ಬ್ರೇಕಿಂಗ್ ನ್ಯೂಸ್
05-05-24 08:53 pm Mangalore Correspondent ಕರಾವಳಿ
ಉಳ್ಳಾಲ, ಮೇ.5: ಕೋಟೆಕಾರು ಗ್ರಾಮದ ಕಾರಣಿಕದ ಕೊಂಡಾಣ ಕ್ಷೇತ್ರಕ್ಕೆ ಸಂಬಂಧಿಸಿದ ಕೋಟೆಕಾರಿನ ತಾರಿಪಡ್ಪು ವೈದ್ಯನಾಥ ಕ್ಷೇತ್ರದ ವಲಸರಿ ಜಾತ್ರೆಯಲ್ಲಿ ಕೊಂಡಾಣ ಕ್ಷೇತ್ರದ ಭಂಡಾರಮನೆ ಪುಡಿಗೈದ ಪ್ರಕರಣದ ಐವರು ಆರೋಪಿಗಳು ಭಾಗವಹಿಸಬಾರದೆಂದು ಜಿಲ್ಲಾ ಧರ್ಮದಾಯ ಧತ್ತಿ ಇಲಾಖೆಯ ಸಹಾಯ ಆಯುಕ್ತರು ನಿರ್ಬಂಧ ಹೇರಿದ್ದು, ಅಹಿತಕರ ಘಟನೆ ನಡೆಯದಂತೆ ಜಾತ್ರೆಗೆ ಬಿಗು ಪೊಲೀಸ್ ಬಂದೋಬಸ್ತು ಕಲ್ಪಿಸಲಾಗಿದೆ.
ಕೊಂಡಾಣ ಪಿಲಿಚಾಮುಂಡಿ, ಬಂಟ, ವೈದ್ಯನಾಥ, ಮುಂಡತ್ತಾಯ ಕ್ಷೇತ್ರದ ಗುರಿಕಾರರೆನ್ನುವ, ಕ್ಷೇತ್ರದ ನೂತನ ಭಂಡಾರ ಮನೆ ಧ್ವಂಸ ಪ್ರಕರಣದ ಪ್ರಮುಖ ಆರೋಪಿ ಮುತ್ತಣ್ಣ ಶೆಟ್ಟಿ ಮತ್ತು ಸಹವರ್ತಿಗಳಾದ ಧೀರಜ್, ಶಿವರಾಜ್ ಶೆಟ್ಟಿ, ನವೀನ್ ಕುಮಾರ್, ಶಿವಪ್ರಸಾದ್ ಆಚಾರ್ಯ ಎಂಬ ಐವರು ತಾರಿಪಡ್ಪುವಿನ ವೈದ್ಯನಾಥ ಕ್ಷೇತ್ರದ ವಲಸರಿ ಜಾತ್ರೆಯಲ್ಲಿ ಭಾಗವಹಿಸದಂತೆ ಜಿಲ್ಲಾ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ಧತ್ತಿ ಇಲಾಖೆಯ ಸಹಾಯಕ ಆಯುಕ್ತರು ನಿರ್ಬಂಧ ಹೇರಿದ್ದಾರೆ.



ಕಳೆದ ಮಾರ್ಚ್ ತಿಂಗಳ 3ರ ಭಾನುವಾರ ಬೆಳಗ್ಗೆ ಕೊಂಡಾಣ ಕ್ಷೇತ್ರದಲ್ಲಿ ನಿರ್ಮಾಣ ಹಂತದಲ್ಲಿದ್ದ ನೂತನ ಭಂಡಾರ ಮನೆಯನ್ನ ಕಿಡಿಗೇಡಿಗಳು ಜೆಸಿಬಿ ಬಳಸಿ ಏಕಾಏಕಿ ಕೆಡವಿ ಹಾಕಿದ್ದರು. ಉಳ್ಳಾಲ ಪೊಲೀಸರು ಆರೋಪಿಗಳಾದ ಮುತ್ತಣ್ಣ ಶೆಟ್ಟಿ, ಧೀರಜ್, ಶಿವರಾಜ್ ಶೆಟ್ಟಿ, ಶಿವಪ್ರಸಾದ್ ಆಚಾರ್ಯ, ನವೀನ್ ಕುಮಾರ್ ಎಂಬುವವರನ್ನು ಬಂಧಿಸಿದ್ದರು. ಆರೋಪಿಗಳು ಪೊಲೀಸರ ವಿಚಾರಣೆಯಲ್ಲಿ ತಾವೇ ದುಷ್ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದರು. ಕೊಂಡಾಣ ಕ್ಷೇತ್ರವು 16 ಗುರಿಕಾರರನ್ನು ಹೊಂದಿದೆ. ಅನಧಿಕೃತ ಮತ್ತು ಯಾವುದೇ ಅನುಮತಿಯಿಲ್ಲದೆ ನಿರ್ಮಿಸುತ್ತಿರುವ ಹೊಸ ಭಂಡಾರ ಮನೆಗೆ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಗುರಿಕಾರರು ಒಪ್ಪಿಗೆ ನೀಡಲಿಲ್ಲ. ಹೀಗಾಗಿ ಕಟ್ಟಡವನ್ನು ತಾವೇ ಕೆಡವಲು ನಿರ್ಧರಿಸಿರುವುದಾಗಿ ಬಂಧಿತ ಆರೋಪಿಗಳು ಪೊಲೀಸರಿಗೆ ಹೇಳಿಕೆ ನೀಡಿದ್ದರು.
ಭಾನುವಾರ ಕೊಂಡಾಣ ಕ್ಷೇತ್ರದ ಅಧೀನಕ್ಕೊಳಪಟ್ಟ ಕೋಟೆಕಾರಿನ ತಾರಿಪಡ್ಪು ವೈದ್ಯನಾಥ ಕ್ಷೇತ್ರದಲ್ಲಿ ವಲಸರಿ ಜಾತ್ರೆ ನಡೆದಿದೆ. ಕೊಂಡಾಣ ಕ್ಷೇತ್ರದ ಭಂಡಾರಮನೆ ಧ್ವಂಸ ಪ್ರಕರಣದ ಐವರು ಆರೋಪಿಗಳು ವಲಸರಿ ಜಾತ್ರೆ ಸೇರಿದಂತೆ ಕೊಂಡಾಣ ಕ್ಷೇತ್ರಕ್ಕೆ ಸಂಬಂಧಿಸಿದ ಜಾತ್ರೆ, ಉತ್ಸವಗಳಲ್ಲಿ ಭಾಗವಹಿಸದಂತೆ ಜಿಲ್ಲಾ ಧರ್ಮದಾಯ ಧತ್ತಿ ಇಲಾಖೆಯ ಸಹಾಯಕ ಆಯುಕ್ತರು ಆರೋಪಿಗಳಿಗೆ ಶನಿವಾರ ಪ್ರತ್ಯೇಕವಾಗಿ ನೋಟೀಸು ಜಾರಿ ಮಾಡಿದ್ದರು. ಹೀಗಾಗಿ ವೈದ್ಯನಾಥನ ವಲಸರಿ ಜಾತ್ರಾ ಮಹೋತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗು ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿದೆ.
Mangalore Kotekar Vaidyanatha valasari fair, no entry for five accused who destroyed the house of Kondana temple.
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 11:04 pm
Mangaluru Staffer
ಎಂಆರ್ ಪಿಎಲ್ ದುರಂತ ; ಮೃತ ರಾಜೇಶ್ ಡಿಸಿಲ್ವ ಕುಟುಂಬ...
17-10-26 07:34 pm
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
19-10-26 12:40 am
HK News Staffer
Mangalore Crime, Bantwal Stabbing: ಬಂಟ್ವಾಳ ;...
18-10-26 09:45 pm
Kokkada Fight, Mangalore: ಕೊಕ್ಕಡ ; ಹೂವಿನ ವ್ಯಾ...
18-10-26 09:32 pm
Fr Cyprian Pinto Arrest, POCSO: ಬಾಲಕರಿಗೆ ಲೈಂಗ...
18-10-26 10:36 am
ಎಂಆರ್ ಪಿಎಲ್ ಘಟಕದಲ್ಲಿ ಸ್ಫೋಟ ಘಟನೆ ; ತೀವ್ರ ಗಾಯಗೊ...
17-10-26 11:09 am