ಬ್ರೇಕಿಂಗ್ ನ್ಯೂಸ್
11-05-24 01:33 pm Udupi Correspondent ಕರಾವಳಿ
ಉಡುಪಿ, ಮೇ.10: ಟೂರಿಸ್ಟ್ ಕಾರಿನಲ್ಲಿ ಶವವನ್ನು ಕಟ್ಟಿ ಡಿಕ್ಕಿಯಲ್ಲಿ ಇಟ್ಟು ಒಯ್ಯುತ್ತಿದ್ದಾಗ ಬೈಂದೂರಿನ ಶಿರೂರ್ ಟೋಲ್ ಗೇಟ್ ಬಳಿ ಆಂಬುಲೆನ್ಸ್ ಚಾಲಕನೊಬ್ಬ ಅಡ್ಡಗಟ್ಟಿ ಟೂರಿಸ್ಟ್ ಕಾರು ಚಾಲಕನನ್ನು ದಬಾಯಿಸಿದ ಪ್ರಸಂಗದ ವಿಡಿಯೋ ವೈರಲ್ ಆಗಿದೆ.
ಬೆಳಗಾವಿ ಮೂಲದ ಕುಟುಂಬ ಉಡುಪಿಯ ಆಸ್ಪತ್ರೆಗೆ ಬಂದಿದ್ದು, ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಶವ ಒಯ್ಯುವುದಕ್ಕೆ ಆಂಬುಲೆನ್ಸ್ ಬಳಿ ಮಾತನಾಡಿದಾಗ 12 ಸಾವಿರ ಆಗುತ್ತೆ ಎಂದಿದ್ದಕ್ಕೆ ಸಂಬಂಧಿಕ ವ್ಯಕ್ತಿಯ ಟೂರಿಸ್ಟ್ ಕಾರಿನಲ್ಲಿ ಶವವನ್ನು ಇಟ್ಟು ಊರಿನತ್ತ ಒಯ್ದಿದ್ದಾರೆ.



ಈ ವಿಚಾರ ತಿಳಿದ ಆಂಬುಲೆನ್ಸ್ ಚಾಲಕ ಶಿರೂರು ಹೆದ್ದಾರಿಯಲ್ಲಿ ಅಡ್ಡಗಟ್ಟಿದ್ದು, ಟೂರಿಸ್ಟ್ ಕಾರು ಇರೋದು ಶವ ಒಯ್ಯುವುದಕ್ಕಾ.. ಆಂಬುಲೆನ್ಸಲ್ಲಿ ನಾವು ಪ್ರಯಾಣಿಕರನ್ನು ಒಯ್ಯಬೇಕಾ.. ಟೂರಿಸ್ಟ್ ಮಾಡಬೇಕಾ.. ನಿನಗೆ ಟೂರಿಸ್ಟ್ ಕಾರಿನಲ್ಲಿ ಶವ ಒಯ್ಯಲು ಪರ್ಮಿಶನ್ ಕೊಟ್ಟೋರು ಯಾರು ಅಂತ ತೀವ್ರ ಪ್ರಶ್ನೆ ಮಾಡಿದ್ದಾನೆ. ನಾವು ಬಡವರು, ನಮ್ಮ ಅಕ್ಕಂದಿರೇ ಕಾರಿನಲ್ಲಿದ್ದಾರೆ. ನಮ್ಮ ಹತ್ತಿರದ ಸಂಬಂಧಿ ವ್ಯಕ್ತಿ ತೀರಿಕೊಂಡಿದ್ದರು. ಆಂಬುಲೆನ್ಸ್ ನಲ್ಲಿ ವಿಪರೀತ ಬಾಡಿಗೆ ಹೇಳಿದ್ದರಿಂದ ಟೂರಿಸ್ಟ್ ಕಾರಿನಲ್ಲಿ ಒಯ್ದಿದ್ದೇವೆ. ತಪ್ಪು ಅಂತ ಗೊತ್ತಿದೆ, ನಾವು ಬಡವರು ಬಿಟ್ಟು ಬಿಡಿ ಎಂದರೂ ಆಂಬುಲೆನ್ಸ್ ಚಾಲಕ ಬಿಡದೆ ಕಾಡಿದ್ದಾನೆ.
ಯೆಲ್ಲೋ ಬೋರ್ಡ್ ಹಾಕಿರುವ ನಿನ್ನದು ಟೂರಿಸ್ಟ್ ಟ್ಯಾಕ್ಸಿ. ನೀನು ಪ್ರಯಾಣಿಕರನ್ನು, ಟೂರಿಸ್ಟ್ ಗಳನ್ನು ಒಯ್ಯಬೇಕೇ ವಿನಾ ಶವಗಳನ್ನಲ್ಲ. ಶವ ಒಯ್ಯುವುದಕ್ಕಾಗಿಯೇ ಆಂಬುಲೆನ್ಸ್ ಇರೋದು. ನಿನ್ನ ಕಾರನ್ನು ನಾನು ಸೀಜ್ ಮಾಡಿಸಲಾ ಎಂದು ಆವಾಜ್ ಹಾಕುತ್ತಾನೆ. ಉಡುಪಿ ಜಿಲ್ಲೆಯ ಗಡಿಭಾಗ ಶಿರೂರಿನಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.
Udupi Dead body carried in taxi car, ambulance driver stops car argues, video goes viral.
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 11:04 pm
Mangaluru Staffer
ಎಂಆರ್ ಪಿಎಲ್ ದುರಂತ ; ಮೃತ ರಾಜೇಶ್ ಡಿಸಿಲ್ವ ಕುಟುಂಬ...
17-10-26 07:34 pm
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
19-10-26 12:40 am
HK News Staffer
Mangalore Crime, Bantwal Stabbing: ಬಂಟ್ವಾಳ ;...
18-10-26 09:45 pm
Kokkada Fight, Mangalore: ಕೊಕ್ಕಡ ; ಹೂವಿನ ವ್ಯಾ...
18-10-26 09:32 pm
Fr Cyprian Pinto Arrest, POCSO: ಬಾಲಕರಿಗೆ ಲೈಂಗ...
18-10-26 10:36 am
ಎಂಆರ್ ಪಿಎಲ್ ಘಟಕದಲ್ಲಿ ಸ್ಫೋಟ ಘಟನೆ ; ತೀವ್ರ ಗಾಯಗೊ...
17-10-26 11:09 am