ಬ್ರೇಕಿಂಗ್ ನ್ಯೂಸ್
01-12-20 04:24 pm Mangalore Correspondent ಕರಾವಳಿ
ಮಂಗಳೂರು, ಡಿ.1: ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡಬೇಕೆಂಬ ವಿಚಾರ ಸಾಮಾಜಿಕ ಹೋರಾಟದ ರೂಪ ಪಡೆದಿದೆ. ಮಂಗಳೂರಿನ ಬಿಲ್ಲವ್ ಬ್ರಿಗೇಡ್ ಈಗ ಹೋರಾಟ ಕೈಗೆತ್ತಿಕೊಂಡಿದ್ದು, ಮೊದಲ ಹಂತವಾಗಿ ಬೈಕ್ ರ್ಯಾಲಿ ಆಯೋಜಿಸಿದೆ. ಕೋಟಿ ಚೆನ್ನಯ ಸಂಚಲನ ಸಮಿತಿಯ ಸಹಯೋಗದಲ್ಲಿ ಡಿ.7ರಂದು ಬೈಕ್ ರ್ಯಾಲಿ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಸಂಚಾಲಕ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸತ್ಯಜಿತ್, ಅಂದು ಬೆಳಗ್ಗೆ ಕುದ್ರೋಳಿ ಕ್ಷೇತ್ರದಲ್ಲಿ ಬೈಕ್ ರ್ಯಾಲಿ ಆರಂಭಗೊಳ್ಳಲಿದ್ದು, ಕೆಂಜಾರಿನ ವಿಮಾನ ನಿಲ್ದಾಣದ ವರೆಗೆ ಸಾಗಲಿದೆ. 500ಕ್ಕೂ ಹೆಚ್ಚು ಬೈಕ್ ಗಳು ಪಾಲ್ಗೊಳ್ಳಲಿದ್ದು, ಹೆಲ್ಮಟ್ ಮತ್ತು ಮಾಸ್ಕ್ ಕಡ್ಡಾಯವಿರುತ್ತದೆ ಎಂದರು. 2019ರ ಜನವರಿಯಲ್ಲಿ ಮಳವೂರು ಗ್ರಾಪಂನಲ್ಲಿ ಈ ಬಗ್ಗೆ ನಿರ್ಣಯವಾಗಿ ಜಿಲ್ಲಾ ಪಂಚಾಯತ್ ನಿಂದ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಲಾಗಿತ್ತು.
ಆದರೆ, ರಾಜ್ಯ ಸರಕಾರ ಈ ಪ್ರಸ್ತಾಪವನ್ನು ಯಾವ ಕಾರಣಕ್ಕೆ ಹಿಂದಕ್ಕೆ ಕಳಿಸಿದೆ ಎನ್ನುವುದು ಗೊತ್ತಿಲ್ಲ. ರಾಜ್ಯ ಸರಕಾರದಲ್ಲಿ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡುವ ಬಗ್ಗೆ ಈ ಭಾಗದ ಶಾಸಕರು ಒಕ್ಕೊರಲ ಬೇಡಿಕೆ ಮುಂದಿಡುವಂತೆ ಒತ್ತಾಯ ಮಾಡುತ್ತೇವೆ.
ಇದಕ್ಕಾಗಿ ಕಂಕನಾಡಿ ಗರೋಡಿ ದೇವಸ್ಥಾನದ ಚಿತ್ತರಂಜನ್ ಮತ್ತು ಬಂಟರ ಸಂಘದ ಅಜಿತ್ ಕುಮಾರ್ ರೈ ನೇತೃತ್ವದಲ್ಲಿ ಕೋಟಿ ಚೆನ್ನಯ ಸಂಚಲನ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಈ ನಡುವೆ, ಕೋಟಿ ಚೆನ್ನಯ ಹೆಸರಿಡುವ ಪ್ರಸ್ತಾಪ ಒಂದು ಜಾತಿಗೆ ಸೀಮಿತ ಎನ್ನುವ ಟೀಕೆ ಬಂತು. ಆದರೆ, ಕೋಟಿ ಚೆನ್ನಯ ಯಾವುದೇ ಸಮುದಾಯ, ಜಾತಿಗೆ ಸೀಮಿತರಲ್ಲ. ಸತ್ಯಕ್ಕಾಗಿ ಹೋರಾಡಿದ ವೀರ ಪುರುಷರು. ಕೋಟಿ ಚೆನ್ನಯರನ್ನು ಆರಾಧ್ಯರು ಎಂದು ತುಳುನಾಡಿನ ಎಲ್ಲರೂ ಪರಿಗಣಿಸುತ್ತಾರೆ.
ಈಗಾಗ್ಲೇ ಅಬ್ಬಕ್ಕ ಸೇರಿದಂತೆ ಹಲವು ಹೆಸರುಗಳು ಪ್ರಸ್ತಾಪ ಆಗಿದ್ದು ಎಲ್ಲ ಸಮಿತಿಗಳ ಒಪ್ಪಿಗೆಯನ್ನು ಪಡೆದು ಮುಂದುವರಿಯಲಾಗುವುದು. ಈಗಾಗ್ಲೇ ಕೋಟಿ ಚೆನ್ನಯ ಹೆಸರಿನ ಬಗ್ಗೆ ಕಾನೂನು ಪ್ರಕ್ರಿಯೆಗಳಾಗಿದ್ದು, ಕೆಳಸ್ತರದಿಂದ ರಾಜ್ಯ ಸರಕಾರಕ್ಕೆ ತಲುಪಿದೆ. ಅಲ್ಲಿಂದ ಕೇಂದ್ರಕ್ಕೆ ಶಿಫಾರಸು ತಲುಪಿಸುವ ಪ್ರಕ್ರಿಯೆ ಆಗಬೇಕಷ್ಟೆ ಎಂದು ಸತ್ಯಜಿತ್ ಹೇಳಿದರು.
ಸಂಚಲನ ಸಮಿತಿಯ ಸೂರಜ್ ಕಲ್ಯಾ, ಬಿಲ್ಲವ ಬ್ರಿಗೇಡ್ ಅಧ್ಯಕ್ಷ ಜೀವನ್ ಪೂಜಾರಿ, ಸ್ಥಾಪಕ ಅಧ್ಯಕ್ಷ ಅವಿನಾಶ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಸನಿಲ್, ಸಂಘಟನಾ ಕಾರ್ಯದರ್ಶಿ ಅಶ್ವಥ್ ಉಪ್ಪಳ ಉಪಸ್ಥಿತರಿದ್ದರು.
Video:
Billava Brigade Mangaluru will hold a bike rally on December 7 from Kudroli temple to Bajpe airport demanding to rename Mangaluru International Airport after Tulunadu bravehearts Koti Chennaya,
08-05-25 07:50 pm
Bangalore Correspondent
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
08-05-25 04:57 pm
HK News Desk
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
Operation Sindoor: ಸೇನಾ ದಾಳಿಗೆ ‘ಆಪರೇಶನ್ ಸಿಂಧೂ...
07-05-25 10:28 pm
Gunfire at Border; ಗಡಿಯಲ್ಲಿ ಗುಂಡಿನ ಮೊರೆತ ; ಕಾ...
07-05-25 06:14 pm
08-05-25 04:52 pm
Mangalore Correspondent
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
Operation Sindhoor, MP Brijesh Chowta, Manga...
07-05-25 03:36 pm
Hindu Maha Sabha, Mangalore, Rajesh Pavitran:...
07-05-25 02:36 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm