎನ್ನುವ ಮಾತು ಕೇಳಿಬಂದಿತ್ತು. ಪುತ್ತೂರಿನಲ್ಲೂ ಬಿಜೆಪಿಗೆ ಮತ ಪ್ರಮಾಣ ಕಡಿಮೆಯಾಗಿಲ್ಲ. ನೋಟಾ ಪರವಾಗಿ ಬಿಜೆಪಿ ಮತ್ತು ಕಾಂಗ್ರೆಸಿನ ಮತಗಳೂ ಬಿದ್ದಿರುವುದು ಈ ಫಲಿತಾಂಶದಿಂದ ಕಂಡುಬರುತ್ತಿದೆ. 2019ರಲ್ಲಿ ಗೆಲುವಿನ ಅಂತರ 2.70 ಲಕ್ಷ ಇದ್ದರೆ, ಈ ಬಾರಿ ಅದರಲ್ಲುಳಿದ 1.20 ಲಕ್ಷದಷ್ಟು ಮತಗಳು ಕಾಂಗ್ರೆಸ್ ಪರ ಬಿದ್ದಿದೆ.
BJP emerges winner in Lok Sabha Elections 2024, Brijesh Chowta turns MP of Dakshina Kannada. BJP candidate Brijesh Chowta won the Lok Sabha election from Dakshina Kannada constituency on Tuesday, defeating Congress candidate Padmaraj R by nearly 1.5 lakh votes, although he is yet to be declared winner by the returning officer.
07-11-25 09:59 pm
HK News Desk
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
07-11-25 11:20 pm
Mangalore Correspondent
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm