ಬ್ರೇಕಿಂಗ್ ನ್ಯೂಸ್
27-05-24 10:59 pm Mangalore Correspondent ಕರಾವಳಿ
ಮಂಗಳೂರು, ಮೇ 27: ಕಳೆದ ಶುಕ್ರವಾರ ನಗರದ ಕಂಕನಾಡಿಯ ಮಾಲ್ ಒಂದರ ಹಿಂಭಾಗದ ಮಸೀದಿ ಆವರಣದ ರಸ್ತೆಯಲ್ಲಿ ಯುವಕರು ನಮಾಜ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ನಡು ರಸ್ತೆಯಲ್ಲೇ ಯುವಕರು ನಮಾಜ್ ಮಾಡಿದ್ದಾರೆ ಎಂದು ವಿಡಿಯೋ ವೈರಲ್ ಆಗುತ್ತಿದ್ದು, ಹಿಂದು ಸಂಘಟನೆಗಳ ಕಡೆಯಿಂದ ಆಕ್ಷೇಪವೂ ಕೇಳಿಬಂದಿದೆ.
ಕಂಕನಾಡಿಯ ಮ್ಯಾಕ್ ಮಾಲ್ ಹಿಂಭಾಗದ ಮಸೀದಿ ಆವರಣದ ರಸ್ತೆಯಲ್ಲಿ ಒಂದಷ್ಟು ಯುವಕರು ಕುಳಿತುಕೊಂಡು ನಮಾಜ್ ಮಾಡಿದ್ದರು. ಮಸೀದಿ ಒಳಭಾಗದಲ್ಲಿ ಫುಲ್ ಆಗಿದ್ದರಿಂದಲೋ ಏನೋ ಯುವಕರು ಹೊರಭಾಗದಲ್ಲಿಯೇ ಕುಳಿತು ನಮಾಜ್ ಮಾಡಿದ್ದರು. ಇದನ್ನು ಯಾರೋ ದೂರದ ಕಟ್ಟಡದಿಂದ ವಿಡಿಯೋ ಮಾಡಿದ್ದು, ಅದೀಗ ವೈರಲ್ ಆಗಿದೆ. ವಿಡಿಯೋ ವೈರಲ್ ಆಗಿದ್ದು ಮಾಧ್ಯಮಗಳಲ್ಲಿಯೂ ಸುದ್ದಿಯಾಗಿದೆ.
ಘಟನೆ ಬಗ್ಗೆ ಮಂಗಳೂರಿನ ಬಜರಂಗದಳ ಘಟಕ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ನಮಾಜ್ ಕುರಿತಾಗಿ ಸಂಬಂಧಪಟ್ಟವರಿಗೆ ತಿಳಿಸಲಾಗಿದೆ. ಮುಂದಿನ ಶುಕ್ರವಾರ ಮತ್ತೆ ಅದೇ ಜಾಗದಲ್ಲಿ ನಮಾಜ್ ನಡೆದರೆ ನೇರವಾಗಿ ಬಜರಂಗದಳ ಇದರ ವಿರುದ್ಧ ನೇರ ಕಾರ್ಯಾಚರಣೆ ನಡೆಸಲಿದೆ ಎಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಎಂಬುದಾಗಿ ಬರೆಯಲಾಗಿದೆ. ಈ ಪೋಸ್ಟ್ ಹಾಕಿದ ಬಗ್ಗೆ ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೆಡ್ ಲೈನ್ ಕರ್ನಾಟಕಕ್ಕೆ ದೃಢಪಡಿಸಿದ್ದು ನಾವೇ ಪೋಸ್ಟ್ ಹಾಕಿದ್ದಾಗಿ ತಿಳಿಸಿದ್ದಾರೆ.
ಘಟನೆ ಬಗ್ಗೆ ಕದ್ರಿ ಪೊಲೀಸರಲ್ಲಿ ಕೇಳಿದಾಗ, ಮಸೀದಿ ಕಮಿಟಿಯವರಿಗೆ ಹೇಳಿದ್ದೇವೆ, ಕೇಸು ಏನೂ ಆಗಿಲ್ಲ. ಕೆಲವೊಮ್ಮೆ ಹೆಚ್ಚು ಜನ ಬಂದಾಗ, ಮಸೀದಿ ಹೊರಭಾಗದಲ್ಲಿ ನಿಲ್ಲುವ ಸ್ಥಿತಿಯಾಗಿದೆ ಎಂದು ತಿಳಿಸಿದ್ದಾರೆ. ವಿಡಿಯೋ ಬಂದಿರುವ ಬಗ್ಗೆ ಜಾಗ್ರತೆ ಇರುವಂತೆ ತಿಳಿಸಿದ್ದೇವೆ ಎಂದಿದ್ದಾರೆ.
~ Namaz on the roads begin for the first time in Mangalore. Behind MAK Mall in Kankanady. pic.twitter.com/tmYxOwaUdn
— Jeetuavaral Hegde (@jeetuavaral) May 27, 2024
Mangalore Youths doing their namaz in the middle of the road near masjid at Kankandy went viral on social media, Bajrang Dal Sharan Pumpwell has warns of action if this continues next time.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
14-05-25 04:45 pm
HK News Desk
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm