ಬ್ರೇಕಿಂಗ್ ನ್ಯೂಸ್
23-05-24 02:56 pm HK NEWS ಕರಾವಳಿ
ಮಂಗಳೂರು,ಶಾಸಕ ಹರೀಶ್ ಪೂಂಜ ಪೊಲೀಸರು, ತಹಸೀಲ್ದಾರನ್ನು ನಿಂದಿಸಿ ಬೆಳ್ತಂಗಡಿ ನಾಗರಿಕರಿಗೆ ಅವಮಾನ ಮಾಡಿದ್ದಾರೆ. ರೌಡಿಯಂತೆ ವರ್ತಿಸಿ ಇಡೀ ಜಿಲ್ಲೆಗೆ ಕಳಂಕ ತಂದಿದ್ದಾರೆ. ರೌಡಿ ರೀತಿ ವರ್ತಿಸುತ್ತಿರುವುದನ್ನು ನಾವು ಖಂಡಿಸುತ್ತೇವೆ. ತಾಕತ್ತಿದ್ದರೆ, ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಜನರಿಂದ ಚುನಾವಣೆ ಎದುರಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಹರೀಶ್ ಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಳ್ತಂಗಡಿ ಕ್ಷೇತ್ರವನ್ನು ರತ್ನವರ್ಮ ಹೆಗ್ಗಡೆ, ವೈಕುಂಠ ಬಾಳಿಗಾ, ಸುಬ್ಬಯ್ಯ ಹೆಗಡೆ, ವಸಂತ ಬಂಗೇರರಂತವರು ಪ್ರತಿನಿಧಿಸಿದ್ದರು. ವಸಂತ ಬಂಗೇರ ಐದು ಬಾರಿ ಶಾಸಕರಾಗಿ ಗೌರವ ತಂದುಕೊಟ್ಟಿದ್ದಾರೆ. ಹರೀಶ್ ಪೂಂಜ ಈಗ ವಸಂತ ಬಂಗೇರ ಮಾಡಲು ಹೋಗಿ ಎಲ್ಲೆ ಮೀರಿ ವರ್ತಿಸಿದ್ದಾರೆ. ಬಂಗೇರ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದವರು, ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಟ್ಟು ಕೆಲಸ ಮಾಡುತ್ತಿದ್ದರು. ಯಾವತ್ತೂ ಭ್ರಷ್ಟಾಚಾರಿ, ರೌಡಿಗಳ ಪರ ಕೆಲಸ ಮಾಡಿದವರಲ್ಲ.
ಬಿಜೆಪಿ ಕಾರ್ಯಕರ್ತ, ರೌಡಿಶೀಟರ್ ಶಶಿರಾಜ್ ಶೆಟ್ಟಿ, ಬೆಳ್ತಂಗಡಿಯಲ್ಲಿ ಕಲ್ಲು ಗಣಿಗಾರಿಕೆ, ಸ್ಯಾಂಡ್ ಮಾಫಿಯಾ ಮಾಡುತ್ತಿರುವ ವ್ಯಕ್ತಿ. ಆತನ್ನು ಪೊಲೀಸರು ಬಂಧಿಸಿದ್ದಕ್ಕೆ ಠಾಣೆಗೆ ನುಗ್ಗಿದ ಶಾಸಕ ಪೂಂಜ, ಇದು ನಿಮ್ಮ ಅಪ್ಪನ ಠಾಣೆಯಾ, ತಲೆ ಕಡೀರಿ ಎಂದು ಕೇಳುತ್ತಾರೆ. ಶಾಸಕರ ಮಾತನ್ನು ಜಿಲ್ಲೆಯ ಜನತೆ ಒಪ್ಪುತ್ತಾರೆಯೇ ಅಂತ ಕೇಳಬೇಕಾಗುತ್ತದೆ ಎಂದರು, ಈ ಹಿಂದೆ ಅರಣ್ಯ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ಬೈದು ಎಫ್ಐಆರ್ ಹಾಕಿಸಿಕೊಂಡಿದ್ದ ಹರೀಶ್ ಪೂಂಜ ಈಗ ಡಿಜೆ ಹಳ್ಳಿ ರೀತಿ ಠಾಣೆಗೆ ಬೆಂಕಿ ಹಚ್ಚುತ್ತೇವೆಂದು ಹೇಳುತ್ತಾರೆ. ಅಂದರೆ, ಅಲ್ಲಿಯೂ ಇವರ ಕೈವಾಡ ಇರಬಹುದು ಶಂಕೆ ಮೂಡುತ್ತದೆ.
ಒಟ್ಟು ಪ್ರಚಾರದಲ್ಲಿ ಇರಬೇಕು, ಒಳ್ಳೆಯದಕ್ಕೋ, ಕೆಟ್ಟದಕ್ಕೋ ಹೇಗಾದ್ರೂ ಪ್ರಚಾರದ ಹುಚ್ಚು ಹರೀಶ್ ಪೂಂಜ ತಲೆಗೆ ಹತ್ತಿದೆ. ಪೊಲೀಸರು ಅರೆಸ್ಟ್ ಮಾಡಲು ಮನೆಗೆ ಹೋದರೆ ಅವಿತುಕೊಳ್ಳುವ ಇವರು ತಮ್ಮ ಪಕ್ಷದ ಕಾರ್ಯಕರ್ತರನ್ನು ಮುಂದಿಟ್ಟು ಪೊಲೀಸರು ಜನರನ್ನು ನೋಡಿ ಹೆದರಿ ಹೋದರು ಅಂತ ಹೇಳುತ್ತಾರೆ. ಇನ್ನು ಸಿದ್ದರಾಮಯ್ಯ ಬಗ್ಗೆ ಮಾತನಾಡಲು ಅಷ್ಟು ಪ್ರಾಯ ಇವರಿಗೆ ಆಗಿಲ್ಲ, ರಾಜಕೀಯದಲ್ಲಿ ಅಷ್ಟು ಪಳಗಿದ್ದೂ ಇಲ್ಲ. ಅವರನ್ನು ಪ್ರಶ್ನಿಸುವುದಕ್ಕೆ ಇವರು ರಾಜಕೀಯದಲ್ಲಿ ಬಚ್ಚಾ ಇದ್ದಾರೆ ಎಂದರು.
ಸಣ್ಣ ಪ್ರಾಯದಲ್ಲಿ ಇವರಿಗೆ ಅಧಿಕಾರದ ಅಮಲು ಏರಿದೆ. ಹಾಗಾಗಿ ರೌಡಿ ರೀತಿ ವರ್ತನೆ ಮಾಡ್ತಿದಾರೆ, ಇದನ್ನು ನಾವು ಖಂಡಿಸುತ್ತೇವೆ, ಇವರ ವರ್ತನೆಯಿಂದಾಗಿ ತಾಲೂಕಿನ ಜನತೆ ಬೇಸತ್ತಿದ್ದಾರೆ. ತಾಕತ್ತಿದ್ದರೆ ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಮರು ಚುನಾವಣೆ ಎದುರಿಸಬೇಕು. ಬೆಳ್ತಂಗಡಿ ಜನ ಯಾವತ್ತೂ ಇಂತಹ ಶಾಸಕರನ್ನು ನೋಡಿಲ್ಲ. ಶಾಸಕ ಸ್ಥಾನಕ್ಕೆ, ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯಕ್ಕೆ ಕಪ್ಪು ಮಸಿ ಬಳಿಸಿದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ರಾಜಕಾರಣಿಗಳು, ಶಾಸಕರ ಬಗ್ಗೆ ವಿಶೇಷ ಗೌರವ ಇದೆ, ಅದನ್ನು ಮಣ್ಣುಪಾಲು ಮಾಡುವ ಯತ್ನ ಮಾಡಿದ್ದಾರೆ ಎಂದು ಹೇಳಿದರು.
Mangalore Mla Harish Poonja threats police inspector, shame to dakshina Kannada, congress Harish Kumar demands Resignation. Let him face the elections by resigning from BJP he added. Belthangady MLA Harish Poonja was under scrutiny as a case had been filed against him for allegedly making threats to the police. police team hd reached his esidence with intentions to make an arrest.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm