ಬ್ರೇಕಿಂಗ್ ನ್ಯೂಸ್
06-05-24 02:51 pm Mangalore Correspondent ಕರಾವಳಿ
ಮಂಗಳೂರು, ಮೇ 6: ಪ್ರಜ್ವಲ್ ರೇವಣ್ಣ ಇಷ್ಟು ಸಣ್ಣ ಪ್ರಾಯದಲ್ಲಿ ಇಷ್ಟೆಲ್ಲಾ ಹೆಣ್ಮಕ್ಕಳನ್ನು ದುರುಪಯೋಗ ಮಾಡಿಕೊಂಡಿದ್ದಾನೆ ಅಂದ್ರೆ, ಭಯ, ಆ ಕುಟುಂಬದ ಬಗ್ಗೆ ಹೇಸಿಗೆ ಹುಟ್ಟುತ್ತದೆ. ತೆನೆಹೊತ್ತ ಮಹಿಳೆಯನ್ನು ಪಕ್ಷದ ಚಿಹ್ನೆ ಮಾಡಿಕೊಂಡು ನೂರಾರು ಮಹಿಳೆಯರ ಮಾನ ಕಳೆದಿದ್ದಾನೆ. ಪ್ರಜ್ವಲ್ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಬಂದರೆ ಆತನಿಗೆ ಗುಂಡು ಹಾರಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ಆಗ್ರಹಿಸಿದ್ದಾರೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಒತ್ತಾಯಿಸಿ ನಗರದ ಮಲ್ಲಿಕಟ್ಟೆ ಕಾಂಗ್ರೆಸ್ ಕಚೇರಿಯ ಮುಂದೆ ಮಹಿಳಾ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಸಾವಿರಾರು ಹೆಣ್ಮಕ್ಕಳ ಬದುಕನ್ನು ಬೀದಿಗೆ ತಂದಿದ್ದಾನೆ. ವಿಡಿಯೋ ಮಾಡಿ, ಬದುಕನ್ನೇ ಹಾಳು ಮಾಡಿದ್ದಾನೆ. ಆ ಮಹಿಳೆಯರು ಸಮಾಜದಲ್ಲಿ ಮುಖ ತೋರಿಸದ ಸ್ಥಿತಿಯಾಗಿದೆ. ಪ್ರಜ್ವಲ್ ಮನುಷ್ಯನಲ್ಲ, ಮೃಗ. ಆತನಿಗೆ ಕಠಿಣ ಶಿಕ್ಷೆಯಾಗಬೇಕು. ಆದರೆ ಸಣ್ಣ ಸಣ್ಣ ವಿಚಾರಕ್ಕೆ ಬೀದಿಗೆ ಬರುವ, ಮಹಿಳೆಯರ ಬಗ್ಗೆ ಧ್ವನಿಯೆತ್ತುವ ಬಿಜೆಪಿ ನಾಯಕರು ಎಲ್ಲಿದ್ದಾರೆ. ಶೋಭಕ್ಕ, ನಿರಾಣಿ, ಅಶೋಕ್ ಇವರೆಲ್ಲ ಯಾಕೆ ಮಾತನಾಡುತ್ತಿಲ್ಲ.
ಇಷ್ಟೊಂದು ಘೋರ ಅಪರಾಧ ಎಸಗಿದ್ದರೂ ಬಿಜೆಪಿ ನಾಯಕರು ಆ ಕುಟುಂಬದ ಪರ ನಿಂತಿದ್ದಾರೆ. ಕ್ರೂರಿಯನ್ನು ರಕ್ಷಣೆ ಮಾಡಲು ಪ್ರಧಾನಿ ಮೋದಿ ನಿಂತಿದ್ದಾರೆ. ಮಹಿಳೆಯರಿಗೆ ಫ್ರೀ ಬಸ್ ಯೋಜನೆ ಬಗ್ಗೆ ಕುಮಾರಸ್ವಾಮಿ ಅಪಹಾಸ್ಯ ಮಾಡಿದ್ದರು. ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಆರೋಪಿಸಿದ್ದರು. ಆ ಹೇಳಿಕೆ ಬಂದು ಎರಡೇ ವಾರದಲ್ಲಿ ಅವರ ಕುಟುಂಬದ ಮಗನೇ ದಾರಿ ತಪ್ಪಿದ್ದಾನೆ. ಪ್ರಜ್ವಲ್ ಎಲ್ಲಿದ್ದರೂ ಒದ್ದು ತರಬೇಕಾಗಿದೆ, ಆತನಿಗೆ ಶಿಕ್ಷೆ ಕಠಿಣ ಶಿಕ್ಷೆ ವಿಧಿಸಬೇಕಾಗಿದೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್, ತನ್ವೀರ್ ಶಾ, ರೂಪಾ ಚೇತನ್, ಚಂದ್ರಕಲಾ ಜೋಗಿ, ಶಶಿಕಲಾ ಪದ್ಮನಾಭನ್, ಶಾಂತಲಾ ಗಟ್ಟಿ, ಗೀತಾ ಅತ್ತಾವರ, ಚಂದ್ರಕಲಾ ಡಿ. ರಾವ್, ನಮಿತಾ ಡಿ. ರಾವ್, ವಂದನಾ ಭಂಡಾರಿ, ಶಾರಿಕಾ ಪೂಜಾರಿ, ಅನಿತಾ, ವಿಲ್ಮಾ, ಡಿಂಪಲ್ ಮತ್ತಿತರರಿದ್ದರು.
Prajwal Revanna must be shot says Congress Shalet Pinto in Mangalore. He has spoilt the lives of thousands of girls. If he wins this coming lok sabha elections he must be shot she added.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm