ಬ್ರೇಕಿಂಗ್ ನ್ಯೂಸ್
12-05-24 06:30 pm Mangalore Correspondent ಕರಾವಳಿ
ಮಂಗಳೂರು, ಮೇ 12: ಟಿವಿ ವಾಹಿನಿಗಳಲ್ಲಿ ಕುಡಿಯುವುದು, ಎರ್ರಾಬಿರ್ರಿ ವಾಹನ ಓಡಿಸುವುದು, ಸಂಚಾರ ನಿಯಮಗಳ ಉಲ್ಲಂಘನೆ ಮಾಡುವ ದೃಶ್ಯಗಳನ್ನು ತೋರಿಸುವುದು ಮಾಮೂಲಿ ಎನ್ನುವಂತಾಗಿದೆ. ಇಂಥದ್ದರಲ್ಲಿ ಇಲ್ಲೊಬ್ಬರು ಕನ್ನಡ ಟಿವಿ ಸೀರಿಯಲ್ ನಲ್ಲಿ ಬಂದ ದೃಶ್ಯವೊಂದರಲ್ಲಿ ಹೆಲ್ಮೆಟ್ ಹಾಕದೆ ಸ್ಕೂಟರ್ ಓಡಿಸಿದ್ದಾರೆ ಎಂಬುದನ್ನೇ ನೆಪವಾಗಿಟ್ಟು ಪೊಲೀಸರಿಗೆ ದೂರು ಕೊಟ್ಟು ದಂಡ ವಿಧಿಸುವಂತೆ ಮಾಡಿದ ಪ್ರಸಂಗ ನಡೆದಿದೆ.
ಕನ್ನಡದ ಖಾಸಗಿ ಟಿವಿ ವಾಹಿನಿಯಲ್ಲಿ ಸೀತಾರಾಮ ಎಂಬ ಸೀರಿಯಲ್ ಪ್ರಸಾರವಾಗುತ್ತಿದ್ದು, ಇದರಲ್ಲಿ ದ್ವಿಚಕ್ರ ವಾಹನದಲ್ಲಿ ಮಹಿಳೆಯೊಬ್ಬರು ಹಿಂಬದಿ ಸವಾರೆಯಾಗಿ ಹೆಲ್ಮೆಟ್ ಹಾಕದೆ ಪ್ರಯಾಣಿಸಿದ್ದಾರೆ ಎಂಬ ಬಗ್ಗೆ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಜಯಪ್ರಕಾಶ್ ಎಂಬವರು 2023ರ ಆಗಸ್ಟ್ 24ರಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದರು. ತನಿಖೆ ಎತ್ತಿಕೊಂಡ ಕದ್ರಿ ಸಂಚಾರ ಪೂರ್ವ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್, ವಾಹಿನಿಯ ಡೈರೆಕ್ಟರ್ ಮೋಹನ್ ಕುಮಾರ್, ಮಹಿಳೆ ಸವಾರಿ ಮಾಡುತ್ತಿದ್ದ ದ್ವಿಚಕ್ರ ವಾಹನದ ಮಾಲೀಕರು ಹಾಗೂ ಧಾರಾವಾಹಿ ನಿರ್ದೇಶಕ ಮಧುಸೂದನ್ ಅವರಿಗೆ ನೋಟೀಸ್ ನೀಡಿದ್ದರು. ನೋಟೀಸಿಗೆ ಉತ್ತರಿಸಿದ್ದ ಧಾರಾವಾಹಿ ತಂಡವು, ಆ ದೃಶ್ಯವನ್ನು ಬೆಂಗಳೂರಿನ ನಂದಿನಿ ಲೇಔಟ್ ಪ್ರದೇಶದಲ್ಲಿ ಚಿತ್ರೀಕರಿಸಲಾಗಿತ್ತು ಎಂದು ಮಾಹಿತಿ ನೀಡಿದ್ದರು. ಅದರಂತೆ, ಪ್ರಕರಣವನ್ನು ನಂದಿನಿ ಲೇಔಟ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು.
ದೂರುದಾರ ಜಯಪ್ರಕಾಶ್ ಬೆಂಬಿಡದೆ ಬೆಂಗಳೂರಿನ ನಂದಿನಿ ಲೇಔಟ್ ಠಾಣೆಗೆ 2024ರ ಫೆ.27ರಂದು ಪತ್ರ ಬರೆದಿದ್ದು, ದೂರಿನ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಕೇಳಿದ್ದರು. ಇದರಂತೆ, ಪೊಲೀಸರು ಧಾರಾವಾಹಿ ತಂಡಕ್ಕೆ ಮತ್ತೆ ನೋಟೀಸ್ ಜಾರಿಗೊಳಿಸಿದ್ದರು. ಧಾರಾವಾಹಿಯ 14ನೇ ಎಪಿಸೋಡಿನಲ್ಲಿ ಮಹಿಳೆಯೊಬ್ಬರು ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಇಲ್ಲದೆ ಪ್ರಯಾಣಿಸುವ ದೃಶ್ಯ ಪ್ರಸಾರವಾಗಿದ್ದು, ಇದು ರಾಜಾರೋಷ ಸಂಚಾರ ನಿಯಮದ ಉಲ್ಲಂಘನೆಯಾಗಿದೆ. ಈ ಬಗ್ಗೆ ಮೂರು ದಿನದೊಳಗೆ ವಿಚಾರಣೆಗೆ ಹಾಜರಾಗಬೇಕು ಎಂದು ಇತ್ತೀಚೆಗೆ ಮೇ 8ರಂದು ಧಾರಾವಾಹಿ ತಂಡದ ಪ್ರೊಡಕ್ಷನ್ ಮ್ಯಾನೇಜರ್ ಗೆ ನೋಟೀಸ್ ನೀಡಲಾಗಿತ್ತು.
ವಿಚಾರಣೆ ವೇಳೆ ತಪ್ಪನ್ನು ಒಪ್ಪಿಕೊಂಡಿರುವ ಧಾರಾವಾಹಿ ತಂಡವು ಇನ್ನು ಮುಂದೆ ನಮ್ಮ ಧಾರಾವಾಹಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವುದಿಲ್ಲ. ನಿಯಮ ಪಾಲಿಸುತ್ತೇವೆ ಎಂದು ಮುಚ್ಚಳಿಕೆ ಬರೆದುಕೊಟ್ಟಿದೆ. ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಮೇ 10ರಂದು ವಾಹನ ಮಾಲೀಕರಿಗೆ ರೂ.500 ದಂಡ ವಿಧಿಸಿದ್ದು, ಅದರ ಪ್ರತಿಯನ್ನು ಪೊಲೀಸರು ದೂರುದಾರ ಜಯಪ್ರಕಾಶ್ ಅವರಿಗೆ ಕಳಿಸಿಕೊಟ್ಟಿದ್ದಾರೆ. ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ, ಸಾಮಾಜಿಕ ಸಂಸ್ಥೆಗಳು ನಾನಾ ರೀತಿಯಲ್ಲಿ ಪ್ರಯತ್ನ ಪಡುತ್ತವೆ. ಹಾಗಿರುವಾಗ ಪ್ರಬಲ ಟಿವಿ ಮಾಧ್ಯಮದಲ್ಲಿ ಹೆಲ್ಮೆಟ್ ಇಲ್ಲದೆ ಪ್ರಯಾಣಿಸುವ ದೃಶ್ಯ ಜನರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎನ್ನುವ ವಾದ ಮುಂದಿಟ್ಟು ಹೋರಾಡಿದ್ದಕ್ಕೆ ಅಂತೂ ಜಯ ಸಿಕ್ಕಿದೆ.
In a peculiar yet noteworthy incident, a viewer of a TV serial filed a complaint against an actress for not wearing a helmet during the filming of her scooter ride in a particular episode. The traffic police acknowledged the complaint and imposed a fine on both the actress and the owner of the two-wheeler.
08-11-25 12:38 pm
HK News Desk
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
07-11-25 11:20 pm
Mangalore Correspondent
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm