ಬ್ರೇಕಿಂಗ್ ನ್ಯೂಸ್
22-05-24 02:08 pm Mangalore Correspondent ಕರಾವಳಿ
ಮಂಗಳೂರು, ಮೇ 22: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಬಂಧನ ಭೀತಿಯಲ್ಲಿದ್ದಾರೆ. ಎರಡು ದಿನಗಳ ಅಂತರದಲ್ಲಿ ಬೆನ್ನು ಬೆನ್ನಿಗೆ ಎರಡು ಎಫ್ಐಆರ್ ದಾಖಲಾಗುತ್ತಿದ್ದಂತೆ ಪೊಲೀಸರು ಎಲರ್ಟ್ ಆಗಿದ್ದಾರೆ. ಶಾಸಕರ ವೇಣೂರು ಬಳಿಯ ಗರ್ಡಾಡಿಯ ಮನೆ ಆವರಣದಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಬಂಧನಕ್ಕೆ ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಮನೆಯ ಸುತ್ತ ಪೊಲೀಸರ ನಿಯೋಜನೆ ಆಗುತ್ತಿದ್ದಂತೆ ಸ್ಥಳದಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದ್ದಾರೆ. ಶಾಸಕರನ್ನು ಅರೆಸ್ಟ್ ಮಾಡೋದಾದ್ರೆ ನಮ್ಮನ್ನೂ ಅರೆಸ್ಟ್ ಮಾಡಿ ಎಂದು ಹೇಳತೊಡಗಿದ್ದಾರೆ. ಶಾಸರು ಕಾರ್ಯಕರ್ತರ ಪರವಾಗಿ ಪ್ರತಿಭಟನೆ ನಡೆಸಿದ್ದಾರೆ. ಅದಕ್ಕಾಗಿ ಬಂಧನ ಮಾಡೋದಾದ್ರೆ ಅವರೊಂದಿಗೆ ಅರೆಸ್ಟ್ ಆಗೋದಕ್ಕೆ ನಾವೂ ರೆಡಿಯಾಗಿದ್ದೇವೆ ಎಂದು ಹೇಳಿ ಪೊಲೀಸರ ವಿರುದ್ಧ ಕೂಟ ಹೆಣೆಯಲು ಆರಂಭಿಸಿದ್ದಾರೆ. ಶಾಸಕರ ಮನೆಗೆ ಬರುವ ರಸ್ತೆಯಲ್ಲಿ ಅಡ್ಡವಾಗಿ ಬೈಕ್ ಗಳನ್ನಿಟ್ಟು ಪೊಲೀಸರನ್ನು ತಡೆಯುವ ಯತ್ನ ಮಾಡಿದ್ದಾರೆ. ಆದರೆ ಎಸ್ಪಿ ರಿಷ್ಯಂತ್ ಸಿಂಗ್ ಮತ್ತು ಬೆಳ್ತಂಗಡಿ ಇನ್ಸ್ ಪೆಕ್ಟರ್ ನೇರವಾಗಿ ಕಾರ್ಯಾಚರಣೆ ನಡೆಸಿ ಶಾಸಕ ಹರೀಶ್ ಪೂಂಜರನ್ನು ಬಂಧಿಸುವ ಸಾಧ್ಯತೆಯಿದೆ.
ಕಲ್ಲು ಗಣಿಗಾರಿಕೆ ಗಲಾಟೆ ಏನು ?
ಯುವಮೋರ್ಚಾ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿಯನ್ನು ಬಂಧಿಸಿದ ಪೊಲೀಸರ ಕ್ರಮ ವಿರೋಧಿಸಿ ಶಾಸಕ ಹರೀಶ್ ಪೂಂಜಾ ರಾತ್ರೋರಾತ್ರಿ ಬೆಳ್ತಂಗಡಿ ಠಾಣೆಗೆ ನುಗ್ಗಿ ಅವಾಚ್ಯ ಪದಗಳಿಂದ ಪೊಲೀಸರನ್ನು ನಿಂದಿಸಿದ್ದರು. ಅಲ್ಲದೆ, ಪೊಲೀಸ್ ಠಾಣೆಯೇನು ನಿಮ್ಮ ಅಪ್ಪನ ಮನೆಯಾ ಎಂದು ಆವಾಜ್ ಹಾಕಿದ್ದರು. ಆನಂತರ, ಸೋಮವಾರ ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಆಯೋಜಿಸಿದ್ದ ಹರೀಶ್ ಪೂಂಜ, ಜಿಲ್ಲಾ ಪೊಲೀಸ್ ಅಧಿಕಾರಿಯನ್ನೇ ಕಾಂಗ್ರೆಸ್ ಏಜಂಟ್ ಎಂದು ನಿಂದಿಸಿದ್ದಲ್ಲದೆ, ತಲೆಯಲ್ಲಿ ಕೂದಲು ಇಲ್ಲವೆಂದು ಅಣಕಿಸುವ ಮಾತನ್ನಾಡಿದ್ದರು. ಅಲ್ಲದೆ, ಕಾರ್ಯಕರ್ತರ ರಕ್ಷಣೆಗಾಗಿ ಪೊಲೀಸರ ಕಾಲರ್ ಹಿಡಿಯುವುದಕ್ಕೆ ರೆಡಿ ಇದ್ದೇನೆ ಎಂದು ಹೇಳಿ ಪೊಲೀಸರನ್ನೇ ಬೆದರಿಸಿದ್ದರು. ಕೆಜೆ ಹಳ್ಳಿ, ಡಿಜೆ ಹಳ್ಳಿಯಲ್ಲಾದ ರೀತಿಯ ಘಟನೆಗೆ ಕಾರಣವಾದೀತು ಎಂದು ಪರೋಕ್ಷವಾಗಿ ದೊಂಬಿ ಎಬ್ಬಿಸುವ ಮಾತುಗಳನ್ನಾಡಿದ್ದರು.
ಬೆಳ್ತಂಗಡಿ ಠಾಣೆಯಲ್ಲಿ ಎರಡು ಎಫ್ಐಆರ್
ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಶಾಸಕ ಹರೀಶ್ ಪೂಂಜ ವಿರುದ್ಧ ಪ್ರತ್ಯೇಕ ಎರಡು ಎಫ್ಐಆರ್ ದಾಖಲಾಗಿದೆ. ಮೊದಲ ಪ್ರಕರಣದಲ್ಲಿ ಶಾಸಕ ಹರೀಶ್ ಪೂಂಜ ಮೇ 18ರಂದು ಪೊಲೀಸ್ ಠಾಣೆಗೆ ನುಗ್ಗಿ ಆರೋಪಿಯನ್ನು ಬಿಡುಗಡೆ ಮಾಡುವಂತೆ ಹೇಳಿ ಠಾಣಾಧಿಕಾರಿಗಳನ್ನು ನಿಂದಿಸಿ, ಒತ್ತಡ ಹೇರಿದ್ದಾರೆ. ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪೊಲೀಸ್ ಇಲಾಖೆಯ ಬಗ್ಗೆ ಅಗೌರವ ಸೂಚಿಸುವಂತೆ ಮಾತನಾಡಿ ದುರ್ವರ್ತನೆ ತೋರಿದ್ದಾರೆ ಎಂದು ಹರೀಶ್ ಪೂಂಜ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಸೆಕ್ಷನ್ 353 ಮತ್ತು 504 ಅಡಿ ಕೇಸು ದಾಖಲಾಗಿತ್ತು.
ಮತ್ತೊಂದು ಪ್ರಕರಣದಲ್ಲಿ ಮೇ 20ರಂದು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಕಾನೂನು ಬಾಹಿರವಾಗಿ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಶಾಸಕ ಹರೀಶ್ ಪೂಂಜ ಮತ್ತು ಇತರರು ಜನರನ್ನು ಗುಂಪು ಸೇರಿಸಿ ಪ್ರತಿಭಟನಾ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಹರೀಶ್ ಪೂಂಜಾ ಪೊಲೀಸರ ಕಾಲರ್ ಹಿಡಿಯುತ್ತೇನೆ ಎಂದು ಹೇಳಿದ್ದಲ್ಲದೆ, ಬೆಂಗಳೂರಿನ ಕೆಜೆ ಹಳ್ಳಿ, ಡಿಜೆ ಹಳ್ಳಿಯಲ್ಲಾದ ರೀತಿಯ ಘಟನೆಯನ್ನು ಬೆಳ್ತಂಗಡಿ ಠಾಣೆಗೂ ಮಾಡಿಸುತ್ತೇನೆ ಎಂದು ಬೆದರಿಸಿ ಪೊಲೀಸ್ ಅಧಿಕಾರಿಗಳಿಗೆ ಸಾರ್ವಜನಿಕವಾಗಿ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143, 147, 341, 504, 506 ಪ್ರಕಾರ ಎಫ್ಐಆರ್ ದಾಖಲಾಗಿದೆ.
ಶಾಸಕನ ಕ್ರಮಕ್ಕೆ ಮೇಲಿನಿಂದ ಸೂಚನೆ
ಬೆನ್ನು ಬೆನ್ನಿಗೆ ಎಫ್ಐಆರ್ ದಾಖಲಾಗುತ್ತಿದ್ದಂತೆ ಕಾಂಗ್ರೆಸ್ ಸರಕಾರ ಬಿಜೆಪಿ ಶಾಸಕನ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದೆ ಎನ್ನಲಾಗುತ್ತಿದ್ದು, ಇಂದು ಬೆಳಗ್ಗೆ 11 ಗಂಟೆ ವೇಳೆಗೆ ಪೊಲೀಸರು ಶಾಸಕರ ಗರ್ಡಾಡಿಯ ಮನೆಗೆ ಆಗಮಿಸಿದ್ದಾರೆ. ಶಾಸಕನ ಬಂಧನಕ್ಕೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಪೊಲೀಸ್ ಇಲಾಖೆ, ಪೊಲೀಸರ ಬಗ್ಗೆ ಅವಹೇಳನಕಾರಿ ನಿಂದಿಸಿದ್ದನ್ನು ಗಂಭೀರ ಪರಿಗಣಿಸಬೇಕು ಎಂದು ಸಾರ್ವಜನಿಕ ವಲಯದಲ್ಲಿ ಆಗ್ರಹ ಕೇಳಿಬರುತ್ತಿದ್ದಂತೆ ಕಾಂಗ್ರೆಸ್ ನಾಯಕರು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಪೊಲೀಸ್ ಪವರ್ ತಿಳಿಯದ ಶಾಸಕ
ಒಬ್ಬ ಜನಪ್ರತಿನಿಧಿಯಾಗಿ, ಒಂದು ಕ್ಷೇತ್ರದ ಶಾಸಕನಾಗಿ ಪೊಲೀಸರ ಜೊತೆಗೆ, ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕೆಂದು ತಿಳಿಯದ ಬೆಳ್ತಂಗಡಿ ಶಾಸಕನ ನಡೆ ತೀರಾ ಉದ್ಧಟತನದ್ದು. ಒಬ್ಬ ಪೊಲೀಸ್ ಅಧಿಕಾರಿಗೆ ಅವಾಚ್ಯವಾಗಿ ನಿಂದಿಸಿದ ಮಾತ್ರಕ್ಕೆ ಆತನನ್ನು ಬಾಯಿ ಮುಚ್ಚಿಸಬಹುದು ಎಂದ್ಕೊಂಡಿರುವುದೇ ಈ ವ್ಯಕ್ತಿಯ ಮೂರ್ಖತನ. ಒಂದು ಠಾಣೆಯಲ್ಲಿ ಎಫ್ಐಆರ್ ದಾಖಲಾದರೆ, ಅಪರಾಧ ಪ್ರಮಾಣದ ಗಂಭೀರತೆ ಆಧರಿಸಿ ಆರೋಪಿಯನ್ನು ಬಂಧಿಸುವ ಪೂರ್ಣ ಅಧಿಕಾರ ಠಾಣಾಧಿಕಾರಿಗೆ ಇರುತ್ತದೆ. ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಅಂದ್ರೆ, ಆತನಿಗೆ ಒಬ್ಬ ಪ್ರಧಾನಿ ಅಥವಾ ಮುಖ್ಯಮಂತ್ರಿ ಮೇಲೂ ಎಫ್ಐಆರ್ ದಾಖಲು ಮಾಡಬಹುದು. ಆ ಅಧಿಕಾರ ಇರುವುದು ಒಬ್ಬ ಇನ್ಸ್ ಪೆಕ್ಟರ್ ಗೆ ಮಾತ್ರ. ಅಲ್ಲದೆ, ಒಂದು ಠಾಣೆಯಲ್ಲಿ ಅಪರಾಧ ಪ್ರಕರಣಕ್ಕೆ ಎಫ್ಐಆರ್ ದಾಖಲಾದರೆ ಭಾರತ ದೇಶದ ಯಾವುದೇ ಮೂಲೆಯಲ್ಲಿ ಅಡಗಿದ್ದರೂ ಆತನನ್ನು ಬಂಧಿಸುವ ಅಧಿಕಾರವೂ ಆತನಿಗಿರುತ್ತದೆ. ಅದು ಭಾರತದ ಸಂವಿಧಾನ ಪೊಲೀಸ್ ಇಲಾಖೆಗೆ ಕೊಟ್ಟಿರುವ ಅಧಿಕಾರ.
ಕಾನೂನು ಪದವೀಧರನೆಂದು ಹೇಳಿಕೊಳ್ಳುವ ಶಾಸಕ ಹರೀಶ್ ಪೂಂಜನ ಮಾತು, ನಡವಳಿಕೆ ನೋಡಿದರೆ ಈತ ಪೊಲೀಸ್ ಪವರನ್ನೇ ತಿಳಿದುಕೊಂಡಿಲ್ಲ ಅನ್ಸುತ್ತೆ. ಸಾಮಾನ್ಯವಾಗಿ ಜನಸಾಮಾನ್ಯನ ಮೇಲೆ ಎಫ್ಐಆರ್ ದಾಖಲಾದ ಬೆನ್ನಲ್ಲೇ ಪೊಲೀಸರು ಕ್ರಮ ಜರುಗಿಸಿದರೆ, ಶಾಸಕರ ಮೇಲೆ ಕೇಸು ದಾಖಲಾದರೂ ಕ್ರಮ ಜರುಗಿಸದಿರುವುದೇ ಇಂತಹ ವೈರುಧ್ಯಗಳಿಗೆ ಕಾರಣ ಎನ್ನಬೇಕು. ಶಾಸಕನ ವಿರುದ್ಧ ಕ್ರಮ ಜರುಗಿಸಿದರೆ, ಅದರಿಂದ ಆತನಿಗೆ ಮೈನಸ್ ಆಗುತ್ತೆ ಬಿಟ್ಟರೆ ಪೊಲೀಸರಿಗೆ ಕೆಟ್ಟ ಹೆಸರು ಬರುವುದಿಲ್ಲ.
Mangalore Chances of Belthangady MLA Harish Poonja arrest for threatening police inspector after the video went viral.
23-08-25 10:40 pm
Bangalore Correspondent
HK Patil, Illegal Mining: 20 ಕೋಟಿ ಮೆಟ್ರಿಕ್ ಟನ...
23-08-25 09:56 pm
ಆ.23ರಿಂದ ಹಿಂದುಳಿದ ವರ್ಗಗಳ ಸಾಮಾಜಿಕ - ಶೈಕ್ಷಣಿಕ...
22-08-25 10:28 pm
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
Tumkur School, Compound News, Student: ಸ್ಕೂಲ್...
22-08-25 12:29 pm
23-08-25 04:58 pm
HK News Desk
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
ಚಿತ್ರನಟಿ ಆರೋಪ ಬೆನ್ನಲ್ಲೇ ಮಂಗಳಮುಖಿಯಿಂದಲೂ ದೂರು,...
22-08-25 01:11 pm
23-08-25 10:22 pm
Mangalore Correspondent
MP Brijesh Chowta, Mangalore: ಅಡಿಕೆ ಹಳದಿ ರೋಗ...
23-08-25 09:00 pm
Veerendra Heggade Reacts, Dharmasthala News:...
23-08-25 07:25 pm
ಆನಂದಾಶ್ರಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ "ಡೆನ್ನ ಡೆ...
23-08-25 07:02 pm
Mask Man Dharmasthala, Arrest, SIT: ಧರ್ಮಸ್ಥಳ...
23-08-25 03:04 pm
23-08-25 10:49 pm
Mangalore Correspondent
Sujatha Bhat, SIT, Dharmasthala Case; "ಸುಳ್ಳಜ...
23-08-25 06:21 pm
Dharmasthala Mask Man Arrest, SIT: ಧರ್ಮಸ್ಥಳ ಪ...
23-08-25 11:11 am
ಕ್ಲಾಸ್ ನಲ್ಲಿ ಹೊಡೆದಿದ್ದಕ್ಕೆ ಶಿಕ್ಷಕನ ಮೇಲೆ 9ನೇ ತ...
22-08-25 09:57 pm
Lucky Scheme, Shine Enterprises, Arrest, Mang...
22-08-25 09:17 pm