Three tourists, who were swimming in the Malpe sea, were caught by the waves of the sea and the rescue team rescued the two. One has drowned in the water. The deceased has been identified as Girish (26), a resident of Belur in Hassan district. Santosh (24) and Harish (30) were rescued and are being treated at Manipal Hospital.

">

ಮಲ್ಪೆ ಸಮುದ್ರದಲ್ಲಿ ಈಜಾಟ ; ಅಲೆಗಳಲ್ಲಿ ಕೊಚ್ಚಿ ಹೋದ ಮೂವರು ಪ್ರವಾಸಿಗರು, ಹಾಸನದ ಒಬ್ಬ ಮೃತ್ಯು 

18-04-24 11:05 pm       Udupi Correspondent   ಕರಾವಳಿ

ಮಲ್ಪೆ ಸಮುದ್ರದಲ್ಲಿ ಈಜಾಡುತ್ತಿದ್ದ ಮೂವರು ಪ್ರವಾಸಿಗರು ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿದ್ದು, ರಕ್ಷಣಾ ತಂಡದವರು ಇಬ್ಬರನ್ನು ರಕ್ಷಿಸಿದ್ದಾರೆ. ಒಬ್ಬಾತ ನೀರು ಪಾಲಾಗಿದ್ದಾನೆ. 

ಉಡುಪಿ, ಎ.18: ಮಲ್ಪೆ ಸಮುದ್ರದಲ್ಲಿ ಈಜಾಡುತ್ತಿದ್ದ ಮೂವರು ಪ್ರವಾಸಿಗರು ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿದ್ದು, ರಕ್ಷಣಾ ತಂಡದವರು ಇಬ್ಬರನ್ನು ರಕ್ಷಿಸಿದ್ದಾರೆ. ಒಬ್ಬಾತ ನೀರು ಪಾಲಾಗಿದ್ದಾನೆ. 

ಮೃತರನ್ನು ಹಾಸನ ಜಿಲ್ಲೆಯ ಬೇಲೂರು ನಿವಾಸಿ ಗಿರೀಶ್ (26) ಎಂದು ಗುರುತಿಸಲಾಗಿದೆ. ಸಂತೋಷ್ (24) ಹಾಗೂ ಹರೀಶ್ (30) ಎಂಬವರನ್ನು ರಕ್ಷಿಸಲಾಗಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. 

ಹಾಸನ ಜಿಲ್ಲೆಯ ಬೇಲೂರಿನಿಂದ 20 ಮಂದಿಯ ತಂಡ ಪ್ರವಾಸಕ್ಕೆ ಬಂದಿದ್ದು, ಗುರುವಾರ ಸಂಜೆ ಮಲ್ಪೆ ಬೀಚ್‌ಗೆ ಆಗಮಿಸಿದ್ದರು. ಇವರು ಶೃಂಗೇರಿ, ಆಗುಂಬೆಗೆ ಭೇಟಿ ನೀಡಿ ಮಲ್ಪೆ ಬಂದಿದ್ದರು ಎನ್ನಲಾಗಿದೆ. ಮೂವರು ಅಲೆಗಳ ರಭಸಕ್ಕೆ ಕೊಚ್ಚಿ ಹೋಗಿದ್ದು ಬಳಿಕ ರಕ್ಷಣಾ ತಂಡದವರು ಇಬ್ಬರನ್ನು ಎಳೆದು ದಡಕ್ಕೆ ತಂದಿದ್ದಾರೆ. 

ಸ್ಥಳಕ್ಕೆ ಧಾವಿಸಿ ಬಂದ ಮುಳುಗು ತಜ್ಞ ಈಶ್ವರ ಮಲ್ಪೆ ಮತ್ತವರ ತಂಡದವರು ಮೂವರನ್ನೂ ರಕ್ಷಿಸಿ ದಡಕ್ಕೆ ತಂದಿದ್ದರು. ಮೂವರ ಪೈಕಿ ಗಂಭೀರ ಸ್ಥಿತಿಯಲ್ಲಿದ್ದ ಗಿರೀಶ್ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.