Banta Brigade, Mangalore, Brijesh Chowta: ಬಂಟ ಬ್ರಿಗೇಡ್ ಹೆಸರಲ್ಲಿ ಸಮುದಾಯಕ್ಕೆ ಅವಹೇಳನ ; ಬಂಟ ಸಮಾಜದ ಪ್ರಮುಖರಿಂದ ಪೊಳಲಿಯಲ್ಲಿ ಪ್ರಾರ್ಥನೆ, ಜಾತಿ ವಿಷ ಬೀಜ ಬಿತ್ತಿದ್ದಕ್ಕೆ ಖಂಡನೆ

25-04-24 02:42 pm       Mangalore Correspondent   ಕರಾವಳಿ

‘’ಬಂಟ ಬ್ರಿಗೇಡ್ ’’ ಹೆಸರಲ್ಲಿ ಜಾತಿಗಳ ನಡುವೆ ದ್ವೇಷ ಮೂಡಿಸುವ ರೀತಿ ಕರಪತ್ರ ಹಂಚಿದ ದುಷ್ಕೃತ್ಯವನ್ನು ಖಂಡಿಸಿ ಮಂಗಳೂರಿನ ಬಂಟ ಸಮುದಾಯದ ಪ್ರಮುಖರು ರಾಜಕೀಯ ರಹಿತವಾಗಿ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಮಂಗಳೂರು, ಎ.25: ‘’ಬಂಟ ಬ್ರಿಗೇಡ್ ’’ ಹೆಸರಲ್ಲಿ ಜಾತಿಗಳ ನಡುವೆ ದ್ವೇಷ ಮೂಡಿಸುವ ರೀತಿ ಕರಪತ್ರ ಹಂಚಿದ ದುಷ್ಕೃತ್ಯವನ್ನು ಖಂಡಿಸಿ ಮಂಗಳೂರಿನ ಬಂಟ ಸಮುದಾಯದ ಪ್ರಮುಖರು ರಾಜಕೀಯ ರಹಿತವಾಗಿ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಂಟ ಸಮಾಜದಲ್ಲಿ ಅಸ್ತಿತ್ವವೇ ಇಲ್ಲದ ಬ್ರಿಗೇಡ್ ಹೆಸರನ್ನು ತೋರಿಸಿ ಜಾತಿ ಜಾತಿ ಮಧ್ಯೆ ದ್ವೇಷ, ವೈಷಮ್ಯ ಮೂಡಿಸುವಂತೆ ಯಾರೋ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಬಂಟ ಸಮಾಜ ಯಾವತ್ತೂ ಜಾತಿ, ಪಕ್ಷದ ಹಿಂದೆ ಹೋದ ಸಮಾಜವಲ್ಲ. ಸಮಾಜದ ಎಲ್ಲ ವರ್ಗದ ಜಾತಿಯ ಜನರನ್ನು ಸೇರಿಸಿಕೊಂಡು ಸಾಮರಸ್ಯ, ಸಹಬಾಳ್ವೆ, ಸಹೋದರತ್ವದ ಜೀವನವನ್ನು ಸಾಗಿಸುತ್ತಿದ್ದಾರೆ. ಇಂಥ ಕೃತ್ಯ ಎಸಗಿದವರಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಸಮುದಾಯದ ಪ್ರಮುಖರು ಪೊಳಲಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಜಾತಿ ಜಾತಿ ನಡುವೆ ವಿಷ ಬೀಜ ಬಿತ್ತಿ ಸಮಾಜವನ್ನು ಒಡೆಯುವ ಕಾಣದ ಕೈಗಳಿಗೆ ದೇವರು ಸದ್ಬುದ್ಧಿಯನ್ನು ಕರುಣಿಸಲಿ. ಯಾವುದೇ ಸಮುದಾಯದ ಬಂಧಗಳು ಇಂತಹ ಸುಳ್ಳು ಸುದ್ದಿಗಳಿಗೆ ಕಿವಿ ಕೊಡಬಾರದು. ಚುನಾವಣೆ ನಂತರದಲ್ಲಿಯೂ ನಾವು ಒಟ್ಟಾಗಿ ಸಹಬಾಳ್ವೆ ನಡೆಸಬೇಕು. ಪ್ರೀತಿ, ವಿಶ್ವಾಸದಿಂದ ಸ್ನೇಹಪೂರ್ವಕ ಜೀವನ ನಡೆಸುವಂತಾಗಬೇಕು. ಇಂತಹ ದ್ವೇಷ ಬಿತ್ತುವ ಲೇಖನ ಬರೆದವರು ಯಾರೆಂದು ಸಮಾಜಕ್ಕೆ ತೋರಿಸಿಕೊಡಬೇಕು ಎಂದು ಪೊಳಲಿ ಶ್ರೀ ಕ್ಷೇತ್ರದ ರಾಜರಾಜೇಶ್ವರಿ ಅಮ್ಮನವರ ಸನ್ನಿಧಾನದಲ್ಲಿ ಪ್ರಾರ್ಥನೆ ಮಾಡಲಾಯಿತು.

Mangalore Banta brigade fake poster, Bunts community visits polali temple to officer prayers. Some miscreants have created a fake Bunta Brigade with the photo of Brijesh Chowta trying to bring conflict among Bunts and Billavas.