ಬ್ರೇಕಿಂಗ್ ನ್ಯೂಸ್
02-12-20 07:19 pm Mangaluru Correspondent ಕರಾವಳಿ
ಉಳ್ಳಾಲ, ಡಿ. 2: ಎರಡು ದಿನಗಳ ಹಿಂದೆ ಉಳ್ಳಾಲ ಬೈಲಿನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ನೀರಿನ ಟ್ಯಾಂಕರ್ ಅಡಿಗೆ ಬಿದ್ದು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಐದು ವರ್ಷದ ಮಗು ಕೃಷ್ಣ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.

ಮೂಲತಃ ಉತ್ತರ ಪ್ರದೇಶ ಮೂಲದ, ಉಳ್ಳಾಲಬೈಲು ಬಾಕಿಮಾರ್ ನಲ್ಲಿ ಬಾಡಿಗೆ ನಿವಾಸದಲ್ಲಿರುವ ಶರವಣ್ ಕುಮಾರ್ ಮತ್ತು ಪಿಂಕಿ ದಂಪತಿಗಳ ಕೊನೆಯ ಪುತ್ರ ಕೃಷ್ಣ ಮೃತಪಟ್ಟ ದುರ್ದೈವಿ.
ಸೋಮವಾರ ಸಂಜೆ ತಾಯಿ ಮತ್ತು ಸಹೋದರ ಸಹೋದರಿಯರೊಂದಿಗೆ ರಸ್ತೆ ದಾಟುತ್ತಿದ್ದ ವೇಳೆ ಟ್ಯಾಂಕರ್ ಹರಿದ ಪರಿಣಾಮ ಮಗುವಿನ ಸೊಂಟದ ಕೆಳಗಿನ ಎರಡೂ ಕಾಲುಗಳು ತುಂಡಾಗಿ ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾಯಿ ಮಕ್ಕಳ ಕುಟುಂಬವು ಉಳ್ಳಾಲ ಬೀಚ್ ಗೆ ವಿಹಾರಕ್ಕೆಂದು ತೆರಳಿ ಹಿಂದಿರುಗುವಾಗ ದುರ್ಘಟನೆ ನಡೆದಿತ್ತು. ಬಾಲಕನಿಗೆ ಎರಡು ದಿವಸ ಚಿಕಿತ್ಸೆ ನೀಡಿದರೂ ಯಾವುದೇ ಫಲ ನೀಡದ ಹಿನ್ನೆಲೆ ಇಂದು ಸಂಜೆ ಕೃಷ್ಣ ಮೃತಪಟ್ಟಿದ್ದಾನೆ.



ಬಾಡಿಗೆ ಮನೆ ಬದಲಿಸಲು ತಯಾರಾಗಿದ್ದರು;
ಉತ್ತರ ಪ್ರದೇಶ ಮೂಲದ ಶರವಣ್, ಪಿಂಕಿ ದಂಪತಿಗಳಿಗೆ 5 ಮಕ್ಕಳು. ಕೊನೆಯ ಕಾರ್ತಿಕ್ ಮತ್ತು ಕೃಷ್ಣ ಎಂಬ ಮಕ್ಕಳು ಅವಳಿ ಜವಳಿಯಾಗಿದ್ದರು. ತಂದೆ ಮಂಗಳೂರಿನಲ್ಲಿ ಪಾನ್ ಸ್ಟಾಲ್ ಹೊಂದಿದ್ದು ತೀರಾ ಬಡ ಕುಟುಂಬ. ಕುಟುಂಬ ಕಳೆದ 15 ವರ್ಷಗಳಿಂದ ಮಂಗಳೂರಿನಲ್ಲೇ ನೆಲೆಸಿದ್ದು ಈ ವಾರ ಉಳ್ಳಾಲದ ಬೈಲ್ ಬಾಕಿಮಾರ್ ಮನೆಯಿಂದ ಬೇರೆಡೆ ಬಿಡಾರ ಸ್ಥಳಾಂತರಕ್ಕೆ ಸಿದ್ಧತೆ ನಡೆಸಿದ್ದರೆನ್ನಲಾಗಿದೆ.
ಮೃತದೇಹವನ್ನು ದಕ್ಷಿಣ ಸಂಚಾರಿ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
Also Read: ಉಳ್ಳಾಲ : ರಸ್ತೆ ದಾಟುತ್ತಿದ್ದ ಮಗುವಿನ ಮೇಲೆ ಹರಿದ ಟ್ಯಾಂಕರ್ !!
Young little boy who was hit by a water tanker in Ullal and who was in serious condition has breathed his last in the private hospital at Ullal.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
10-10-26 10:31 pm
HK News Staffer
ಸಿಇಸಿ ವಿರುದ್ಧ ದೆಹಲಿ, ಮುಂಬೈನಲ್ಲಿ ಭಾರೀ ಪ್ರತಿಭಟನ...
10-10-26 07:33 pm
ನಂದಿಗ್ರಾಮ, ರೇಜಿನಗರದಲ್ಲಿ ಬಿಜೆಪಿಗೆ ಭರ್ಜರಿ ಜಯ ;...
09-10-26 11:04 pm
ಸರ್ಕಾರಿ ಸಂಸ್ಥೆಯಿಂದ ಕೋಟ್ಯಂತರ ದೇಣಿಗೆ ; ಪಿಣರಾಯಿ...
09-10-26 05:40 pm
Prakash Raj, Dhruv Rathee: SIR ರದ್ದತಿಗೆ ಬೆಂಗಳ...
08-10-26 08:03 pm
10-10-26 09:27 pm
HK News Staffer
Sowjanya, Mangalore, Justice: ಬೆಳ್ತಂಗಡಿಯಲ್ಲಿ...
10-10-26 09:17 pm
ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ; ಉತ್ತರ ಕನ್ನಡ ಸ...
10-10-26 05:09 pm
ಮೂಡುಶೆಡ್ಡೆ ; ಮುಸ್ಲಿಮರ ದಫನಕ್ಕೆ 2 ಎಕರೆ ಪಿಲಿಕುಳದ...
10-10-26 03:21 pm
Nana patekar: ಮಂಗಳೂರು, ಉಡುಪಿಯೊಂದಿಗೆ ನಾನಾ ಪಾಟೇ...
08-10-26 04:30 pm
10-10-26 02:27 pm
HK News Staffer
ಮೃಗಾಲಯಕ್ಕೆ ಗಂಡನೊಂದಿಗೆ ಬಂದ ನವವಿವಾಹಿತೆ: ಪತಿ ಬೈಕ...
09-10-26 08:41 pm
Dharwad Accident: ಧಾರವಾಡ ; ಕಾರು - ಕ್ಯಾಂಟರ್ ನಡ...
09-10-26 05:37 pm
ಕೊರಿಯರ್ ನಲ್ಲಿ ಪಂಜಾಬಿನಿಂದ ಮಂಗಳೂರಿಗೆ ಎಂಡಿಎಂಎ ಪೂ...
09-10-26 03:25 pm
Nisha Raphael, POCSO: 11 ವರ್ಷದ ಬಾಲಕನ ಮೇಲೆ ಲೈಂ...
09-10-26 03:23 pm