ಬ್ರೇಕಿಂಗ್ ನ್ಯೂಸ್
02-05-24 07:52 pm Mangalore Correspondent ಕರಾವಳಿ
ಮಂಗಳೂರು, ಮೇ.2: ಇತ್ತೀಚೆಗೆ ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಹೋಗಿ ಬಂದ ಬಳಿಕ ಪ್ರವಾಸಿಗರ ದೃಷ್ಟಿ ಲಕ್ಷದ್ವೀಪದತ್ತ ಹರಿದಿತ್ತು. ಕರ್ನಾಟಕದ ಮಂಗಳೂರು ಬಂದರಿನಿಂದ ಲಕ್ಷದ್ವೀಪಕ್ಕೆ ನೇರ ಪ್ರಯಾಣಕ್ಕೆ ಆಗ್ರಹವೂ ಕೇಳಿಬಂದಿತ್ತು. ಜನರ ಹಕ್ಕೊತ್ತಾಯದ ಬಲವೋ ಏನೋ ಲಕ್ಷದ್ವೀಪದಿಂದ ಮಂಗಳೂರಿನ ಹಳೆ ಬಂದರಿಗೆ ಹೈಸ್ಪೀಡ್ ವೆಸಲ್ಸ್ ಬಂದೇಬಿಟ್ಟಿದೆ. ಕೊರೊನಾ ಸೋಂಕಿನ ಬಳಿಕ ಮೊದಲ ಬಾರಿಗೆ ಲಕ್ಷದ್ವೀಪದ ಜನರು ನೇರವಾಗಿ ಮಂಗಳೂರಿಗೆ ಆಗಮಿಸಿದ್ದಾರೆ.
2019ರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಲಕ್ಷದ್ಪೀಪ – ಮಂಗಳೂರು ನಡುವೆ ಇದ್ದ ಪ್ರಯಾಣಿಕರ ಹಡಗು ಸಂಚಾರ ನಿಲುಗಡೆಯಾಗಿತ್ತು. ಅದಕ್ಕೂ ಮುನ್ನ ಎರಡು ಮಿನಿ ಹಡಗು ಮಂಗಳೂರು ಹಳೆಬಂದರಿನಿಂದ ಲಕ್ಷದ್ವೀಪಕ್ಕೆ ಹೋಗಿ ಬರುತ್ತಿತ್ತು. ಇದೀಗ ಐದು ವರ್ಷಗಳ ಬಳಿಕ ಅದರಲ್ಲೂ ಅತಿ ವೇಗವಾಗಿ ಸಾಗುವ ಪ್ಯಾಸೆಂಜರ್ ಮಿನಿ ಹಡಗು ಮಂಗಳೂರಿಗೆ ಬಂದಿದ್ದು, ಲಕ್ಷದ್ವೀಪದ 150 ಮಂದಿ ಪ್ರಯಾಣಿಕರು ಆಗಮಿಸಿದ್ದಾರೆ. ಮಾಜಿ ಶಾಸಕ ಜೆ.ಆರ್ ಲೋಬೊ ನೇತೃತ್ವದಲ್ಲಿ ಬೆಂಗ್ರೆಯ ಮುಸ್ಲಿಂ ಮುಖಂಡರು ಹಡಗನ್ನು ಬರಮಾಡಿಕೊಂಡರು.
2018ರಲ್ಲಿ ಅಧಿಕಾರಿಗಳ ಜೊತೆಗೆ ತೆರಳಿದ್ದೆ
ಇದೇ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಲೋಬೊ, ಹಿಂದೆ ಶಾಸಕನಾಗಿದ್ದಾಗ 2018ರಲ್ಲಿ ಕರ್ನಾಟಕದ ಅಧಿಕಾರಿಗಳ ಜೊತೆಗೆ ಲಕ್ಷದ್ವೀಪಕ್ಕೆ ತೆರಳಿದ್ದೆ. ಅಲ್ಲಿನ ಆಡಳಿತದ ಜೊತೆಗೆ ಮಾತುಕತೆ ನಡೆಸಿ, ಪ್ರತಿ ದಿನ ಮಂಗಳೂರಿಗೆ ಪ್ರಯಾಣ ವ್ಯವಸ್ಥೆ ಮಾಡುವಂತೆ ಕೇಳಿಕೊಂಡಿದ್ದೆ. ಒಬ್ಬ ಜನಪ್ರತಿನಿಧಿಯಾಗಿ ಮೊದಲ ಬಾರಿಗೆ ಭಾರತದಿಂದ ಲಕ್ಷದ್ವೀಪಕ್ಕೆ ಮನವಿ ಹಿಡಿದು ಬಂದಿದ್ದಾಗಿ ನನ್ನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಅಲ್ಲದೆ, ಮಂಗಳೂರು ಬಂದರಿನ ಅಭಿವೃದ್ಧಿಗೆ 400 ಕೋಟಿ ಹೂಡಿಕೆ ಮಾಡುವುದಾಗಿ ಹೇಳಿದ್ದರು. ಅದೀಗ ಸಾಗರಮಾಲಾ ಯೋಜನೆ ರೂಪದಲ್ಲಿ ಮಂಜೂರಾತಿ ಆಗಿದ್ದು, ಅನುಷ್ಠಾನ ಹಂತದಲ್ಲಿದೆ. ಲಕ್ಷದ್ವೀಪದಿಂದ ಪ್ರಯಾಣಿಕರ ಹಡಗು ಸಂಚಾರ ಶಾಶ್ವತಗೊಂಡರೆ ಮಂಗಳೂರಿನ ಪ್ರವಾಸೋದ್ಯಮಕ್ಕೆ ದೊಡ್ಡ ಕೊಡುಗೆ ಸಿಗುತ್ತದೆ. ವ್ಯಾಪಾರ, ವಾಣಿಜ್ಯ ದೃಷ್ಟಿಯಿಂದ ಲಾಭ ಆಗುತ್ತದೆ. ಇದಕ್ಕಾಗಿ ಕರ್ನಾಟಕದ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸುತ್ತೇನೆ ಎಂದರು.
ಕೇರಳದಿಂದ ಪ್ರಯಾಣ ವ್ಯವಸ್ಥೆ ಇದೆ
ಇದೇ ವೇಳೆ, ಹಡಗಿನ ಕ್ಯಾಪ್ಟನ್ ಜೋಸ್ ಅವರಲ್ಲಿ ಮಾಹಿತಿ ಕೇಳಿದಾಗ, ಕೇರಳದ ಕೊಚ್ಚಿ ಮತ್ತು ಬೇಪೂರಿನಿಂದ ಲಕ್ಷದ್ವೀಪಕ್ಕೆ ಪ್ರಯಾಣಿಕರ ಹಡಗು ಇದೆ. ಮೊದಲ ಬಾರಿಗೆ ವೇಗದ ವೆಸಲ್ಸ್ ಅನ್ನು ಮಂಗಳೂರಿಗೆ ತರಲಾಗಿದೆ. ಬೆಳಗ್ಗೆ ಎಂಟು ಗಂಟೆಗೆ ಕವರತ್ತಿ ದ್ವೀಪದಿಂದ ಹೊರಟಿದ್ದು ಸಂಜೆ 4.30ಕ್ಕೆ ಮಂಗಳೂರಿಗೆ ತಲುಪಿದೆ. ಅಂದಾಜು ಎಂಟು ಗಂಟೆಯ ಪ್ರಯಾಣ. ಬೇಪೂರಿನಿಂದಲೂ ಎಂಟು ಗಂಟೆ ಅವಧಿಯಲ್ಲಿ ತಲುಪುತ್ತೇವೆ. ಮಂಗಳೂರಿನಿಂದ ಕವರತ್ತಿ ದ್ವೀಪಕ್ಕೆ 186 ನಾಟಿಕಲ್ ಮೈಲ್ಸ್ ದೂರವಿದ್ದು, ಗಂಟೆಗೆ 19-20 ಮೈಲ್ ಪ್ರಯಾಣಿಸುತ್ತೇವೆ ಎಂದು ತಿಳಿಸಿದರು.
ಮಂಗಳೂರಿನಲ್ಲೇ ಪಾಸ್ ವ್ಯವಸ್ಥೆ ಮಾಡಲಿ
ಪ್ಯಾಸೆಂಜರ್ ಹಡಗಿನಲ್ಲಿ ಸಿಬಂದಿ ಮತ್ತು ಪ್ರಯಾಣಿಕರಿಗೆ ನೀರು, ಉಪಾಹಾರದ ವ್ಯವಸ್ಥೆ ಮಾಡುವ ಮಂಗಳೂರಿನಲ್ಲಿ ಏಜನ್ಸಿ ಹೊಂದಿರುವ ಬಿಲಾಲ್ ಮೊಯ್ದೀನ್ ಮಾತನಾಡಿ, ಕೊರೊನಾ ಸೋಂಕಿನ ಬಳಿಕ ನಿಲುಗಡೆಯಾಗಿದ್ದ ಪ್ರಯಾಣಿಕರ ಹಡಗು ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ್ದು ನಮಗೆಲ್ಲ ಸಂತಸ ತಂದಿದೆ. ಲಕ್ಷದ್ವೀಪದ ಜನರು ಆಸ್ಪತ್ರೆ, ಶಾಪಿಂಗ್ ಉದ್ದೇಶದಲ್ಲಿ ಮಂಗಳೂರಿಗೆ ಬರುತ್ತಾರೆ. ಅಲ್ಲಿನ ಜನರಿಗೆ ಬೇರೆ ಬೇರೆ ದ್ವೀಪಗಳಲ್ಲಿ ಬೇರೆ ಬೇರೆ ಟಿಕೆಟ್ ದರ ಇದೆ. 250ರಿಂದ 450, 600 ವರೆಗೂ ದರ ಇದೆ. ಆದರೆ ಮಂಗಳೂರು ಅಥವಾ ಹೊರಗಡೆಯಿಂದ ಲಕ್ಷದ್ವೀಪಕ್ಕೆ ತೆರಳುವ ಪ್ರವಾಸಿಗರಿಗೆ 5 ಸಾವಿರದಷ್ಟು ಟಿಕೆಟ್ ದರ ಇದೆ. ಆದರೆ, ಇಲ್ಲಿಂದ ಪ್ರಯಾಣಿಸುವವರಿಗೆ ಪೊಲೀಸ್ ಕ್ಲಿಯರೆನ್ಸ್ ಸೇರಿದಂತೆ ವಿಶೇಷ ರೀತಿಯ ಅನುಮತಿ ಬೇಕಾಗುತ್ತದೆ. ಕೊಚ್ಚಿಯಲ್ಲಿರುವ ಲಕ್ಷದ್ಪೀಪದ ಕಚೇರಿ ಮೂಲಕವೇ ಅನುಮತಿ ಗಿಟ್ಟಿಸಿಕೊಳ್ಳಬೇಕಿದೆ. ಮಂಗಳೂರಿನಲ್ಲೇ ಲಕ್ಷದ್ವೀಪದ ಕಚೇರಿಯಾದರೆ, ಪ್ರವಾಸಿಗರಿಗೆ ಅನುಕೂಲ ಆಗಬಹುದು ಎಂದರು.
ಕುಟುಂಬ ಸಹಿತ ಬಂದಿಳಿದ ಪ್ರಯಾಣಿಕರು
ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದ 150 ಮಂದಿಯಲ್ಲಿ ಹಲವರು ಕುಟುಂಬ ಸಮೇತ ಬಂದಿದ್ದರು. ಕೆಲವರು ಮಂಗಳೂರಿನಲ್ಲಿ ಕುಟುಂಬ ಸಂಬಂಧಗಳನ್ನು ಹೊಂದಿದ್ದರೆ, ಇನ್ನು ಕೆಲವರು ಆಸ್ಪತ್ರೆ, ಶಾಪಿಂಗ್, ಶಿಕ್ಷಣದ ಉದ್ದೇಶಕ್ಕೆ ಬಂದಿದ್ದರು. ಲಕ್ಷದ್ವೀಪದಲ್ಲಿ ಪ್ರಾಥಮಿಕ ಶಿಕ್ಷಣ ಹೊರತುಪಡಿಸಿ ಅದಕ್ಕೂ ಮೇಲಿನ ಶಿಕ್ಷಣಕ್ಕೆ ಸೌಲಭ್ಯ ಇಲ್ಲ. ಮಲಯಾಳಿ ಭಾಷೆ ಮಾತ್ರ ಮಾತನಾಡುವ ಅವರಲ್ಲಿ ಪ್ರಯಾಣದ ಅನುಭವದ ಬಗ್ಗೆ ಕೇಳಿದಾಗ, ವೇಗದ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದ್ದರಿಂದ ಒಳ್ಳೆದಾಗಿದೆ. ಉತ್ತಮ ಪ್ರಯಾಣ. ಬೆಳಗ್ಗೆ ಹೊರಟವರು ಸಂಜೆಗೆ ತಲುಪಿದ್ದೇವೆ. ಹಿಂದೆಲ್ಲಾ ಒಂದೂವರೆ ದಿನ ಬೇಕಾಗುತ್ತಿತ್ತು ಎಂದರು.
ಬಂದರಿನತ್ತ ಸುಳಿಯದ ಅಧಿಕಾರಿ ವರ್ಗ
ಸದ್ಯಕ್ಕೆ ಈ ಪ್ರಯಾಣಿಕ ಹಡಗು ಎರಡು ದಿನದ ಬಳಿಕ ಮೇ 4ರ ಬೆಳಗ್ಗೆ ಮತ್ತೆ ಲಕ್ಷದ್ವೀಪದತ್ತ ಹೊರಡಲಿದೆ. ಆನಂತರ, ಮಂಗಳೂರಿಗೆ ಬರುವ ಯಾವುದೇ ಖಚಿತತೆಯಿಲ್ಲ. ಬೇಪೂರ್ ಮತ್ತು ಕೊಚ್ಚಿಯಿಂದ ಮಾತ್ರ ಪ್ರಯಾಣ ವ್ಯವಸ್ಥೆ ಇದೆ. ಈ ಬಗ್ಗೆ ಖಚಿತ ಮಾಹಿತಿ ನೀಡುವ ಅಧಿಕಾರಿಗಳು ಬಂದರಿನತ್ತ ಬಂದಿರಲಿಲ್ಲ. ಮಿನಿ ಹಡಗು ಖಾಸಗಿಯಾಗಿದ್ದು, ಸರಕಾರದ ಪರವಾಗಿ ಸ್ವಾಗತಿಸಲು ಅಥವಾ ಪ್ರಯಾಣದ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳು ಇರಲಿಲ್ಲ. ಹಡಗಿನಲ್ಲಿ ಲಕ್ಷದ್ಪೀಪದ ಪೊಲೀಸರು ಭದ್ರತೆಗೆ ಬಂದಿದ್ದರು. ಒಳಭಾಗದಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಹವಾನಿಯಂತ್ರಿತ ಹಾಲ್, ಮೇಲ್ಭಾಗದಲ್ಲಿ ಹಡಗಿನ ಕ್ಯಾಪ್ಟನ್ ಕೊಠಡಿ ಇದೆ. ಒಮ್ಮೆಗೆ 160 ಮಂದಿ ಪ್ರಯಾಣಿಕರು ಮತ್ತು 13 ಮಂದಿ ಸಿಬಂದಿಯನ್ನು ಕರೆದೊಯ್ಯುವ ಸಾಮರ್ಥ್ಯ ಹೊಂದಿದೆ. ಲಕ್ಷದ್ವೀಪಕ್ಕೆ ತೆರಳುವ ಪ್ರವಾಸಿಗರಿಗೆ ಪಾಸ್ ವ್ಯವಸ್ಥೆ ಸರಳೀಕೃತಗೊಳಿಸಿದರೆ ಭಾರೀ ಡಿಮ್ಯಾಂಡ್ ಬರಬಹುದು. ಮಂಗಳೂರಿನಿಂದ ಲಕ್ಷದ್ವೀಪಕ್ಕೆ ತರಕಾರಿ, ಇನ್ನಿತರ ಸರಕು ಸಾಗಾಟಕ್ಕೆ ಅವಕಾಶ ಇದ್ದರೂ, ಪ್ರಯಾಣಿಕರ ಸಂಚಾರಕ್ಕೆ ವ್ಯವಸ್ಥೆ ಇರದಿರುವುದು ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗಿದೆ.
First tourist high Speed boat vessel arrives from Lakshadweep to Mangalore with 200 passengers. This is the first Speed boat ship that is arriving to Mangalore after covid. Citizens of Lakshadweep came with great joy and landed in Mangalore. Many came for medical treatment some came for shopping and some came to meet there relatives.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
16-05-25 10:06 am
Mangalore Correspondent
Capt Brijesh Chowta, Mangalore Mp, CM Siddara...
15-05-25 08:04 pm
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm