ಬ್ರೇಕಿಂಗ್ ನ್ಯೂಸ್
08-05-24 06:19 pm Mangalore Correspondent ಕರಾವಳಿ
ಮಂಗಳೂರು, ಮೇ.8: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಐದು ಬಾರಿಯ ಶಾಸಕ, ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಸ್ಥಳೀಯವಾಗಿ ಸೋಲಿಲ್ಲದ ಸರದಾರ, ಅಜಾತ ಶತ್ರು ಎಂದೇ ಹೆಸರಾಗಿದ್ದ ಬಿಲ್ಲವ ಸಮುದಾಯದ ನೇರ ನಡೆನುಡಿಯ ನಾಯಕ ವಸಂತ ಬಂಗೇರ(79) ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅತ್ಯಂತ ಹಿರಿಯ ಮತ್ತು ಕಾಂಗ್ರೆಸಿನಲ್ಲಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದರು. ದೀರ್ಘ ಕಾಲದ ಆನಾರೋಗ್ಯದಿಂದ ಬಳಲುತ್ತಿದ್ದ ಬಂಗೇರ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಸಂಜೆ ನಾಲ್ಕು ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಗುರುವಾರ (ಮೇ 9) ಮುಂಜಾನೆ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮಿಸುವ ನಿರೀಕ್ಷೆಯಿದ್ದು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
1946ರ ಜನವರಿ 15ರಂದು ಬೆಳ್ತಂಗಡಿಯಲ್ಲಿ ಜನಿಸಿದ್ದ ಅವರು, ಬಡತನದಿಂದ ಮೇಲೆ ಬಂದವರು. ಮೊದಲಿಗೆ ಬಿಜೆಪಿಯಿಂದ ರಾಜಕಾರಣ ಆರಂಭಿಸಿ, ಬಳಿಕ ಜೆಡಿಎಸ್, ಆನಂತರ ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆಗೆ ನಿಂತು ಗೆಲುವು ಸಾಧಿಸಿ ದಾಖಲೆ ಬರೆದಿದ್ದರು. 1983 ಮತ್ತು 1985ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಶಾಸಕರಾಗಿದ್ದ ಅವರು, 1989ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷೇತರರಾಗಿ ನಿಂತು ತನ್ನ ಸೋದರನ ಎದುರಲ್ಲಿ ಸೋಲು ಕಂಡಿದ್ದರು. 1994ರಲ್ಲಿ ಜನತಾದಳದ ಅಭ್ಯರ್ಥಿಯಾಗಿ ನಿಂತು ಮತ್ತೆ ಬೆಳ್ತಂಗಡಿ ಕ್ಷೇತ್ರದಿಂದಲೇ ಗೆಲುವು ಸಾಧಿಸಿದ್ದರು. ಆನಂತರ 1999 ಮತ್ತು 2004ರಲ್ಲಿ ಈ ಕ್ಷೇತ್ರ ಬಿಜೆಪಿ ಪಾಲಾಗಿತ್ತು. ಜೆಡಿಎಸ್ ನಿಂದ ಸ್ಪರ್ಧಿಸಿದ್ದ ವಸಂತ ಬಂಗೇರ ಅವರನ್ನು ಅವರ ಸಹೋದರ ಪ್ರಭಾಕರ ಬಂಗೇರ ಸೋಲಿಸಿದ್ದರು.
2008ರ ಚುನಾವಣೆಯಲ್ಲಿ ಕಾಂಗ್ರೆಸಿನಿಂದ ಸ್ಪರ್ಧಿಸಿದ್ದ ವಸಂತ ಬಂಗೇರ ಬಿಜೆಪಿಯ ಶಾಸಕ, ಸಹೋದರ ಪ್ರಭಾಕರ ಬಂಗೇರ ಅವರನ್ನು ಸೋಲಿಸಿದ್ದರು. 2013ರಲ್ಲಿ ವಸಂತ ಬಂಗೇರ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಬಿಜೆಪಿಯ ರಂಜನ್ ಗೌಡ ಅವರನ್ನು ಸೋಲಿಸಿ ಶಾಸಕರಾಗಿದ್ದರು. ಜನತಾ ಪರಿವಾರದಿಂದಲೇ ಸಿದ್ದರಾಮಯ್ಯ ಆಪ್ತರಾಗಿದ್ದರಿಂದ ಕಳೆದ ಬಾರಿ ಸಚಿವ ಸ್ಥಾನ ಸಿಗುತ್ತದೆ ಎನ್ನುವ ಸುದ್ದಿ ಹರಡಿತ್ತು. ಆದರೆ ತನಗಾಗಿ ಲಾಬಿ ಮಾಡದ, ಸದಾ ಕ್ಷೇತ್ರದ ಜನರ ಪರವಾಗಿ ತುಡಿಯುತ್ತಿದ್ದ ವಸಂತ ಬಂಗೇರ ಐದು ಸಲ ಶಾಸಕರಾದರೂ ಸಚಿವ ಸ್ಥಾನಕ್ಕೇರದೆ ಚಿರನಿದ್ರೆಗೆ ಜಾರಿದ್ದಾರೆ. ಎದುರಾಳಿಗಳ ಪಾಲಿಗೆ ಹುಲಿಯಂತಿದ್ದ ಅವರ ವ್ಯಕ್ತಿತ್ವ ಜನಸಾಮಾನ್ಯರ ಪಾಲಿಗೆ ಮೃದುವಾಗಿದ್ದರು. ಸಾಮಾನ್ಯ ಕುಟುಂಬದಿಂದ ಬಂದು ರಾಜ್ಯ ರಾಜಕಾರಣದಲ್ಲಿ ದೊಡ್ಡ ಛಾಪು ಮೂಡಿಸಿದ್ದ ಧೀಮಂತ ವ್ಯಕ್ತಿತ್ವ ವಸಂತ ಬಂಗೇರ ಇನ್ನು ನೆನಪು ಮಾತ್ರ.
ಅಂದಹಾಗೆ, 1983ರಲ್ಲಿ ಬಿಜೆಪಿಯಿಂದ ಯಡಿಯೂರಪ್ಪ ಮತ್ತು ವಸಂತ ಬಂಗೇರ ಮೊದಲ ಬಾರಿಗೆ ಶಾಸಕರಾಗಿದ್ದರು. ಯಡಿಯೂರಪ್ಪ ಮೇಲಕ್ಕೇರುತ್ತಲೇ ರಾಜ್ಯದ ಮುಖ್ಯಮಂತ್ರಿ ಹುದ್ದೆಗೇರಿದ್ದರೆ, ಅಂದಾಜು ಅದೇ ವಯಸ್ಸಿನ ವಸಂತ ಬಂಗೇರ ಮೂರು ಪಕ್ಷಗಳಿಂದಲೂ ಸ್ಪರ್ಧಿಸಿ ಸೈ ಎನಿಸಿದ್ದರಲ್ಲದೆ, ಕಡೆಗಾಲದ ವರೆಗೂ ಶಾಸಕರಾಗಿಯೇ ಉಳಿದುಬಿಟ್ಟಿದ್ದರು. ಇತ್ತೀಚೆಗೆ ಸೌಜನ್ಯಾ ಪ್ರಕರಣ ಬೆಳ್ತಂಗಡಿಯಲ್ಲಿ ಜೋರು ಸದ್ದು ಮಾಡಿದಾಗ ತಿಮರೋಡಿ ಜೊತೆ ನಿಂತು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದರು. 2018ರಲ್ಲಿ ಯುವ ನಾಯಕ ಹರೀಶ್ ಪೂಂಜ ಎದುರು ಸೋತರೂ 2023ರ ಚುನಾವಣೆಯಲ್ಲಿ ಮತ್ತೆ ಅವಕಾಶ ಕೇಳಿದ್ದರು. ತೊಡೆ ತಟ್ಟಿ ಗೆಲ್ಲುವ ಕನಸು ಕಂಡಿದ್ದರು. ಆದರೆ ಯುವ ನಾಯಕನೇ ಬೇಕೆಂದು ಕಾಂಗ್ರೆಸಿನಿಂದ ರಕ್ಷಿತ್ ಶಿವರಾಂ ಟಿಕೆಟ್ ಗಿಟ್ಟಿಸಿದ್ದರು. ಆದರೆ ಬಿಲ್ಲವರನ್ನು ಒಟ್ಟುಗೂಡಿಸಿ, ಮೇಲು ಕೀಳೆನ್ನದೆ ಮುಸ್ಲಿಂ, ದಲಿತ ಎಲ್ಲರನ್ನೂ ಜೊತೆ ಸೇರಿಸಿ ಕಾಂಗ್ರೆಸನ್ನು ಮತ್ತೆ ಗೆಲ್ಲಿಸಬೇಕೆಂದು ತನ್ನ ಅನಾರೋಗ್ಯದ ನಡುವೆಯೂ ಭಾರೀ ಪ್ರಯತ್ನಪಟ್ಟಿದ್ದರು.
Mangalore Veteran Congress leader and MLA Vasantha Bangera passes away at 79 in Belthangady. Vasantha Bangera was the first son of Kede Subba Poojary and Devaki. His recent health decline led to his hospitalization, but despite efforts, his condition worsened.
17-07-25 04:50 pm
Bangalore Correspondent
CM Siddaramaiah, Janardhan Reddy; ನವೆಂಬರ್ ಒಳಗ...
16-07-25 09:36 pm
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
17-07-25 06:30 pm
Mangalore Correspondent
Wild Elephant Attack, Dharmasthala: ಧರ್ಮಸ್ಥಳ...
17-07-25 04:14 pm
Minister Priyank Kharge, Drug Trafficking: ಡ್...
17-07-25 01:51 pm
Mangalore Rain, Landslide, Maryhill: ಭಾರೀ ಮಳೆ...
17-07-25 01:34 pm
Wizdom Education, Guruvandana, Mangalore: ಮಂಗ...
17-07-25 01:26 pm
17-07-25 02:30 pm
Mangalore Correspondent
Cyber Crime Tumkur, Facebook, Mangalore Polic...
16-07-25 11:04 pm
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am