ಬ್ರೇಕಿಂಗ್ ನ್ಯೂಸ್
20-04-24 07:42 pm Mangalore Correspondent ಕರಾವಳಿ
ಮಂಗಳೂರು, ಎ.20: ದಕ್ಷಿಣ ಕನ್ನಡ ಜಿಲ್ಲೆಯನ್ನು ಕಾಂಗ್ರೆಸ್, ಎಸ್ಡಿಪಿಐ, ಮುಸ್ಲಿಂ ಲೀಗ್ ಸೇರಿಕೊಂಡು ಮಲಪ್ಪುರಂ ಮಾಡಲು ಹೊರಟಿದೆ. ಬಿಲ್ಲವ ಸಮುದಾಯದ ಪದ್ಮರಾಜ್ ಕಾಂಗ್ರೆಸಿನ ಟೂಲ್ ಕಿಟ್ ಭಾಗ ಅಷ್ಟೇ. ಇಲ್ಲಿನ ಹಿಂದುತ್ವ, ಬಿಲ್ಲವರನ್ನು ಒಡೆಯಲು ಷಡ್ಯಂತ್ರ ಮಾಡಿದ್ದಾರೆ. ಆದರೆ ತುಳುನಾಡಿನ ಬಿಲ್ಲವರು ಇವರ ಷಡ್ಯಂತ್ರಕ್ಕೆ ಬಲಿಯಾಗಲ್ಲ ಎಂದು ಹಿರಿಯ ಬಿಲ್ಲವ ಮುಖಂಡ, ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಜೊತೆಗೆ ವಯನಾಡಿನಲ್ಲಿ ಮುಸ್ಲಿಂ ಲೀಗ್, ಎಸ್ಡಿಪಿಐ ಒಳ ಒಪ್ಪಂದ ಮಾಡಿದೆ. ಆದರೆ ಎರಡು ಷರತ್ತುಗಳನ್ನು ಹಾಕಿದೆ. ಒಂದು ವಯನಾಡಲ್ಲಿ ಕಾಂಗ್ರೆಸ್ ಬಾವುಟ ತೋರಿಸಬಾರದು. ಇನ್ನೊಂದು ಕರ್ನಾಟಕದಲ್ಲಿ ಮಲಪ್ಪುರಂ ಮಾಡಲು ಅವಕಾಶ ನೀಡಬೇಕು. ಇದೇ ಮಾದರಿಯಲ್ಲಿ ದಕ್ಷಿಣ ಕನ್ನಡವನ್ನು ಮಲಪ್ಪುರಂ ಮಾಡಲು ಹೊರಟಿದ್ದಾರೆ. ಅದರ ಮೊದಲ ಅಸ್ತ್ರವಾಗಿ ಪ್ರಬಲ ಸಮುದಾಯ ಬಿಲ್ಲವರನ್ನು ಒಡೆಯೋದು, ಬಿಲ್ಲವರ ಒಳಗೆ ಬಿರುಕು ಮೂಡಿಸುವುದು, ವಯನಾಡಲ್ಲಿ ರಾಹುಲ್ ಸ್ಪರ್ಧಿಸಿದ್ದು ಮೊನ್ನೆ ನಾಮಿನೇಶನ್ ದಿನ ಒಂದೇ ಒಂದು ಕಾಂಗ್ರೆಸ್ ಧ್ವಜ ಹಾರಾಡಿಲ್ಲ.
ಕಾಂಗ್ರೆಸ್ ಪಕ್ಷಕ್ಕೆ ಪದ್ಮರಾಜ್ ಟೂಲ್ ಕಿಟ್ ಭಾಗ ಅಷ್ಟೆ, ಪ್ರಬಲ ಬಿಲ್ಲವ ಸಮುದಾಯ ಒಡೆಯುವುದೇ ಇವರ ಉದ್ದೇಶ. ಇದರ ಹಿಂದೆ ಎಸ್ಡಿಪಿಐ, ಮುಸ್ಲಿಂ ಲೀಗ್, ಪಿಎಫ್ಐ ಇರೋದು ಸ್ಪಷ್ಟ. ನಾರಾಯಣ ಗುರುಗಳ ವಿಚಾರದಲ್ಲಿ ಪದ್ಮರಾಜ್, ಕಾಂಗ್ರೆಸ್ ಮುಖಂಡರು ಬಹಳ ಮಾತಾಡಿದಾರೆ. ನಾರಾಯಣ ಗುರು ವೃತ್ತದ ವಿಚಾರದಲ್ಲಿ ಕಾಂಗ್ರೆಸ್ ಕೊಡುಗೆ ಏನೆಂದು ಹೇಳಲಿ. ಬ್ರಿಟಿಷ್ ಪಳೆಯುಳಿಕೆ ಲೇಡಿಹಿಲ್ ಹೆಸರಿಗಾಗಿ ಕಾಂಗ್ರೆಸ್ ನಾಯಕರು ಹೋರಾಟ ಮಾಡಿದ್ದರು. ಲೇಡಿಹಿಲ್ ಬ್ರಿಟಿಷ್ ಕುರುಹು, ಇಲ್ಲಿನ ಕ್ರಿಸ್ತಿಯನ‌್ನರ ಕುರುಹು ಅಲ್ಲ. ನಾರಾಯಣ ಗುರು ವೃತ್ತ ಮಾಡಿದಾಗ ಇದೇ ಪದ್ಮರಾಜ್ ವಿರೋಧ ವ್ಯಕ್ತಪಡಿಸಿದ್ದರು.
ನಾರಾಯಣ ಗುರು ವೃತ್ತದ ಬಗ್ಗೆ ಸಲಹೆ ಕೊಟ್ಟವರು ಬಿರುವೆರ್ ಕುಡ್ಲ. ನಾಲ್ಕು ವರ್ಷಗಳ ಹಿಂದೆ ಗುರುಗಳ ವೃತ್ತ ಮಾಡಬೇಕೆಂದು ನಾನೂ ಪ್ರಯತ್ನಿಸಿದ್ದೆ. ನಳಿನ್ ಕುಮಾರ್, ವೇದವ್ಯಾಸ್ ಬಳಿ ಹೋದಾಗ ಸಪೋರ್ಟ್ ಮಾಡಿದ್ರು. ಪಾಲಿಕೆಯಿಂದ ಅನುಮತಿ ದೊರಕಿಸಿ ಮೂಡಾ ಮೂಲಕ 62 ಲಕ್ಷ ವೆಚ್ಚದಲ್ಲಿ ವೃತ್ತ ಮಾಡಲಾಗಿತ್ತು. ಇದರಲ್ಲಿ ಕಾಂಗ್ರೆಸ್ ಏನೂ ಕೊಡುಗೆ ಇಲ್ಲ. ಈಗ ಮೋದಿ ನಾರಾಯಣ ಗುರುಗಳ ವಿರೋಧಿಯೆಂದು ಬಿಂಬಿಸಲು ಹೊರಟಿದ್ದಾರೆ. ಕೇರಳದ ನಾರಾಯಣ ಗುರುಗಳ ಪೀಠ ಶಿವಗಿರಿ ಮಠಕ್ಕೆ ಮೋದಿ 70 ಕೋಟಿ ಕೊಟ್ಟು ಅಭಿವೃದ್ಧಿ ಮಾಡಿಸಿದ್ದಾರೆ. 2013 ರಲ್ಲಿ ಗುಜರಾತ್ ಸಿಎಂ ಆಗಿದ್ದಾಗ ಶಿವಗಿರಿಗೆ ಮೋದಿ ಹೋಗಿದ್ದರು. ಗುರುಗಳ ಅನುಗ್ರಹದಿಂದ ಪ್ರಧಾನಿ ಆಗಿದ್ದೇನೆಂದು 2014ರಲ್ಲಿ ಹೇಳಿದ್ದಲ್ಲದೆ, ಮಠಕ್ಕೆ ಅನುದಾನ ಬಿಡುಗಡೆ ಮಾಡಿಸಿದ್ದರು. ಆದರೆ ಅದೇ ಸಮುದಾಯದ ಕೇರಳ ಸಿಎಂ ಪಿಣರಾಯಿ ವಿಜಯನ್, ಶಿವಗಿರಿ ಮಠದ ಸ್ವಾಮೀಜಿಯನ್ನು ಬಂಧಿಸಿ, ಸನ್ಯಾಸಿಗಳಿಗೆ ತೊಂದರೆ ನೀಡಿದ್ದರು. ಶಿವಗಿರಿಯ ಸಮುದಾಯ ಕಮ್ಯುನಿಸ್ಟ್ ಬಿಟ್ಟು ಬಿಜೆಪಿ ಹೋಗಿದ್ದಕ್ಕಾಗಿ ನಾರಾಯಣ ಗುರು ಟ್ಯಾಬ್ಲೋ ಮುಂದಿಟ್ಟು ರಾಜಕೀಯ ಸಂಚು ಹೆಣೆದಿದ್ದಾರೆ. ನಾರಾಯಣ ಗುರು ಟ್ಯಾಬ್ಲೋ ಒಂದು ರಾಜಕೀಯ ಸಂಚು ಅಷ್ಟೇ ಎಂದು ಹರಿಕೃಷ್ಣ ಬಂಟ್ವಾಳ್ ಹೇಳಿದರು.
ದೇಶ ಕಂಡ ನಿಷ್ಡಾವಂತ ರಾಜಕಾರಣಿ ಜನಾರ್ದನ ಪೂಜಾರಿ ಅವರನ್ನು ಕಾಂಗ್ರೆಸ್ ನಾಯಕರು ವಾಚಾಮಗೋಚರ ಬೈದಾಗ ಬಿಲ್ಲವರು ಎಲ್ಲಿದ್ದರು? ಆಗ ಬಿಲ್ಲವರಿಗೆ ಅವಮಾನ ಆಗಿಲ್ಲವೇ? ಪೂಜಾರಿ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದ ಸಚಿವನನ್ನು ಇದೇ ಪದ್ಮರಾಜ್ ಕುದ್ರೋಳಿಗೆ ತಂದು ಸನ್ಮಾನ ಮಾಡಿದ್ರು. ಕಾಂಗ್ರೆಸಿನ ಅಲ್ಪಸಂಖ್ಯಾತ ನಾಯಕನೊಬ್ಬ ಜನಾರ್ದನ ಪೂಜಾರಿ ಅವರನ್ನು ಎನ್ಕೌಂಟರ್ ಮಾಡವೇಕು, ಕಾಂಗ್ರೆಸ್ ಪಕ್ಷದಿಂದ ವಜಾ ಮಾಡಬೇಕು ಎಂದು ಹೇಳಿದ್ದರು. ಆಗ ಈ ಹರಿಕೃಷ್ಣ ಬಿಟ್ಟು ಯಾವುದೇ ಬಿಲ್ಲವ ವ್ಯಕ್ತಿಯೂ ಖಂಡನೆ ಮಾಡಿಲ್ಲ. ಪದ್ಮರಾಜ್ ಕೂಡ ಖಂಡನೆ ಮಾಡಿರಲಿಲ್ಲ. ಆಗ ಬಿಲ್ಲವ ಸಮಾಜಕ್ಕೆ ಅವಮಾನ ಆಗಿಲ್ಲವೇ ಎಂದು ಪ್ರಶ್ನಿಸಿದರು.
ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್ ಯಾವುದೇ ಪಾರ್ಟಿ ಪರವಾಗಿ ಓಟ್ ಕೇಳಬಾರದು. ಅಲ್ಲಿ ಎಲ್ಲ ಪಕ್ಷದವರೂ ಇದ್ದಾರೆ. ರಾಜಶೇಖರ ಕೋಟ್ಯಾನ್ ಒಂದು ಪಕ್ಷದ ಪರವಾಗಿ ಕೇಳೋದಿದ್ದರೆ ಮಹಾಮಂಡಲದ ಅಧ್ಯಕ್ಷ ಹುದ್ದೆಗೆ ರಾಜಿನಾಮೆ ಕೊಟ್ಟು ಓಟ್ ಕೇಳಲಿ. ಇಲ್ಲದಿದ್ದರೆ ಬಿಲ್ಲವ ಮಹಾಮಂಡಲ ತೆಗೆದು ಕಾಂಗ್ರೆಸ್ ಮಂಡಲ ಮಾಡಲಿ ಎಂದು ಟಾಂಗ್ ಇಟ್ಟರು.
ಮಂಗಳೂರಿನಲ್ಲಿ ವಿನಯ ಕುಮಾರ್ ಸೊರಕೆಯವರು ಬಿಲ್ಲವರ ಓಟು ಕೇಳುತ್ತಿದ್ದಾರೆ. ಉಡುಪಿಯಲ್ಲಿ ಹೋಗಿ ಬಿಲ್ಲವ ಸಮುದಾಯದ ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ಓಟು ಕೇಳುತ್ತಾರೆ. ಇಲ್ಲಿ ಬಿಲ್ಲವರಿಗೆ ಓಟ್ ಕೇಳುವ ಸೊರಕೆ, ಅಲ್ಲಿ ಕೋಟ ಪರವಾಗಿ ಯಾಕೆ ಓಟ್ ಕೇಳುತ್ತಿಲ್ಲ. ಇಲ್ಲಿ ಒಂದು ಗೆಜ್ಜೆ, ಅಲ್ಲಿ ಒಂದು ಹೆಜ್ಜೆ. ಇವರದು ಡೊಂಬರಾಟವೇ. ಯಾವುದೇ ಒಂದು ಜಾತಿ ಮುಂದಿಟ್ಟು ಯಾರೂ ಗೆಲ್ಲಲು ಆಗಲ್ಲ. ಜಾತಿವಾದಿಗಳಿಗೆ ಭವಿಷ್ಯವೂ ಇಲ್ಲ. ಜಾತಿವಾದಿಗಳಿಗೆ ಬೆಲೆಯೂ ಇಲ್ಲ ಎಂದು ಹರಿಕೃಷ್ಣ ಹೇಳಿದರು.
ಬಿಲ್ಲವರು ಯಾವತ್ತೂ ವಿಲನ್ ಆಗಬೇಡಿ, ನಿಜವಾದ ಹಿಂದು ವೀರರಾಗಿ. ಕಾಂಗ್ರೆಸಿನ ಟೂಲ್ ಕಿಟ್ ಭಾಗ ಆಗಬೇಡಿ. ತುಳುವ ನಾಡಿನ ನೈಜ ವೀರರಾಗಿ ಎಂದು ಹೇಳಿದ ಹರಿಕೃಷ್ಣ ಬಂಟ್ವಾಳ್, ನಾರಾಯಣ ಗುರು ನಿಗಮ ಮಾಡಿದ್ದು ಬಿಜೆಪಿ. ಡಿಕೆಶಿ, ಸಿದ್ದರಾಮಯ್ಯ ಹಜ್ ಭವನಕ್ಕೆ ಹತ್ತು ಕೋಟಿ, ಅಲ್ಪಸಂಖ್ಯಾತ ಉದ್ಯಮಿಗಳಿಗೆ 200 ಕೋಟಿ, ಕ್ರೈಸ್ತರಿಗೆ ನೂರು ಕೋಟಿ ಕೊಟ್ಟಿದಾರೆ. ಯಾಕೆ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಅನುದಾನ ಕೊಟ್ಟಿಲ್ಲ. ಹಾಗಾಗಿ ಹಿಂದು ಬಿಲ್ಲವ, ತುಳುನಾಡಿನ ದೇವರನ್ನು ನಂಬುವ ಬಿಲ್ಲವ ಕಾಂಗ್ರೆಸ್ ಪರವಾಗಿ ಓಟ್ ಹಾಕಲ್ಲ ಎಂದು ಹೇಳಿದ್ದಾರೆ.
ಕಮಲ ಕೆಸರಿನಲ್ಲಿದ್ದರೆ ಚೆನ್ನ, ದಾನ ಧರ್ಮ ಮಾಡುವ ಕೈ ಅಧಿಕಾರಕ್ಕೆ ಬರಬೇಕೆಂದು ಡಿಕೆಶಿ ಹೇಳಿದ್ದರು. ಕುಕ್ಕರ್ ಬಾಂಬ್ ಹಾಕಿದವರನ್ನು ಬ್ರದರ್ ಎಂದ ಕೈ, ಪ್ರವೀಣ್ ನೆಟ್ಟಾರು, ಪ್ರಶಾಂತ ಪೂಜಾರಿ, ಶರತ್ ಮಡಿವಾಳ ಅವರನ್ನು ಕೊಂದ ಕೈಯನ್ನು ನಾವು ನಂಬಬಹುದೇ.. ನಾನು ಹೇಳುತ್ತೇನೆ, ಗೂಂಡಾಗಿರಿ ಮಾಡುವ ಕೈ ಜೈಲಿನಲ್ಲಿದ್ದರೆ ಚೆನ್ನ. ಕೇಜ್ರಿವಾಲ್ ಜೈಲಿನಲ್ಲಿದ್ದಾನೆ, ನೀವೂ ಜೈಲಿನಲ್ಲಿದ್ದರೆ ಒಳ್ಳೆಯದು ಅಂತೇನೆ.
ಕಾಂಗ್ರೆಸ್, ಲೀಗ್ ಎಲ್ಲ ಸೇರಿ ಮಲಪ್ಪುರಂ ಮಾಡಲು ತಯಾರು ಮಾಡಿದ್ದಾರೆ, ಇತ್ತೀಚೆಗೆ ಕಾಞಂಗಾಡಲ್ಲಿ ರ್ಯಾಲಿ ಆಯ್ತು. ಹಿಂದುಗಳ‌್ನು ದೇವಳದ ಮುಂದೆ ನೇಣಿಗೆ ಹಾಕುತ್ತೇವೆ, ಜೀವಂತ ಸುಡುತ್ತೇವೆ ಎಂದು ಮುಸ್ಲಿಂ ಲೀಗ್ ರ್ಯಾಲಿಯಲ್ಲಿ ಹಿಂದು ದ್ವೇಷದ ಹೇಳಿಕೆ ನೀಡಿದ್ದರು. ಅಂಥ ಲೀಗ್ ಜೊತೆಗೆ ರಾಹುಲ್ ಮತ್ತು ಕಾಂಗ್ರೆಸ್ ಸೇರಿಕೊಂಡಿದೆ. ರಾಹುಲ್ಗಾಂಧಿ ತಮ್ಮದು ಜಾತ್ಯತೀತ ಪಕ್ಷ ಅಂತಾರೆ. ಮೋದಿ ಮತ್ತೆ ಬಂದಲ್ಲಿ ಸಂವಿಧಾನ ತೆಗೆದು ಹಾಕುತ್ತಾರೆ ಎಂದು ಹೇಳುತ್ತಿದ್ದಾರೆ. ಅಂಬೇಡ್ಕರ್ ಸಂವಿಧಾನದಲ್ಲಿ ಜಾತ್ಯತೀತ ಅನ್ನುವ ಪದವನ್ನೇ ಸೇರಿಸಿಲ್ಲ ಎನ್ನುವುದನ್ನು ನೆನಪಿಡಬೇಕು. ಸಂವಿಧಾನಕ್ಕೆ 98 ಸಲ ತಿದ್ದುಪಡಿ ಮಾಡಿದ್ದು ಕಾಂಗ್ರೆಸ್, ಇದೇ ಸಂವಿಧಾನ ಕಾಂಗ್ರೆಸನ್ನು ಮಣ್ಣು ಮುಕ್ಕಿಸುತ್ತೆ ನೋಡ್ತಾ ಇರಿ. ಬಿಜೆಪಿ ಕಾನೂನು ರೀತಿಯಲ್ಲೇ ಸಂವಿಧಾನ ಉಳಿಸುತ್ತದೆ.
ಈ ದೇಶದಲ್ಲಿ ರಾಹುಲ್ ಅಧಿಕಾರದಲ್ಲಿದ್ದರೆ ಹುಮಾಯೂನ್, ಬಾಬರ್, ಅಕ್ಬರ್ ಹುಟ್ಟಬಲ್ಲ, ಮೋದಿ ಇದ್ದರೆ ವಿವೇಕಾನಂದ, ಶಿವಾಜಿಯಂತವರು ಹುಟ್ಟಬಲ್ಲರು. ಹಿಂದುತ್ವ, ಸನಾತನ ಧರ್ಮದ ಉಳಿವಿಗಾಗಿ ದೇಶಭಕ್ತರಾದ ಎಲ್ಲರೂ ಬಿಜೆಪಿಗೆ ಮತ ಹಾಕಬೇಕು ಎಂದರು ಹರಿಕೃಷ್ಣ ಬಂಟ್ವಾಳ್.
ಹಿಂದುತ್ವದ ಕೋಟೆ ಪುಡಿ ಮಾಡುತ್ತೇನೆ ಎಂದು ಪದ್ಮರಾಜ್ ಹೇಳ್ತಾರೆ. ಇದೇ ವೇಳೆ, ಬಿಕೆ ಹರಿಪ್ರಸಾದ್, ಪಾಕಿಸ್ತಾನ ಬಿಜೆಪಿಗೆ ಮಾತ್ರ ವೈರಿ, ನಮಗಲ್ಲ ಕಾಂಗ್ರೆಸಿಗಲ್ಲ ಎಂದು ಹೇಳುತ್ತಾರೆ. ಹಿಂದುಗಳು ಥ್ರೆಟ್ ಫಾರ್ ನೇಶನ್ ಎಂದು ರಾಹುಲ್ ಹೇಳುತ್ತಾರೆ. ಚೈನಾ ನಮ್ಮ ವೈರಿಯಲ್ಲ ಎಂದು ಡಿಎಂಕೆ ನಾಯಕರು ಹೇಳ್ತಿದಾರೆ. ಇವರ ಅಜೆಂಡಾ ಏನೆಂದು ತಿಳಿದುಬರುತ್ತದೆ ಎಂದರು.
Congress to make Mangalore as Manappuram by joining with muslim league says BJP leader Harikrishna Bantwal in Mangalore. Billavas in Tulunadu will not bend for their dirty politics he added.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
16-05-25 04:45 pm
HK News Desk
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
16-05-25 10:27 pm
Mangalore Correspondent
Siddaramaiah, Cm Mangalore, BJP black flag: ಸ...
16-05-25 06:05 pm
Mangalore, Dinesh Gundurao: ಇಡಿ ದೇಶದಲ್ಲಿ ಅತೀ...
16-05-25 02:47 pm
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
Capt Brijesh Chowta, Mangalore Mp, CM Siddara...
15-05-25 08:04 pm
16-05-25 11:06 pm
Mangalore Correspondent
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm