ಬ್ರೇಕಿಂಗ್ ನ್ಯೂಸ್
10-05-24 10:45 pm Mangalore Correspondent ಕರಾವಳಿ
Photo credits : NEWS FIRST KANNADA
ಮಂಗಳೂರು, ಮೇ.10: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಕೃತ್ಯಕ್ಕೆ ಸಂಚು ನಡೆಸಿದ್ದ ಮೊಹಮ್ಮದ್ ಮುಸ್ತಫಾ ಎರಡು ವರ್ಷಗಳ ಬಳಿಕ ಸಕಲೇಶಪುರದಲ್ಲಿ ಸೆರೆಸಿಕ್ಕಿದ್ದಾನೆ. ಇಷ್ಟಕ್ಕೂ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮುಸ್ತಫಾ ಎನ್ಐಎ ಬಲೆಗೆ ಸಿಕ್ಕಿದ್ದೇ ರೋಚಕ. ಇದಕ್ಕಾಗಿ ಎನ್ಐಎ ಅಧಿಕಾರಿಗಳ ತಂಡವು ಹಗಲಿರುಳೆನ್ನದೆ ಶ್ರಮ ಪಟ್ಟಿತ್ತು ಎನ್ನುವುದನ್ನು ಮರೆಯಬಾರದು.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆಯನ್ನು ಎನ್ಐಎ ಕೈಗೆತ್ತಿಕೊಂಡ ಬಳಿಕ ಕೊಲೆಗೆ ಸಂಚು ನಡೆಸಿದ್ದ ನಾಲ್ವರು ಪ್ರಮುಖ ಆರೋಪಿಗಳು ನಾಪತ್ತೆಯಾಗಿದ್ದರು. ಅವರ ಪತ್ತೆಗಾಗಿ ಸುಳಿವು ಕೊಟ್ಟವರಿಗೆ ಎನ್ಐಎ ತಲಾ 5 ಲಕ್ಷ ರೂ. ಬಹುಮಾನದ ಘೋಷಣೆ ಮಾಡಿತ್ತು. ಆ ಪೈಕಿ ಇಬ್ಬರ ಬಂಧನ ಆಗಿದ್ದರೂ, ಸುಳ್ಯದಲ್ಲಿ ಪಿಎಫ್ಐ ಪ್ರಮುಖನಾಗಿದ್ದ, ಕೊಲೆ ಪ್ರಕರಣದಲ್ಲಿ ಪ್ರಮುಖ ಸಂಚುಕೋರನಾಗಿದ್ದ ಮುಸ್ತಫಾ ಸಿಕ್ಕಿರಲಿಲ್ಲ. ಎನ್ಐಎ ಅಧಿಕಾರಿಗಳು ವೇಷ ಮರೆಸಿಕೊಂಡು ವಿವಿಧ ಕಡೆ ಹುಡುಕಾಟ ನಡೆಸಿದ್ದರೂ ಪತ್ತೆ ಇರಲಿಲ್ಲ.
ಇದೀಗ ಸಕಲೇಶಪುರದ ಆನೆಮಹಲ್ ಕಾಫಿ ಎಸ್ಟೇಟಿನಲ್ಲಿ ಮುಸ್ತಫಾ ಕೆಲಸಕ್ಕೆ ಕಾರ್ಮಿಕನಾಗಿ ದುಡಿಯುತ್ತಿದ್ದಾನೆ ಎಂಬ ಮಾಹಿತಿ ಬೆನ್ನತ್ತಿ ಎನ್ಐಎ ಕಾರ್ಯಾಚರಣೆ ನಡೆಸಿದ್ದು, ಬುಧವಾರ ಬೆಳಗ್ಗೆ ಏಕಾಏಕಿ ದಾಳಿ ಮಾಡಿ ಮೂವರನ್ನು ಎತ್ತಾಕ್ಕೊಂಡು ಹೋಗಿದೆ. ಸಕಲೇಶಪುರ ನಿವಾಸಿ ಸಿರಾಜ್ ನೆರವಿನೊಂದಿಗೆ ಆನೆಮಹಲ್ ಎಸ್ಟೇಟ್ ಪರಿಸರದಲ್ಲಿ ಶುಂಠಿ ಬೆಳೆಯಲು ಆರಂಭಿಸಿದ್ದ ಮುಸ್ತಫಾನಿಗೆ ಸೋಮವಾರಪೇಟೆಯ ಇಲ್ಯಾಸ್ ಸಹಕಾರ ನೀಡಿದ್ದ. ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದ ಮುಸ್ತಫಾನಿಗೆ ಸಹಕಾರ ನೀಡಿದ್ದಕ್ಕಾಗಿ ಸಿರಾಜ್ ಮತ್ತು ಇಲ್ಯಾಸ್ ಅವರನ್ನು ಸಕಲೇಶಪುರ ಪೊಲೀಸರ ಜೊತೆಗೂಡಿ ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಎನ್ಐಎ ತನಿಖೆ ಎತ್ತಿಕೊಂಡಾಗಲೇ ಪಿಎಫ್ಐ, ಕೊಲೆ ಕೃತ್ಯಕ್ಕೆ ಕೇರಳ ಮಾದರಿ ಸಂಚು ನಡೆಸಿರುವುದು ಪತ್ತೆಯಾಗಿತ್ತು. ಕೊಲೆ ಕೃತ್ಯದಲ್ಲಿ ನೇರ ಶಾಮೀಲಾದವರಿಗೆ ತರಬೇತಿ, ತಲೆಮರೆಸಿಕೊಳ್ಳಲು ನೆರವು, ಕಾನೂನು ಹೋರಾಟಕ್ಕೆ ಹಣಕಾಸು ನೆರವು ಇತ್ಯಾದಿ ಎಲ್ಲದಕ್ಕೂ ಪ್ರತ್ಯೇಕ ಟೀಮ್ ರೆಡಿಯಾಗಿತ್ತು. ಕೊಲೆ ಸಂಚನ್ನು ರೂಪಿಸಿದವರಲ್ಲಿ ಮುಸ್ತಫಾ ಪೈಚಾರು ಒಬ್ಬನಾಗಿದ್ದು, ಸರ್ವಿಸ್ ಟೀಮಿಗೆ ತರಬೇತಿ ನೀಡಿದ್ದೂ ಈತನೇ ಎನ್ನುವ ಮಾಹಿತಿ ತನಿಖಾ ತಂಡದಿಂದ ಲಭಿಸಿದೆ. ಕೊಲೆ ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದ ಸುಳ್ಯ ಶಾಂತಿನಗರ ನಿವಾಸಿ ಮುಸ್ತಫಾ ಪೈಚಾರು ಆಬಳಿಕ ಯಾರ ಕೈಗೂ ಸಿಕ್ಕಿರಲಿಲ್ಲ. ಎನ್ಐಎ ತಂಡಕ್ಕೆ ಶರಣಾಗುವಂತೆ ಆರೋಪಿಗಳ ಮನೆಗೆ ನೋಟೀಸ್ ಅಂಟಿಸಿದ್ದರೂ, ಉಳಿದಿಬ್ಬರು ಶರಣಾದರೂ ಈತ ಮಾತ್ರ ಪತ್ತೆ ಇರಲಿಲ್ಲ.
ಗುರುವಾರ ಮಧ್ಯಾಹ್ನ ಮುಸ್ತಫಾ ಪೈಚಾರ್ ಮತ್ತು ಆತನಿಗೆ ನೆರವು ನೀಡಿದ್ದ ಸಕಲೇಶಪುರದ ನಿವಾಸಿ ಸಿರಾಜ್ ಮತ್ತು ಇಲ್ಯಾಸ್ ಅವರನ್ನು ಎನ್ಐಎ ಅಧಿಕಾರಿಗಳು ಸಕಲೇಶಪುರ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಮುಸ್ತಫಾಗೆ ಆನೆಮಹಲ್ ಎಸ್ಟೇಟ್ ಬಳಿ ಶುಂಠಿ ಬೆಳೆಯಲು ಸಹಕಾರ ನೀಡಿರುವ ವಿಚಾರದಲ್ಲಿ ಸಿರಾಜ್ ಮತ್ತು ಇಲ್ಯಾಸ್ ನನ್ನು ಸಕಲೇಶಪುರ ಡಿವೈಎಸ್ಪಿ ಪ್ರಮೋದ್ ಕುಮಾರ್ ವಿಚಾರಣೆ ಮಾಡಿದ್ದಾರೆ. ಪತ್ತೆಯಾಗದೇ ಉಳಿದಿರುವ ಇನ್ನಿಬ್ಬರ ಬಗ್ಗೆ ಮಾಹಿತಿ ಪಡೆಯಲು ತನಿಖಾ ತಂಡ ಇವರಿಬ್ಬರ ಬೆಂಡೆತ್ತಲು ಮುಂದಾಗಿದೆ.
ರಾಜ್ಯಾಧ್ಯಕ್ಷರ ಕಾರನ್ನೇ ಬುಡಮೇಲು ಯತ್ನ
2022ರ ಜುಲೈ 26ರಂದು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಕೊಲೆಗೀಡಾಗಿದ್ದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಇಡೀ ರಾಜ್ಯದಲ್ಲಿ ಸಂಚಲನ ಎಬ್ಬಿಸಿತ್ತು. ಬಿಜೆಪಿ ಕಾರ್ಯಕರ್ತರು ಪುತ್ತೂರಿನವರೇ ಆದ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ್ತು ತಮ್ಮದೇ ಸರಕಾರದ ಸಚಿವ ಸುನಿಲ್ ಕುಮಾರ್ ಕಾರಿಗೆ ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕಾರ್ಯಕರ್ತರ ಸಿಟ್ಟನ್ನು ಶಮನಗೊಳಿಸಲು ಪ್ರಕರಣವನ್ನು ಆನಂತರ ಎನ್ಐಎ ತನಿಖೆಗೆ ವಹಿಸಲಾಗಿತ್ತು. ಇದರ ಬೆನ್ನಲ್ಲೇ ಪಿಎಫ್ಐ ಸಂಘಟನೆಯನ್ನು ದೇಶಾದ್ಯಂತ ನಿಷೇಧ ಮಾಡಲಾಗಿತ್ತು. ಪ್ರಕರಣ ಸಂಬಂಧಿಸಿ ವರ್ಷದ ಹಿಂದೆಯೇ 20 ಮಂದಿ ಆರೋಪಿಗಳ ವಿರುದ್ಧ ಎನ್ಐಎ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರೂ, ತನಿಖೆಯನ್ನು ಮುಂದುವರಿಸಿದ್ದಾರೆ.
ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಿ
ಇದೇ ವೇಳೆ, ಎನ್ಐಎ ತನಿಖಾ ತಂಡ ಎರಡು ವರ್ಷ ಕಳೆದರೂ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಯನ್ನು ಬಂಧಿಸಿರುವುದಕ್ಕೆ ಪ್ರವೀಣ್ ನೆಟ್ಟಾರು ಪತ್ನಿ ನೂತನ ಸಂತಸ ವ್ಯಕ್ತಪಡಿಸಿದ್ದಾರೆ. ಕೃತ್ಯದ ಹಿಂದಿರುವ ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಲಾಗಿದೆ. ತನ್ನ ಗಂಡನನ್ನು ಕೊಂದ ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆಯಾಗಬೇಕು. ಇನ್ನೆಂದೂ ಈ ರೀತಿಯ ಕೊಲೆ ಕೃತ್ಯ ನಡೆಯಬಾರದು, ಆ ರೀತಿಯ ಘೋರ ಶಿಕ್ಷೆ ಇವರಿಗೆ ಆದಷ್ಟು ಬೇಗ ಆಗಬೇಕು ಎಂದು ನೂತನ ಆಗ್ರಹಿಸಿದ್ದಾರೆ.
Sullia Main accused in praveen nettaru arrest, wife appreciates nia efforts. Nearly two years after the murder of Karnataka BJP Yuva Morcha member Praveen Nettaru, the main accused was arrested by a team of the National Investigation Agency (NIA) on Friday, sources said. Mustafa Paichar was arrested by the NIA on Friday morning in Sakleshpura.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm