Hot sun heat, Mangalore temperature; ಕರಾವಳಿಯಲ್ಲಿ ಉರಿ ಬಿಸಿಲು ; ತತ್ತರಿಸಿದ ಜನರು, 40 ಡಿಗ್ರಿ ತಲುಪಿದ ತಾಪಮಾನ, ಮಧ್ಯಾಹ್ನ ಅನಗತ್ಯ ಹೊರಗೆ ಹೋಗದಂತೆ ಸಲಹೆ 

01-05-24 11:43 am       Mangalore Correspondent   ಕರಾವಳಿ

ಕರಾವಳಿ ಜಿಲ್ಲೆಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚುತ್ತಿದ್ದು, ದಿನದಿಂದ ದಿನಕ್ಕೆ ಅಧಿಕ ತಾಪಮಾನ ದಾಖಲಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಬೆಳಗ್ಗೆ ಮೋಡದ ವಾತಾವರಣ ಇದ್ದರೆ, 10 ಗಂಟೆ ಕಳೆಯುತ್ತಿದ್ದಂತೆ ಬಿಸಿಲಿನ ಏಟು ತೀವ್ರಗೊಳ್ಳುತ್ತಿದೆ. ಬೆಳಗ್ಗೆ 11ರಿಂದ ಅಪರಾಹ್ನ 3.30ರ ವರೆಗೂ ಉರಿ ಬಿಸಿಲು ತತ್ತರಿಸುವಂತೆ ಮಾಡುತ್ತಿದೆ. 

ಮಂಗಳೂರು, ಮೇ 1: ಕರಾವಳಿ ಜಿಲ್ಲೆಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚುತ್ತಿದ್ದು, ದಿನದಿಂದ ದಿನಕ್ಕೆ ಅಧಿಕ ತಾಪಮಾನ ದಾಖಲಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಬೆಳಗ್ಗೆ ಮೋಡದ ವಾತಾವರಣ ಇದ್ದರೆ, 10 ಗಂಟೆ ಕಳೆಯುತ್ತಿದ್ದಂತೆ ಬಿಸಿಲಿನ ಏಟು ತೀವ್ರಗೊಳ್ಳುತ್ತಿದೆ. ಬೆಳಗ್ಗೆ 11ರಿಂದ ಅಪರಾಹ್ನ 3.30ರ ವರೆಗೂ ಉರಿ ಬಿಸಿಲು ತತ್ತರಿಸುವಂತೆ ಮಾಡುತ್ತಿದೆ. 

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಉರಿ ಬಿಸಿಲಿನ ವಾತಾವರಣ ಇನ್ನೂ ನಾಲ್ಕೈದು ದಿನ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಭಾಗದಲ್ಲಿ ಸದ್ಯಕ್ಕೆ ಮಳೆಯ ಮುನ್ಸೂಚನೆ ಇಲ್ಲ.

ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಧ್ಯಾಹ್ನ ವೇಳೆ ವಿಪರೀತ ಎನ್ನುವಂತೆ ಉರಿ ಬಿಸಿಲು ಕಾಣಿಸುತ್ತಿದ್ದು, ತಾಪಮಾನ 40 ಡಿ.ಸೆ. ಆಸುಪಾಸಿಗೆ ತಲುಪಿದೆ. ಮಂಗಳೂರಿನಲ್ಲಿ ಮಂಗಳವಾರ 35-36 ಡಿಗ್ರಿಯಷ್ಟು ತಾಪಮಾನ ದಾಖಲಾಗಿದೆ. 

ಬಿಸಿಲಿನಲ್ಲಿ ಎಚ್ಚರ ಅಗತ್ಯ 

ಉರಿ ಬಿಸಿಲಿನ ವಾತಾವರಣ ಇರುವುದರಿಂದ ಕರಾವಳಿಯ ಜನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಮಧ್ಯಾಹ್ನ 12ರಿಂದ 3ರ ವರೆಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಿಬೇಕು, ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ನೀರು ಕುಡಿಯಿರಿ, ಸಾಧ್ಯವಾದಷ್ಟು ಹಗುರವಾದ, ತಿಳಿ ಬಣ್ಣದ, ಸಡಿಲವಾದ ಮತ್ತು ರಂಧ್ರವಿರುವ ಹತ್ತಿ ಬಟ್ಟೆಗಳನ್ನು ಧರಿಸಿ, ಹೊರಗಿನ ತಾಪಮಾನ ಹೆಚ್ಚಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸಿ, ಆಲ್ಕೋಹಾಲ್‌, ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್‌ ತಂಪು ಪಾನೀಯಗಳನ್ನು ತಪ್ಪಿಸಿ, ಹಳೆಯ ಆಹಾರವನ್ನು ಸೇವಿಸಬೇಡಿ, ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡಬೇಡಿ, ಅನಾರೋಗ್ಯ ಎದುರಾದರೆ, ತಕ್ಷಣ ವೈದ್ಯರನ್ನು ಭೇಟಿ ಮಾಡಿ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

The intensity of the sun is increasing in the coastal districts and the temperature is getting higher day by day. In Dakshina Kannada, Udupi district, if the weather is cloudy in the morning, then as 10 hours pass, the heat of the sun is intensifying. From 11 am to 3.30 pm the scorching sun is making me shiver.