ಬ್ರೇಕಿಂಗ್ ನ್ಯೂಸ್
25-05-24 09:01 pm Mangalore Correspondent ಕರಾವಳಿ
ಮಂಗಳೂರು, ಮೇ 25: ಲೋಕಸಭಾ ಚುನಾವಣೆ ಫಲಿತಾಂಶ ಬರುವುದಕ್ಕೂ ಮೊದಲೇ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹುದ್ದೆಯಲ್ಲಿದ್ದ ರಾಜೇಶ್ ಜಿ.ವಿ. ಅವರಿಗೆ ಕೊಕ್ ನೀಡಲಾಗಿದೆ. ದಿಢೀರ್ ಆಗಿ ಹುದ್ದೆಯಿಂದ ತೆಗೆದು ಹಾಕಿರುವುದು ಕರಾವಳಿಯ ಸಂಘ ಪರಿವಾರದೊಳಗೆ ತೀವ್ರ ಚರ್ಚೆಗೀಡಾಗಿದೆ.
ಆರೆಸ್ಸೆಸ್ ನಲ್ಲಿ ಪ್ರಚಾರಕ್ ಆಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಂತೂರು ಮೂಲದ ರಾಜೇಶ್ ಅವರನ್ನು 2022ರಲ್ಲಿ ಯಾರೂ ನಿರೀಕ್ಷೆ ಮಾಡದ ರೀತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. ಇದೀಗ ಅಷ್ಟೇ ಅನಿರೀಕ್ಷಿತ ಎನ್ನುವಂತೆ ಅವರನ್ನು ಆ ಸ್ಥಾನದಿಂದ ಕಿತ್ತು ಹಾಕಲಾಗಿದ್ದು, ಅವರಿಗೆ ಆರೆಸ್ಸೆಸ್ ನಲ್ಲಿ ಬೇರೆ ನಾಮ್ಕೇವಾಸ್ತೆ ಎನ್ನುವ ಜವಾಬ್ದಾರಿ ನೀಡಲಾಗಿದೆ. ಆರೆಸ್ಸೆಸ್ ಪ್ರಾಂತ ಸಾಮರಸ್ಯ ಸಹ ಸಂಯೋಜಕ ಎನ್ನುವ ಹುದ್ದೆ ಸೃಜಿಸಿ ಅಲ್ಲಿ ಕೂರಿಸಲಾಗಿದೆ.
2022ರ ಜುಲೈ ತಿಂಗಳಲ್ಲಿ ಆಗಿನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರಿಗೇ ತಿಳಿಯದ ರೀತಿ ರಾಜೇಶ್ ಜಿವಿ ಸಂಘಟನಾ ಕಾರ್ಯದರ್ಶಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಆನಂತರ, ಎದುರಾದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿತ್ತು. ಆಬಳಿಕ ನಳಿನ್ ಕುಮಾರ್ ಅವರನ್ನು ಬದಲಿಸಿ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಮಾಡಲಾಗಿತ್ತು. ಇದೀಗ ದಕ್ಷಿಣ ಕನ್ನಡ ಮೂಲದ ರಾಜ್ಯ ಸಂಘಟನಾ ಕಾರ್ಯದರ್ಶಿಗೂ ಕೊಕ್ ನೀಡಲಾಗಿದ್ದು ಉತ್ತರ ಕರ್ನಾಟಕ ಭಾಗದ ಆರೆಸ್ಸೆಸ್ ಪ್ರಮುಖರನ್ನು ಈ ಹುದ್ದೆಗೆ ನೇಮಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ದಿಢೀರ್ ಕಿಕ್ಕೌಟ್ ಮಾಡಿದ್ದೇಕೆ ಆರೆಸ್ಸೆಸ್ ?
ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ಕಾಯದೆ ದಿಢೀರ್ ಈ ರೀತಿಯ ಕ್ರಮ ಕೈಗೊಂಡಿರುವುದು ಮಂಗಳೂರು ಮತ್ತು ಕರಾವಳಿ ಭಾಗದಲ್ಲಿ ತೀವ್ರ ಚರ್ಚೆಗೊಳಗಾಗಿದೆ. ಕರಾವಳಿಯ ಆರೆಸ್ಸೆಸ್ ಪ್ರಮುಖರು ಮತ್ತು ಹಿಂದಿನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಜೊತೆಗೆ ಉತ್ತಮ ಸಂಬಂಧ ಹೊಂದಿಲ್ಲದೇ ಇದ್ದ ರಾಜೇಶ್ ಜಿವಿ ಅವರನ್ನು ಕಿತ್ತು ಹಾಕಿರುವುದಕ್ಕೆ ಕಾರ್ಯಕರ್ತರು ಕಾರಣಗಳನ್ನು ಹುಡುಕುತ್ತಿದ್ದಾರೆ. ಜಾಲತಾಣದಲ್ಲಿ ತಮಗೆ ತೋಚಿದಂತೆ ಕಾರಣಗಳನ್ನು ಬರೆದು ಹಾಕುತ್ತಿದ್ದಾರೆ. ವೈಯಕ್ತಿಕ ವಿಚಾರಗಳ ಕಾರಣಕ್ಕಾಗಿಯೇ ರಾಜೇಶ್ ಹುದ್ದೆ ಕಳಕೊಂಡಿದ್ದಾರೆ ಎನ್ನುತ್ತಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು ಎನ್ನುವಂತೆ ಸಣ್ಣ ಪ್ರಾಯದ ವ್ಯಕ್ತಿಗೆ ರಾಜ್ಯ ಸಂಘಟನಾ ಕಾರ್ಯದರ್ಶಿಯಂತಹ ಮಹತ್ವದ ಜವಾಬ್ದಾರಿ ನೀಡಲಾಗಿತ್ತು. ಬಿಜೆಪಿ ಮತ್ತು ಆರೆಸ್ಸೆಸ್ ನಡುವೆ ಸಮನ್ವಯಕಾರರ ರೀತಿ ಇರುವ ಈ ಜವಾಬ್ದಾರಿ ಹೊಂದಿದ್ದವರು ಪಕ್ಷದ ರಾಜ್ಯಾಧ್ಯಕ್ಷರ ಹತ್ತಿರದಲ್ಲಿ ಇರುತ್ತಾರೆ. ವಿಜಯೇಂದ್ರ ಜೊತೆಗೆ ಎಲ್ಲ ರೀತಿಯಲ್ಲೂ ತುಂಬ ಹತ್ತಿರದ ನಂಟು ಇಟ್ಟುಕೊಂಡಿದ್ದ ರಾಜೇಶ್, ಪಕ್ಷದಲ್ಲಿ ಬೆಳೆಯಬಹುದಾಗಿದ್ದ ಆಯಕಟ್ಟಿನ ಹುದ್ದೆಯಲ್ಲಿದ್ದರೂ ಯಾವುದೋ ಕಾರಣಕ್ಕೆ ತಮ್ಮ ಭವಿಷ್ಯಕ್ಕೆ ಕಲ್ಲು ಹಾಕಿಸಿಕೊಂಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಹಿಂದೆ ರಾಜ್ಯ ಸಂಘಟನಾ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಉಡುಪಿ ಮೂಲದ ಬಿಎಲ್ ಸಂತೋಷ್, ಆನಂತರ ಪಕ್ಷದಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸ್ಥಾನಕ್ಕೆ ಹೋಗಿದ್ದರು ಎನ್ನುವುದು ವಿಶೇಷ. ವಿಧಾನಸಭೆ ಸೋಲಿನ ಬಳಿಕ ಅವರನ್ನೂ ಬದಲಾವಣೆ ಮಾಡಲಾಗುತ್ತೆ ಎಂದು ಹೇಳಲಾಗಿದ್ದರೂ, ಆ ರೀತಿ ಆಗಿರಲಿಲ್ಲ.
Bjp state secretary Mangalorean Rajesh KV kicked out of party. He was a active member of RSS who hails from Kadaba, Dakshina Kannada. He has been given some other post in the Rss organisation.
23-08-25 10:40 pm
Bangalore Correspondent
HK Patil, Illegal Mining: 20 ಕೋಟಿ ಮೆಟ್ರಿಕ್ ಟನ...
23-08-25 09:56 pm
ಆ.23ರಿಂದ ಹಿಂದುಳಿದ ವರ್ಗಗಳ ಸಾಮಾಜಿಕ - ಶೈಕ್ಷಣಿಕ...
22-08-25 10:28 pm
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
Tumkur School, Compound News, Student: ಸ್ಕೂಲ್...
22-08-25 12:29 pm
23-08-25 04:58 pm
HK News Desk
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
ಚಿತ್ರನಟಿ ಆರೋಪ ಬೆನ್ನಲ್ಲೇ ಮಂಗಳಮುಖಿಯಿಂದಲೂ ದೂರು,...
22-08-25 01:11 pm
23-08-25 10:22 pm
Mangalore Correspondent
MP Brijesh Chowta, Mangalore: ಅಡಿಕೆ ಹಳದಿ ರೋಗ...
23-08-25 09:00 pm
Veerendra Heggade Reacts, Dharmasthala News:...
23-08-25 07:25 pm
ಆನಂದಾಶ್ರಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ "ಡೆನ್ನ ಡೆ...
23-08-25 07:02 pm
Mask Man Dharmasthala, Arrest, SIT: ಧರ್ಮಸ್ಥಳ...
23-08-25 03:04 pm
23-08-25 10:49 pm
Mangalore Correspondent
Sujatha Bhat, SIT, Dharmasthala Case; "ಸುಳ್ಳಜ...
23-08-25 06:21 pm
Dharmasthala Mask Man Arrest, SIT: ಧರ್ಮಸ್ಥಳ ಪ...
23-08-25 11:11 am
ಕ್ಲಾಸ್ ನಲ್ಲಿ ಹೊಡೆದಿದ್ದಕ್ಕೆ ಶಿಕ್ಷಕನ ಮೇಲೆ 9ನೇ ತ...
22-08-25 09:57 pm
Lucky Scheme, Shine Enterprises, Arrest, Mang...
22-08-25 09:17 pm