ಬ್ರೇಕಿಂಗ್ ನ್ಯೂಸ್
14-04-24 01:20 pm Mangaluru Correspondent ಕರಾವಳಿ
ಮಂಗಳೂರು, ಎ.14: ಮಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ ಗೆ ಭರದ ಸಿದ್ದತೆ ನಡೆದಿದೆ. ಕಡಲ ತಡಿಯ ಮಂಗಳೂರಿಗೆ ಭೇಟಿ ನರೇಂದ್ರ ಮೋದಿ ಹತ್ತನೇ ಬಾರಿ ಭೇಟಿ ನೀಡಲಿದ್ದಾರೆ.
ನಗರದ ಲೇಡಿಹಿಲ್ ಬಳಿಯ ನಾರಾಯಣಗುರು ವೃತ್ತದಿಂದ ನವಭಾರತ್ ವೃತ್ತದ ವರೆಗೆ ಸುಮಾರು ಎರಡು ಕಿಮೀ ಉದ್ದಕ್ಕೆ ರೋಡ್ ಶೋ ನಡೆಯಲಿದೆ. ಇದಕ್ಕಾಗಿ ಭಾರೀ ಭದ್ರತೆ ಕೈಗೊಳ್ಳಲಾಗಿದ್ದು ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ರೋಡ್ ಶೋ ನಡೆಯುವ ರಸ್ತೆಯಲ್ಲಿ ಎಸ್ ಪಿ ಜಿ ಅಧಿಕಾರಿಗಳು ಭದ್ರತಾ ಉಸ್ತುವಾರಿ ವಹಿಸಿಕೊಂಡಿದ್ದು ಆಯಕಟ್ಟಿನ ಜಾಗಗಳಲ್ಲಿ ತಮ್ಮದೇ ಶಸ್ತ್ರಸಜ್ಜಿತ ಪಡೆಗಳನ್ನು ನಿಯೋಜಿಸಿದ್ದಾರೆ.






ಸಂಜೆ 7:45 ರಿಂದ ಮೊದಲ್ಗೊಂಡು ರಾತ್ರಿ 8:45 ರ ವರೆಗೆ ಒಂದು ಗಂಟೆ ಭರ್ಜರಿ ರೋಡ್ ಶೋ ನಡೆಯಲಿದೆ. ಭದ್ರತೆಗಾಗಿ 2000 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಐದು ಮಂದಿ ಎಸ್ಪಿ ದರ್ಜೆಯ ಅಧಿಕಾರಿಗಳು ಒಟ್ಟು ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ನಿನ್ನೆ ರಾತ್ರಿ ಮೋದಿ ಬಂದು ಹೋಗುವ ರೀತಿಯಲ್ಲೇ ಪೊಲೀಸ್ ಅಧಿಕಾರಿಗಳು ರಿಹರ್ಸಲ್ ಮಾಡಿದ್ದಾರೆ.
ರೋಡ್ ಶೋ ಸಂದರ್ಭದಲ್ಲಿ ಮೋದಿಯವರತ್ತ ಎಸೆಯಲು ಹತ್ತು ಕ್ವಿಂಟಾಲ್ ಹಳದಿ ಸೇವಂತಿ ಹೂವನ್ನು ಸಂಗ್ರಹಿಸಿದ್ದು ಅದರ ಎಸಲುಗಳನ್ನು ಪ್ರತ್ಯೇಕಿಸಿ ಎಸ್ ಪಿಜಿ ಪರಿಶೀಲನೆ ಬಳಿಕ ಸ್ಥಳಕ್ಕೆ ತರಲಾಗುವುದು. ರೋಡ್ ಶೋ ಸಾಗುವ ರಸ್ತೆಯ ಬಹುಮಹಡಿ ಕಟ್ಟಡಗಳ ಮೇಲೆ ಸ್ಕೈ ಸೆಂಟ್ರಿಗಳು ಹದ್ದಿನ ಕಣ್ಣು ಇರಿಸಿದ್ದಾರೆ. ಮೋದಿ ರೋಡ್ ಶೋ ನಡೆಸುವ ವಿಶೇಷ ಮಾದರಿಯ ವಾಹನವನ್ನು ಮಂಗಳೂರಿಗೆ ತರಲಾಗಿದ್ದು ಅದರಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ, ಉಡುಪಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಹಾಲಿ ಸಂಸದ ನಳಿನ್ ಕುಮಾರ್ ಪಾಲ್ಗೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಜಿಲ್ಲಾ ಬಿಜೆಪಿ ವತಿಯಿಂದ ದೆಹಲಿ ಎಸ್ ಪಿಜಿ ಮತ್ತು ಪಕ್ಷದ ಕೇಂದ್ರ ಸಮಿತಿಗೆ ಅಹವಾಲು ಸಲ್ಲಿಸಿದ್ದು ರೋಡ್ ಶೋ ವಾಹನದಲ್ಲಿ ಯಾರೆಲ್ಲ ಇರಬೇಕು ಎಂಬ ಬಗ್ಗೆ ಎಸ್ ಪಿಜಿಯವರೇ ಸೂಚನೆ ನೀಡಲಿದ್ದಾರೆ.
Modi roadshow in Mangalore, city turns saffron, police tights security all over. A tempo vehicle, similar to the one used during Modi's roadshow in Chennai, has been brought to Mangaluru. A letter requesting permission for candidates Capt Brijesh Chowta, Kota Srinivas Poojary, and MP Nalin Kumar Kateel to accompany PM Modi during the roadshow has been submitted to SPG.
05-02-26 10:37 am
Bangalore Correspondent
54 ಸಾವಿರಕ್ಕೂ ಹೆಚ್ಚು RTI ಅರ್ಜಿಗಳು ಬಾಕಿ ; ಮಾಹಿತ...
03-02-26 08:17 pm
ಸಿಜೆ ರಾಯ್ ಡೈರಿಯಲ್ಲಿತ್ತು ಒಂಬತ್ತು ಪುಟಗಳ ಡೆತ್ ನೋ...
03-02-26 05:34 pm
Kamalakar Bhat Guruji Affair: ಜ್ಯೋತಿಷಿ ಕಮಲಾಕರ...
03-02-26 05:03 pm
ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್...
03-02-26 11:53 am
04-02-26 03:42 pm
HK News Desk
ಕೊರಿಯನ್ ಆನ್ಲೈನ್ ಗೇಮ್ ಗೀಳು ; 9ನೇ ಮಹಡಿಯಿಂದ ಕೆಳ...
04-02-26 02:02 pm
ನೆಲದ ಕಾನೂನು ಗೌರವಿಸಿ ಉಳಿದುಕೊಳ್ಳಿ, ಇಲ್ಲಾಂದ್ರೆ ದ...
03-02-26 09:06 pm
ಬಾಲಕನ ಮೊಮೋಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್...
03-02-26 11:55 am
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
04-02-26 10:15 pm
Mangalore Correspondent
MLA D. Vedavyasa Kamath: ಕಟ್ಟಡ ಪರವಾನಗಿ ನೀಡುವಲ...
04-02-26 09:34 pm
Mangalore, Lonavala Accident: ಲೋನಾವಾಲ ಘಾಟಿಯಲ್...
04-02-26 06:59 pm
ಧರ್ಮಸ್ಥಳ 74 ಅಸಹಜ ಸಾವುಗಳ ಪ್ರಕರಣ ; ಎಸ್ಐಟಿ ತನಿಖಾ...
04-02-26 12:29 pm
ಕುಂಬಳೆ ಟೋಲ್ ಗೇಟ್ ರದ್ದು ; ವ್ಯಾಪಕ ಜನವಿರೋಧ ಹಿನ್ನ...
03-02-26 11:14 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm