ಬ್ರೇಕಿಂಗ್ ನ್ಯೂಸ್
26-04-24 08:09 am Mangalore Correspondent ಕರಾವಳಿ
ಮಂಗಳೂರು, ಎ.26: ಲೋಕಸಭೆ ಚುನಾವಣೆಗೆ ಮಂಗಳೂರಿನಲ್ಲಿ ಮತದಾರರು ಬೆಳಗ್ಗಿನಿಂದಲೇ ಉತ್ಸಾಹದಿಂದಲೇ ಪಾಲ್ಗೊಂಡಿದ್ದಾರೆ. ನಗರದ ಕಪಿತಾನಿಯೋ ಸ್ಕೂಲ್ ಮತಗಟ್ಟೆಯಲ್ಲಿ ಬೆಳಗ್ಗೆ ಏಳು ಗಂಟೆಗೆ ಮತದಾನ ಶುರುವಾಗುವ ಮೊದಲೇ ಭಾರೀ ರಶ್ ಇತ್ತು.
ಸರತಿ ಸಾಲಿನಲ್ಲಿ ಮತದಾರರು ನಿಂತಿದ್ದು ಮತಗಟ್ಟೆ ಒಳ ಹೋಗಲು ಕಾಯುತ್ತಿದ್ದಾರೆ. ಬಿಸಿಲೇರುವ ಮೊದಲೇ ಮತ ಚಲಾಯಿಸಿ ಬರಬೇಕು ಎನ್ನುವ ಧಾವಂತದಲ್ಲಿ ಮಹಿಳೆಯರು, ಹಿರಿಯ ನಾಗರಿಕರು ಮತಗಟ್ಟೆಗೆ ಆಗಮಿಸಿದ್ದಾರೆ.
ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಕಪಿತಾನಿಯೋ ಶಾಲೆಯ ಮತಗಟ್ಟೆಗೆ ಬಂದಿದ್ದು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಮತಗಟ್ಟೆಯತ್ತ ಬರುವಾಗಲೇ ಹಿರಿಯ ನಾಗರಿಕರೊಬ್ಬರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಭಾರೀ ಜನ ಇರುವುದರಿಂದ ಪದ್ಮರಾಜ್ ದಂಪತಿ ಎಪಿಕ್ ಕಾರ್ಡ್ ಹಿಡಿದು ಮತ ಸರತಿ ಸಾಲಿನಲ್ಲಿ ನಿಂತಿದ್ದಾರೆ.
ಮತಗಟ್ಟೆಯ ಹೊರಭಾಗದಲ್ಲಿ 30 ಮೀಟರ್ ಉದ್ದಕ್ಕೂ ಜನರು ಸರತಿಯಲ್ಲಿ ನಿಂತಿದ್ದಾರೆ. ಬಿಸಿಲು ಏರಿದರೆ ಶಾಲೆಯ ಅಂಗಳದಲ್ಲಿ ಕ್ಯೂ ನಿಲ್ಲುವುದು ಕಷ್ಟವಾಗಬಹುದು. ಬೆಳಗ್ಗೆ ಬೇಗ ಬಂದು ಮತ ಚಲಾಯಿಸಲು ಜನರು ಕಾತರರಾಗಿದ್ದಾರೆ. ಮಂಗಳೂರು ನಗರದ ಎಲ್ಲ ಕಡೆಯೂ ಜನರು ಇದೇ ರೀತಿ ಮತದಾನಕ್ಕೆ ಉತ್ಸಾಹ ತೋರಿದ್ದಾರೆ. ಹೊಸ ಮತದಾರರು ಕೂಡ ಬೇಗನೇ ಬಂದು ಮತ ಹಾಕುತ್ತಿದ್ದಾರೆ.
ಹೊಸ ಮತದಾರರು ಮೊದಲ ಬಾರಿಗೆ ಓಟ್ ಹಾಕಿದ ಖುಷಿಯಲ್ಲಿದ್ದಾರೆ. ದೇಶಕ್ಕಾಗಿ ಓಟ್ ಹಾಕಿದ್ದೇನೆಂಬ ಧನ್ಯತೆಯ ಭಾವನೆ ಇದೆ. ಓಟ್ ಹಾಕುವಾಗ ಹೆಮ್ಮೆಯ ಭಾವನೆ ಬಂತು. ದೇಶದ ಭವಿಷ್ಯ ನಿರ್ಣಯದಲ್ಲಿ ತನ್ನದೂ ಪಾತ್ರ ಇದೆಯೆಂಬ ಭಾವನೆ ಇದೆ ಎಂದು ಮೊದಲ ಬಾರಿಗೆ ಓಟ್ ಹಾಕಿದ ವಿದ್ಯಾರ್ಥಿನಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು.
Mangalore loksabha elections 2024, people gather in large number to cast vote early morning at Capitanio High School near Pumpwell. Congress candidate Padmaraj and his family came to cast their votes.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
16-07-25 01:01 pm
Mangalore Correspondent
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
16-07-25 04:37 pm
HK News Desk
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm
Lawrence Bishnoi, Bangalore, Crime: ಡಾನ್ ಲಾರೆ...
15-07-25 06:52 pm
Mangalore, Moodbidri college, Rape, Blackmail...
15-07-25 06:07 pm