ಬ್ರೇಕಿಂಗ್ ನ್ಯೂಸ್
18-05-24 05:13 pm Mangalore Correspondent ಕರಾವಳಿ
ಮಂಗಳೂರು, ಮೇ.18: ಕರಾವಳಿ ಜನರು ರಾಷ್ಟ್ರೀಯತೆ, ಹಿಂದುತ್ವದ ಮೇಲೆ ಓಟ್ ಹಾಕುತ್ತಾರೆಂಬ ಭಾವನೆ ಇದೆ. ಒಂದು ರೀತಿ ಟೇಕನ್ ಫಾರ್ ಗ್ರಾಂಟೆಡ್ ಎನ್ನುವ ರೀತಿ. ಆ ರೀತಿಯ ಭಾವನೆಯನ್ನು ಹೋಗಲಾಡಿಸಿ, ರಾಷ್ಟ್ರೀಯ ನಾಯಕರಿಗೆ ಗಟ್ಟಿ ಸಂದೇಶ ನೀಡಬೇಕೆಂಬ ನೆಲೆಯಲ್ಲಿ ಚುನಾವಣಾ ಕಣಕ್ಕಿಳಿದಿದ್ದೇನೆ. ಕರಾವಳಿಯ ಮತದಾರರು ಅವಕಾಶ ನೀಡುತ್ತಾರೆಂಬ ವಿಶ್ವಾಸ ಇದೆ ಎಂದು ವಿಧಾನ ಪರಿಷತ್ತಿನ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ ಹೇಳಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪಕ್ಷದಲ್ಲಿ ಸೀನಿಯಾರಿಟಿ ಮೇಲೆ ಯಾರಿಗೇ ಆದರೂ ಅವಕಾಶ ನೀಡುತ್ತಿದ್ದರೆ ನನಗೆ ಬೇಜಾರು ಆಗುತ್ತಿರಲಿಲ್ಲ. ಆದರೆ ಹಣ, ಜಾತಿಗೆ ಮಣೆ ಹಾಕಿದ್ದಾರೆ. ಕರಾವಳಿ ಜನರನ್ನು ಕಡೆಗಣಿಸಿದ್ದಾರೆ, ನನ್ನದು ಸಣ್ಣ ಜಾತಿ. ಮೂರು ಬಾರಿ ಶಾಸಕನಾಗಿ ಕ್ಷೇತ್ರದಲ್ಲಿ ಯಾರು ನಿಂತರೂ ಗೆಲ್ಲುವಷ್ಟು ಪಕ್ಷವನ್ನು ಬೆಳೆಸಿದ್ದೇನೆ. ವಿಧಾನಸಭೆ ಚುನಾವಣೆಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಮೀನುಗಾರ ಸಮುದಾಯಕ್ಕೆ ಅವಕಾಶ ನೀಡಬೇಕೆಂದು ನನ್ನ ಕ್ಷೇತ್ರದಲ್ಲಿ ಯಶಪಾಲ್ ಸುವರ್ಣಗೆ ಅವಕಾಶ ನೀಡಿದರು,
ಮನಸ್ಸಿಗೆ ನೋವಾದರೂ, ಪಕ್ಷದ ವಿರುದ್ಧ ಹೋಗಿಲ್ಲ. ಚುನಾವಣೆ ಗೆಲುವಿಗಾಗಿ ಕೆಲಸ ಮಾಡಿದ್ದೇನೆ. ಆಗಲೇ ಪದವೀಧರ ಕ್ಷೇತ್ರದಲ್ಲಿ ಆಯನೂರು ಮಂಜುನಾಥ್ ಜೆಡಿಎಸ್ಸಿಗೆ ಹೋಗಿದ್ದರಿಂದ ಆ ಕ್ಷೇತ್ರವನ್ನು ನನಗೆ ಕೊಡುವಂತೆ ಹೇಳಿದ್ದೆ, ಅಂದಿನಿಂದಲೇ ಕೆಲಸದಲ್ಲಿಯೂ ತೊಡಗಿದ್ದೆ. ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದ ಪ್ರಭಾರ ಕೊಟ್ಟಾಗ 42 ದಿನಗಳ ಕಾಲ ಅಲ್ಲಿಯೇ ಇದ್ದು ಕೆಲಸ ಮಾಡಿದ್ದೇನೆ, ಮೊನ್ನೆ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಪಕ್ಷದ ಕಚೇರಿಯಲ್ಲೇ ಇದ್ದೆ. ಎರಡು ಹೆಸರು ಮಾತ್ರ ಹೋಗಿದೆ, ನಿಮ್ಮದೇ ಹೆಸರು ಬರುತ್ತದೆ ಎಂದು ಹೇಳುತ್ತ ಬಂದಿದ್ದರು. ಟಿಕೆಟ್ ನನ್ನ ಬದಲು ಒಂದೂವರೆ ವರ್ಷದ ಮೊದಲು ಪಕ್ಷಕ್ಕೆ ಬಂದಿದ್ದ ಧನಂಜಯ ಸರ್ಜಿ ಪಾಲಾಗಿತ್ತು.
ಶಿವಮೊಗ್ಗದಲ್ಲಿ ಹರ್ಷ ಕೊಲೆಯಾದಾಗ, ಟಿಪ್ಪು ಸುಲ್ತಾನ್ ಕಟೌಟ್ ಹಾಕಿದಾಗ ಧನಂಜಯ ಸರ್ಜಿ ಕಾಂಗ್ರೆಸಿನಲ್ಲಿದ್ದು ಬಿಜೆಪಿ ವಿರುದ್ಧ ಹೋರಾಟ ಮಾಡಿದ್ದಾರೆ. ಕಾಂಗ್ರೆಸ್, ಕಮ್ಯುನಿಸ್ಟ್, ಮುಸ್ಲಿಮರನ್ನು ಸೇರಿಸಿ ಶಾಂತಿಗಾಗಿ ನಡಿಗೆ ಕಾರ್ಯಕ್ರಮ ಆಯೋಜಿಸಿದ್ದರಲ್ಲೂ ಇವರ ಪಾತ್ರ ಇದೆ. ಪಕ್ಷದ ಸಿದ್ಧಾಂತ ತಿಳಿಯದ ವ್ಯಕ್ತಿಯನ್ನು ಪದವೀಧರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿಸಿದ್ದಾರೆ. ಈ ಚುನಾವಣೆ ಪಕ್ಷದ ಮೇಲೆ ನಡೆಯುವುದಿಲ್ಲ. ಕೇವಲ ಅಭ್ಯರ್ಥಿ ಮೇಲೆ ನಡೆಯುತ್ತದೆ. ಕರಾವಳಿ ಜನರು ಹಿಂದುತ್ವ, ಪಕ್ಷದ ಸಿದ್ಧಾಂತ ಪರ ಇದ್ದಾರೆ. ಹಿಂದಿನಿಂದಲೂ ಪಕ್ಷ, ಸಿದ್ಧಾಂತಕ್ಕಾಗಿ ದುಡಿದ ನನ್ನನ್ನು ಗುರುತಿಸಿ ಮತ ಹಾಕಬೇಕು ಎಂದು ರಘುಪತಿ ಭಟ್ ಕೇಳಿಕೊಂಡರು.
ನಿಮಗೆ ಯಾರು ಟಿಕೆಟ್ ತಪ್ಪಿಸಿದ್ದು ಎಂಬ ನೇರ ಪ್ರಶ್ನೆಗೆ, ನೇರವಾಗಿ ಉತ್ತರ ನೀಡದ ರಘುಪತಿ ಭಟ್, ಯಾರು ತಪ್ಪಿಸಿದ್ದೆಂದು ಹೇಗೆ ಹೇಳೋದು.. ಕೊನೆಯ ಕ್ಷಣದ ವರೆಗೂ ಟಿಕೆಟ್ ಸಿಗುವ ನಿರೀಕ್ಷೆಯಿತ್ತು. ಹಾಗೆಂದು ಲಾಬಿ ನಡೆಸುವುದಕ್ಕೆ, ಓಲೈಸುವುದಕ್ಕೆ ಹೋಗಿರಲಿಲ್ಲ. ಬಿಜೆಪಿಯಲ್ಲೂ ಕಾಂಗ್ರೆಸ್ ರೀತಿ ಗಾಡ್ ಫಾದರ್ ಸಂಸ್ಕೃತಿ ಬಂದಿದೆ. ಗಣಪತಿ ಶಿವನಿಗೆ ಸುತ್ತು ಹೊಡೆದಂತೆ ಮಾಡಿದರೆ ಗರ್ಭಗೃಹದ ಸಂಸ್ಕೃತಿ ಇದೆ ಎಂದರು, ಒಟ್ಟು ಪದವೀಧರ ಕ್ಷೇತ್ರದಲ್ಲಿ 85 ಸಾವಿರ ಮತದಾರರಿದ್ದಾರೆ. ದಕ್ಷಿಣ ಕನ್ನಡ, ಉುಡುಪಿ ಜಿಲ್ಲೆಯಲ್ಲಿ 38 ಸಾವಿರದಷ್ಟು ಮತದಾರರಿದ್ದಾರೆ. ಹಾಗಾಗಿ, ಈ ಎರಡು ಜಿಲ್ಲೆಗಳ ಮೇಲೆ ಹೆಚ್ಚು ನಿರೀಕ್ಷೆ ಹೊಂದಿದ್ದೇನೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಬಿಜೆಪಿ ಮುಖಂಡ ನವೀನ್ಚಂದ್ರ, ಶಿವಚರಣ್ ಶೆಟ್ಟಿ ಇದ್ದರು.
Former Udupi MLA Raghupati Bhat slams BJP, says party is working on with God father politics. Holding press meet at the press club in Mangalore he stated that party is giving position and power based on caste and money he added.
08-11-25 12:38 pm
HK News Desk
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
07-11-25 11:20 pm
Mangalore Correspondent
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm