ಬ್ರೇಕಿಂಗ್ ನ್ಯೂಸ್
16-05-24 09:59 pm Mangalore Correspondent ಕರಾವಳಿ
ಮಂಗಳೂರು, ಮೇ.16: ಮಾನಸಿಕವಾಗಿ ಗಲಿಬಿಲಿಗೆ ಒಳಗಾದ ಮಹಿಳೆಯೊಬ್ಬರು ಆಟೋದಲ್ಲಿ ಬಜ್ಪೆ ಏರ್ಪೋರ್ಟ್ ತೆರಳಿದ್ದು, ಅಲ್ಲಿ ಹೋದ ಬಳಿಕ ದಿಕ್ಕು ತೋಚದಂತೆ ತಿರುಗಾಡಿ ಕೊನೆಗೆ ಭದ್ರತಾ ಸಿಬಂದಿಯಿಂದ ರಕ್ಷಣೆಗೊಳಗಾದ ಘಟನೆ ನಡೆದಿದೆ.
ಕದ್ರಿ ಠಾಣೆ ವ್ಯಾಪ್ತಿಯ ನಿವಾಸಿ ಅಂದಾಜು 35 ವರ್ಷದ ಮಹಿಳೆಯೊಬ್ಬರು ಮೇ 14ರಂದು ಸಂಜೆ ಮಿಸ್ಸಿಂಗ್ ಆಗಿದ್ದರು. ಕೆಲ ಹೊತ್ತಿನಲ್ಲಿ ಮನೆಯವರು ಮಹಿಳೆ ನಾಪತ್ತೆಯಾದ ಬಗ್ಗೆ ಕದ್ರಿ ಪೊಲೀಸರಿಗೂ ಮಾಹಿತಿ ನೀಡಿದ್ದರು. ಹುಡುಕಾಟವನ್ನೂ ಶುರು ಮಾಡಿದ್ದರು.
ಮಹಿಳೆ ನೇರವಾಗಿ ಆಟೋ ಹಿಡಿದು ಬಜ್ಪೆ ಏರ್ಪೋರ್ಟಿನತ್ತ ತೆರಳಿದ್ದು, ಯಾರೋ ವಿದೇಶದಿಂದ ಬರಲಿಕ್ಕಿದ್ದಾರೆ, ಅವರನ್ನು ಕರೆದೊಯ್ಯಲು ಬಂದಿದ್ದಾಗಿ ಭದ್ರತಾ ಸಿಬಂದಿಯಲ್ಲಿ ತಿಳಿಸಿದ್ದಾರೆ. ಆದರೆ ಯಾರು ಬರಲಿದ್ದಾರೆ, ಎಲ್ಲಿಂದ ಬರುವುದು, ಯಾವ ಫ್ಲೈಟ್ ಎನ್ನುವ ಪ್ರಶ್ನೆ ಕೇಳಿದರೆ, ಆಕೆಯ ಬಳಿ ಉತ್ತರ ಇರಲಿಲ್ಲ. ಏನೋ ಎಡವಟ್ಟು ಆಗಿದೆಯೆಂದು ಅಲ್ಲಿದ್ದ ಸ್ಥಳೀಯ ಮಹಿಳಾ ಸಿಬಂದಿಯೂ ಪ್ರಶ್ನೆ ಮಾಡಿದ್ದಾರೆ. ಬಳಿಕ ವಿಮಾನ ನಿಲ್ದಾಣದಿಂದ ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ಬಳಿ ನೀವು ಎಲ್ಲಿಂದ ಬಂದಿರೋದು ಅಂತ ಕೇಳಿದಾಗ, ಕದ್ರಿ ಎಂದು ಉತ್ತರ ನೀಡಿದ್ದಾರೆ. ಅದರಂತೆ, ಬಜ್ಪೆ ಪೊಲೀಸರು ಕದ್ರಿ ಠಾಣೆಗೆ ಮಾಹಿತಿ ನೀಡಿದಾಗ ಮಹಿಳೆ ಮಿಸ್ಸಿಂಗ್ ವಿಷಯ ತಿಳಿದುಬಂದಿದೆ.
ಕೂಡಲೇ ಮನೆಯವರಿಗೆ ಮಾಹಿತಿ ನೀಡಿದ್ದು, ರಾತ್ರಿ 10.30ರ ವೇಳೆಗೆ ಮನೆಮಂದಿ ಏರ್ಪೋರ್ಟ್ ತಲುಪಿದ್ದಾರೆ. ವಿಮಾನ ನಿಲ್ದಾಣದ ಭದ್ರತಾ ಸಿಬಂದಿ, ಬಜ್ಪೆ ಮತ್ತು ಕದ್ರಿ ಪೊಲೀಸರ ಸಕಾಲಿಕ ಪ್ರಯತ್ನದಿಂದಾಗಿ ಮಾನಸಿಕವಾಗಿ ಗೊಂದಲಕ್ಕೀಡಾದ ಮಹಿಳೆ ಮರಳಿ ಮನೆ ಸೇರಿದ್ದಾರೆ.
Stakeholders at Mangaluru International Airport acted in unison with a sense of purpose to unite an apparently disturbed woman with her family late on May 14. Security supervisor and staff, customer service and guest relations executives, Airport Security Group personnel of CISF, along with duty terminal manager and an executive in the security department, coordinated with local law enforcement agency to ensure a safe and happy ending.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm