Mangalore Yedapadavu accident: ಮಣ್ಣು ಸಾಗಾಟದ ಕಂಟೇನರ್ ಲಾರಿ ಬ್ರೇಕ್ ಫೇಲ್ ; ಎಡಪದವು ಇಳಿಜಾರಿನಲ್ಲಿ ಸರಣಿ ಅಪಘಾತ, ಟ್ಯಾಂಕರ್ ಪಲ್ಟಿಯಾಗಿ ನಾಲ್ಕು ಬೈಕ್, ಕಾರು ಜಖಂ, ಬಸ್ಸಿಗೆ ಒರಸಿ ತಪ್ಪಿದ ಅನಾಹುತ ! 

19-04-24 10:11 pm       Mangalore Correspondent   ಕರಾವಳಿ

ಸಿಮೆಂಟ್ ಮಿಕ್ಸ್ ಉದ್ದೇಶದ ಮಣ್ಣು ಸಾಗಿಸುವ ಕಂಟೇನರ್ ಲಾರಿ ಬ್ರೇಕ್ ಫೇಲ್ ಆಗಿ ಮಂಗಳೂರು- ಮೂಡುಬಿದ್ರೆ ಹೆದ್ದಾರಿಯ ಎಡಪದವು ಜಂಕ್ಷನ್ನಲ್ಲಿ ನಾಲ್ಕೈದು ವಾಹನಗಳಿ ಡಿಕ್ಕಿಯಾಗಿ ಸರಣಿ ಅಪಘಾತಕ್ಕೀಡಾಗಿ ಅವಾಂತರ ಸೃಷ್ಟಿಸಿದ ಘಟನೆ ನಡೆದಿದೆ. 

ಮಂಗಳೂರು, ಎ.19: ಸಿಮೆಂಟ್ ಮಿಕ್ಸ್ ಉದ್ದೇಶದ ಮಣ್ಣು ಸಾಗಿಸುವ ಕಂಟೇನರ್ ಲಾರಿ ಬ್ರೇಕ್ ಫೇಲ್ ಆಗಿ ಮಂಗಳೂರು- ಮೂಡುಬಿದ್ರೆ ಹೆದ್ದಾರಿಯ ಎಡಪದವು ಜಂಕ್ಷನ್ನಲ್ಲಿ ನಾಲ್ಕೈದು ವಾಹನಗಳಿ ಡಿಕ್ಕಿಯಾಗಿ ಸರಣಿ ಅಪಘಾತಕ್ಕೀಡಾಗಿ ಅವಾಂತರ ಸೃಷ್ಟಿಸಿದ ಘಟನೆ ನಡೆದಿದೆ. 

ಗಂಜಿಮಠದಿಂದ ಎಡಪದವು ಇಳಿಜಾರಿನಲ್ಲಿ ಸಾಗುತ್ತಿದ್ದ ಲಾರಿ ಬ್ರೇಕ್ ಫೇಲ್ ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿದ್ದು ಎಡಪದವು ಜಂಕ್ಷನ್ನಲ್ಲಿ ಮುಂದಿನಿಂದ ಬರುತ್ತಿದ್ದ ಬಸ್ಸಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಸೈಡ್ ತಗೊಂಡಿದ್ದಾನೆ. ಅಲ್ಲಿ ನಿಂತಿದ್ದ ಟ್ಯಾಂಕರ್ ಲಾರಿಗೆ ಡಿಕ್ಕಿಯಾಗಿ ಮುಂದಕ್ಕೆ ಬಂದಿದ್ದು ಅಗರಿ ಶೋರೂಮ್ ಇರುವ ಅಂಗಡಿ ಕಟ್ಟಡಕ್ಕೆ ನುಗ್ಗಿದೆ. ಫುಲ್ ಲೋಡ್ ಇದ್ದ ಕಾರಣ ಲಾರಿ ಓರೆಯಾಗಿ ನಿಂತಿದೆ.

ರಸ್ತೆ ಬದಿಯಲ್ಲಿದ್ದ ಟ್ಯಾಂಕರ್ ಉರುಳಿ ಬಿದ್ದಿದ್ದು ನಿಲ್ಲಿಸಿದ್ದ ನಾಲ್ಕು ಬೈಕ್, ಸ್ಕೂಟರ್ ಅಪ್ಪಚ್ಚಿಯಾಗಿದೆ. ಅಲ್ಲದೆ, ಅಲ್ಲಿದ್ದ ಸ್ವಿಫ್ಟ್ ಕಾರು ಕೂಡ ನಜ್ಜುಗುಜ್ಜಾಗಿದೆ. ಲಾರಿ ಒರಸಿಕೊಂಡು ನುಗ್ಗಿ ಬರುತ್ತಲೇ ಸಾರ್ವಜನಿಕರು ಓಡಿದ್ದರಿಂದ ಬಚಾವಾಗಿದ್ದಾರೆ. ಲಾರಿ ಚಾಲಕ ಸೇರಿ ಮೂವರಿಗೆ ಗಂಭೀರ ಗಾಯಗಳಾಗಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಡುಬಿದ್ರೆಯಿಂದ ಮಂಗಳೂರು ಬರುತ್ತಿದ್ದ ಖಾಸಗಿ ಬಸ್ಸಿನ ಮುಂಭಾಗಕ್ಕೆ ಒರಸಿದ್ದು ಹಾನಿಯಾಗಿದ್ದು ಬಿಟ್ಟರೆ ಪ್ರಯಾಣಿಕರಿಗೆ ತೊಂದರೆ ಆಗಿಲ್ಲ. 

ಸಂಜೆಯ ವೇಳೆಗೆ ಭೀಕರ ಅಪಘಾತ ನಡೆದಿದ್ದು ಸ್ಥಳದಲ್ಲಿ ಭಾರೀ ಸಂಖ್ಯೆಯ ಜನರು ಸೇರಿದ್ದರು. ಟ್ರಾಫಿಕ್ ರಾತ್ರಿಯ ವರೆಗೂ ಕ್ಲಿಯರ್ ಆಗಿರಲಿಲ್ಲ. ಬಜ್ಪೆ ಠಾಣೆ ಪೊಲೀಸರು ಲಾರಿಯನ್ನು ತೆರವುಗೊಳಿಸಲು ಹರಸಾಹಸ ಮಾಡಿದ್ದಾರೆ. 

ಗಂಜಿಮಠ ಪರಿಸರದಿಂದ ಮಣ್ಣು ಸಾಗಾಟದ ಲಾರಿ ಕಂಟೇನರ್ ಭಾರೀ ಸರಕಿನೊಂದಿಗೆ ಮೂಡುಬಿದ್ರೆಯ ಮೂಲಕ ಪೊಲೀಸರ ಕಣ್ತಪ್ಪಿಸಿ ಆಂಧ್ರಪ್ರದೇಶದತ್ತ ಸಾಗುತ್ತದೆ. ಇದೇ ರೀತಿಯ ಅಪಘಾತ ಇತ್ತೀಚೆಗೆ ಗುರುಪುರದಲ್ಲಿಯೂ ನಡೆದಿತ್ತು. ಮಣ್ಣು ಸಾಗಾಟದ ಲಾರಿಯಿಂದ ಅವಾಂತರ ಉಂಟಾಗಿತ್ತು. ತನ್ನ ಸಾಮರ್ಥ್ಯಕ್ಕಿಂತ ಹೆಚ್ಚು ಭಾರ ಒಯ್ಯುವುದರಿಂದ ಈ ರೀತಿಯ ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅಡುಗೆ ಎಣ್ಣೆ ಒಯ್ಯುತ್ತಿದ್ದ ಟೆಂಪೋಗೆ ಡಿಕ್ಕಿಯಾಗಿದ್ದರಿಂದ ಅಡುಗೆ ಎಣ್ಣೆಯ ಬ್ಯಾರಲ್, ಪ್ಯಾಕೆಟ್ ಬಿಚ್ಚಿ ಎಣ್ಣೆ ರಸ್ತೆಗೆ ಚೆಲ್ಲಿತ್ತು. ಹೀಗಾಗಿ ಸ್ಥಳದಲ್ಲಿ ಭೀಕರ ಅನ್ನುವಂತಹ ಸನ್ನಿವೇಶ ಸೃಷ್ಟಿಯಾಗಿತ್ತು. ಅಂಗಡಿಗೆ ಲಾರಿ ನುಗ್ಗುವಾಗ ಯಾರೂ ಇರದೇ ಇದ್ದುದರಿಂದ ಅನಾಹತ ತಪ್ಪಿದೆ.

Mangalore Yedapadavu accident, Several vehicles shops destroyed as truck brake cuts. At least three goods vehicles, a private bus, a car, two scooters, and three shops were damaged when a soil-laden truck ran amok in the busy Yedapadavu town on Mangaluru-Moodbidri-Karkala National Highway 169 on Friday, April 19.