ಬ್ರೇಕಿಂಗ್ ನ್ಯೂಸ್
29-11-20 01:26 pm Mangaluru Correspondant ಕರಾವಳಿ
ಮಂಗಳೂರು, ನ.29: ಗೋಡೆ ಬರಹದ ಮೂಲಕ ಕಿಡಿಗೇಡಿ ಕೃತ್ಯ ನಡೆಸಿದವರು ಸಮಾಜ ದ್ರೋಹಿಗಳು, ದೇಶದ್ರೋಹಿಗಳು. ಇವರನ್ನು ಹಿಡಿದು ಪಾಕಿಸ್ತಾನಕ್ಕೆ ಒಯ್ದು ಬಿಟ್ಟು ಬರಬೇಕು ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಯು.ಟಿ ಖಾದರ್ ಕಿಡಿಕಾರಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಖಾದರ್, ಗೋಡೆ ಬರಹ ಬರೆದಿರುವ ಕೃತ್ಯವನ್ನ ತೀವ್ರವಾಗಿ ಖಂಡಿಸುತ್ತೇನೆ. ಇದನ್ನ ಯಾರೇ ಮಾಡಿರಲಿ, ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಕೂಡಲೇ ಈ ದೇಶದ್ರೋಹಿಗಳನ್ನು ಬಂಧಿಸಬೇಕು. ಇವರನ್ನು ಪತ್ತೆ ಮಾಡುವುದು ರಾಜ್ಯದ ಬಿಜೆಪಿ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಜವಾಬ್ದಾರಿ. ಇವರ ಹಿಂದೆ ಯಾರಿದ್ದಾರೆ, ಅವರನ್ನೂ ಬಂಧಿಸಬೇಕು. ಅವರನ್ನು ಪತ್ತೆ ಹಚ್ಚಿ ಷಡ್ಯಂತ್ರ ಬಯಲು ಮಾಡಬೇಕಿದೆ ಎಂದು ಹೇಳಿದರು.
ಪದೇ ಪದೇ ಇಂಥ ಕೃತ್ಯ ಮರುಕಳಿಸುತ್ತಿರುವುದು ಗುಪ್ತಚರ ಇಲಾಖೆಯ ವೈಫಲ್ಯವನ್ನು ತೋರಿಸುತ್ತದೆ. ಇವರು ಏನು ಮಾಡ್ತಿದ್ದಾರೆ..? ಮತ್ತೆ ಮತ್ತೆ ಹೀಗ್ಯಾಕೆ ಆಗ್ತಿದೆ ಎನ್ನುವುದನ್ನು ಈ ಜಿಲ್ಲೆಯ ಸಂಸದರು, ಶಾಸಕರು ಸ್ಪಷ್ಟ ಪಡಿಸಬೇಕು. ಈ ಕೃತ್ಯ ಮಾಡಿದವರಿಗೆ ನಮ್ಮ ದೇಶದ ಮಣ್ಣಿನಲ್ಲಿ ಇರಲು ಯಾವುದೇ ಹಕ್ಕಿಲ್ಲ. ಇವರನ್ನು ಹೊರ ದೇಶಕ್ಕೆ ಗಡೀಪಾರು ಮಾಡಬೇಕು ಎಂದ ಖಾದರ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇವತ್ತು ಕಾನೂನಿಗೆ ಹೆದರದ ಪರಿಸ್ಥಿತಿ ಇದೆ. ದಿನವೂ ಅಪರಾಧ ಕೃತ್ಯಗಳು ನಡೆಯುತ್ತಿವೆ. ಗೋಡೆ ಬರಹ, ಇನ್ನಿತರ ವಿಚಾರಗಳು ಕಾಂಗ್ರೆಸ್ ಸರ್ಕಾರ ಇದ್ದಾಗ ಇರಲಿಲ್ಲ. ಆದ್ರೆ ಬಿಜೆಪಿ ಸರಕಾರ ಬಂದಾಗ ಸಮಾಜದ್ರೋಹಿ ಶಕ್ತಿಗಳಿಗೆ ಧೈರ್ಯ ಬರುತ್ತೆ ಎನ್ನುವುದನ್ನು ಈಗಿನ ಸ್ಥಿತಿ ಸೂಚಿಸುತ್ತಿದೆ. ಈಗಿನ ಸ್ಥಿತಿಗೆ ಈ ಜಿಲ್ಲೆಯ ಎಂಪಿ, ಎಂಎಲ್ ಎಗಳು ಉತ್ತರ ಕೊಡಬೇಕು. ಘಟನೆ ಬಗ್ಗೆ ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ. ಒಂದು ವಾರದ ಒಳಗೆ ಈ ಆರೋಪಿಗಳ ಪತ್ತೆಯಾಗಬೇಕು. 15 ದಿನದ ಒಳಗೆ ಬಂಧನ ಆಗದೇ ಇದ್ರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡ್ತೇವೆ. ಅವರು ಮಾನಸಿಕ ಅಸ್ವಸ್ಥ ಆಗಿರಲಿ, ಯಾರೇ ಆಗಿರಲಿ ಅರೆಸ್ಟ್ ಮಾಡಿ ಎಂದು ಆಗ್ರಹಿಸಿದರು.
ಪೊಲೀಸ್ ಇಲಾಖೆ, ಗುಪ್ತಚರ ವೈಫಲ್ಯ ಅಂದರೆ ಅದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಜವಾಬ್ದಾರಿ ಅಲ್ವಾ ? ರಾಜ್ಯ ಸರ್ಕಾರ ಇವತ್ತು ಕೋಮಾ ಸ್ಥಿತಿಯಲ್ಲಿ ಇದೆ. ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ. ಇದರಿಂದಾಗಿ ಪದೇ ಪದೇ ಸಂಘರ್ಷದ ಗೋಡೆ ಬರಹಗಳು ಕಾಣಿಸಿಕೊಳ್ಳುತ್ತಿವೆ ಎಂದು ಹೇಳಿದರು.
Video:
MLA and former minister U T Khader on Sunday November 29 strongly condemned the provocative graffitis that appeared on walls in two different parts of the city this week. The culprits should be identified within a week. If the culprits are not arrested within 15 days, then we will start intense protest throughout the district," he warned.
08-05-25 07:50 pm
Bangalore Correspondent
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
08-05-25 04:57 pm
HK News Desk
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
Operation Sindoor: ಸೇನಾ ದಾಳಿಗೆ ‘ಆಪರೇಶನ್ ಸಿಂಧೂ...
07-05-25 10:28 pm
Gunfire at Border; ಗಡಿಯಲ್ಲಿ ಗುಂಡಿನ ಮೊರೆತ ; ಕಾ...
07-05-25 06:14 pm
08-05-25 04:52 pm
Mangalore Correspondent
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
Operation Sindhoor, MP Brijesh Chowta, Manga...
07-05-25 03:36 pm
Hindu Maha Sabha, Mangalore, Rajesh Pavitran:...
07-05-25 02:36 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm