Ut Khader, Ullal, election Mangalore: ಜೀವನದಲ್ಲಿ ಸಮಾನತೆ ಕಾಣುವುದು ಮತದಾನದಲ್ಲಿ ಮಾತ್ರ ; ಮತದಾನ ಬಳಿಕ ಸ್ಪೀಕರ್ ಖಾದರ್, ಕುಂಪಲದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮತಚಲಾವಣೆ, ಬಿಜೆಪಿ ನವ ನಾರಿಶಕ್ತಿಯರಿಂದ ಪ್ರಥಮ ಮತ ಚಲಾವಣೆ 

26-04-24 11:09 am       Mangalore Correspondent   ಕರಾವಳಿ

ವಿಧಾನಸಭೆ ಸಭಾಧ್ಯಕ್ಷ ಯು.ಟಿ .ಖಾದರ್ ಅವರು ಬೋಳಿಯಾರು ಗ್ರಾಮದ ಜಾರದಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಟುಂಬ ಸಮೇತರಾಗಿ ಮತ ಚಲಾಯಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಕುಂಪಲ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು. 

ಉಳ್ಳಾಲ, ಎ.26: ವಿಧಾನಸಭೆ ಸಭಾಧ್ಯಕ್ಷ ಯು.ಟಿ .ಖಾದರ್ ಅವರು ಬೋಳಿಯಾರು ಗ್ರಾಮದ ಜಾರದಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಟುಂಬ ಸಮೇತರಾಗಿ ಮತ ಚಲಾಯಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಕುಂಪಲ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು. 

ಯು.ಟಿ ಖಾದರ್ ಅವರು ಪತ್ನಿ  ಲೆಮೀಝ್ ಖಾದರ್, ಪುತ್ರಿ ಹವ್ವಾ ನಸೀಮ, ಆಪ್ತ ಸಹಾಯಕರಾದ ಮಹಮ್ಮದ್ ಲಿಬ್ಝೆತ್ ಜೊತೆ ಜಾರದಗುಡ್ಡೆ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು. ಈ ವೇಳೆ ಮಾತನಾಡಿದ ಖಾದರ್ ಅವರು ಜೀವನದಲ್ಲಿ ಸಮಾನತೆ ಕಾಣುವುದು ಮತದಾನವೊಂದರಲ್ಲಿ ಮಾತ್ರ. ಎಷ್ಟೇ ಕಡು ಬಡವನಾದರೂ, ಆಗರ್ಭ ಶ್ರೀಮಂತನಾದರೂ ಎಲ್ಲರಿಗೂ ಒಂದೇ ಮತದಾನದ ಹಕ್ಕು ಮಾತ್ರ ಇರುತ್ತದೆ. ಈ ಸಮಾನತೆಯ ಸಾಂವಿಧಾನಿಕ ಹಕ್ಕನ್ನ ಚಲಾಯಿಸೋದು ನಮ್ಮೆಲ್ಲರ ಕರ್ತವ್ಯ. ದೇಶದ ಹಿತಕ್ಕಾಗಿ ಎಲ್ಲರೂ ಉತ್ಸಾಹದಿಂದ ಮತ ಚಲಾಯಿಸುವಂತೆ ಕರೆ ನೀಡಿದರು. 

ಕುಂಪಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಅವರು ಪಕ್ಷದ ಕಾರ್ಯಕರ್ತರ ಜೊತೆ ತೆರಳಿ ಮತದಾನ ಮಾಡಿದರು. ಈ ವೇಳೆ ಮಾತನಾಡಿದ ಅವರು ಸಧೃಢ, ವಿಕಸಿತ ಭಾರತ ನಿರ್ಮಾಣಕ್ಕೆ ಮೋದಿಯೇ ಮಗದೊಮ್ಮೆ ಪ್ರದಾನಿಯಾಗಿ ಆಯ್ಕೆಯಾಗಲಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು ಅತ್ಯಧಿಕ ಮತಗಳ ಅಂತರಗಳಲ್ಲಿ ಗೆಲ್ಲಲಿದ್ದಾರೆ ಎಂದರು.

ಮಂಗಳೂರು ವಿಧಾನಸಭಾ ಕ್ಷೇತ್ರದ ವಿವಿಧ ಮತಗಟ್ಟೆಗಳಲ್ಲಿ ಬಿಜೆಪಿಯ "ನಾರಿ ಶಕ್ತಿ ಬೂತ್ ಶಕ್ತಿ ಅಭಿಯಾನ" ಅಂಗವಾಗಿ ಶುಕ್ರವಾರ ಬೆಳ್ಳಂಬೆಳಗ್ಗೆ 7 ಗಂಟೆಗೆ ಸರದಿ ಸಾಲಿನಲ್ಲಿ ನಿಂತು ಪ್ರಥಮವಾಗಿ ನವ, ನಾರಿಯರು ಉತ್ಸಾಹದಿಂದ ಮತ ಚಲಾಯಿಸಿದರು. ಉಳ್ಳಾಲ ತಾಲೂಕಿನ ಕಲ್ಲಾಪು ಪಟ್ಲ ಉರ್ದು ಶಾಲೆ, ಕುಂಪಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಿಲಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಅನೇಕ ಮತಗಟ್ಟೆಗಳಲ್ಲಿ ನವ ನಾರಿಯರು ಪ್ರಥಮವಾಗಿ ಮತ ಚಲಾಯಿಸಿದರು.

Speaker UT Khader cast vote at boliyar at Ullal in Mangalore with family, Khader along with his wife and his personal assistant Lifzi casted their vote.