ಬ್ರೇಕಿಂಗ್ ನ್ಯೂಸ್
31-03-24 04:52 pm Mangaluru Correspondent ಕರಾವಳಿ
ಮಂಗಳೂರು, ಮಾ.31: ಸೌದಿ ಅರೇಬಿಯಾದಲ್ಲಿ ಉದ್ಯಮ ನಡೆಸುತ್ತಿದ್ದ ಮಂಗಳೂರಿನ ನಿವಾಸಿಯೊಬ್ಬರು ಜೈಲು ಸೇರಿದ್ದಾರೆ. ಮಂಗಳೂರಿನ ಜಪ್ಪಿನಮೊಗರಿನಲ್ಲಿ ನಿವಾಸ ಹೊಂದಿರುವ ಇಸ್ಮಾಯಿಲ್ ದಂಡರಕೋಲಿ(65) ಎಂಬವರು ಕಳೆದ 9 ತಿಂಗಳಿನಿಂದ ಸೌದಿಯಲ್ಲಿ ಜೈಲು ಸೇರಿದ್ದು, ಅವರನ್ನು ಜೈಲಿನಿಂದ ಪಾರು ಮಾಡುವಂತೆ ಕುಟುಂಬಸ್ಥರು ವಿದೇಶಾಂಗ ಇಲಾಖೆಗೆ ಪತ್ರ ಬರೆದಿದ್ದಾರೆ.
ಇಸ್ಮಾಯಿಲ್ ಅವರು ಕಳೆದ 27 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಇದ್ದಾರೆ. ಹತ್ತು ವರ್ಷಗಳಿಂದ ರಿಯಾದ್ ನಲ್ಲಿ ಲಾಂಡ್ರಿ ಶಾಪ್ ನಡೆಸುತ್ತಿದ್ದರು. ಲಾಂಡ್ರಿ ಉದ್ಯಮದಲ್ಲಿ ನಷ್ಟಕ್ಕೊಳಗಾಗಿದ್ದ ಇಸ್ಮಾಯಿಲ್ ಅವರು ಕೇರಳದ ಇಬ್ಬರು ಮತ್ತು ಈಜಿಪ್ಟ್ ದೇಶದ ಒಬ್ಬರಲ್ಲಿ ಹಣವನ್ನು ಸಾಲ ಪಡೆದಿದ್ದರು. ಇದರಿಂದಾಗಿ ಲಾಂಡ್ರಿ ಶಾಪ್ ನಡೆಸುವುದಕ್ಕಾಗದೇ ಅದನ್ನು ಕಳಕೊಂಡಿದ್ದರು. ಅದರ ಮಾಲೀಕರು ಲಾಂಡ್ರಿ ಶಾಪ್ ಅನ್ನು ಬೇರೆಯವರಿಗೆ ನೀಡಿದ್ದರು.

ಇದೇ ವೇಳೆ, ಈಜಿಪ್ಟ್ ದೇಶದ ಪ್ರಜೆ ತನ್ನ ಹಣ ಪಡೆದು ವಂಚಿಸಿದ್ದಾನೆಂದು ಇಸ್ಮಾಯಿಲ್ ವಿರುದ್ಧ ದೂರು ನೀಡಿದ್ದರು. ಇದರಿಂದ ವಂಚನೆ ಪ್ರಕರಣದಲ್ಲಿ ಸೌದಿಯ ಕಾನೂನಿನಂತೆ ಇಸ್ಮಾಯಿಲ್ ಅವರನ್ನು ಪೊಲೀಸರು ಬಂಧಿಸಿದ್ದು, ಜೈಲಿಗೆ ಹಾಕಿದ್ದಾರೆ. ಆದರೆ 65 ವರ್ಷದ ಇಸ್ಮಾಯಿಲ್ ತೀವ್ರ ಮಧುಮೇಹ ಮತ್ತು ಬಿಪಿಯಿಂದ ಬಳಲುತ್ತಿದ್ದು, ಜೈಲಿನಲ್ಲಿ ತೊಂದರೆಗೆ ಸಿಲುಕಿದ್ದಾರೆ. ಹೀಗಾಗಿ ಇಸ್ಮಾಯಿಲ್ ಅವರ ಪುತ್ರಿ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಪತ್ರ ಬರೆದಿದ್ದು, ನೆರವು ಯಾಚಿಸಿದ್ದಾರೆ.
ಈ ಬಗ್ಗೆ ಇಸ್ಮಾಯಿಲ್ ಅವರ ಭಾವ, ಉಳ್ಳಾಲದ ಹಸನ್ ಮೊಹಮ್ಮದ್ ಅವರನ್ನು ಹೆಡ್ ಲೈನ್ ಕರ್ನಾಟಕ ಸಂಪರ್ಕಿಸಿದಾಗ, ಎಂಬೆಸ್ಸಿಯಿಂದ ಮರುದಿನವೇ ಫೋನ್ ಕರೆ ಬಂದಿದೆ. ಜೈಲಿನಿಂದ ಬಿಡುಗಡೆಗೆ ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ನಾವು ಸೌದಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿರುವ ಮಂದಿಗೂ ಸಹಾಯ ಕೇಳಿದ್ದೇವೆ. ಇಸ್ಮಾಯಿಲ್ ದೊಡ್ಡ ತಪ್ಪು ಮಾಡಿಲ್ಲ. ಈಜಿಪ್ಟ್ ವ್ಯಕ್ತಿಯ ಬಳಿ 15 ಸಾವಿರ ರಿಯಾಲ್ ಪಡೆದಿದ್ದರು. ಪ್ರತಿಯಾಗಿ 6 ಸಾವಿರ ರಿಯಾಲ್ ಹಿಂತಿರುಗಿಸಿದ್ದು, ಕೇವಲ 9 ಸಾವಿರ ಅಷ್ಟೇ ಬಾಕಿ ಇತ್ತು. ಆದರೆ, ಸೌದಿಯಲ್ಲಿ ಬಡ್ಡಿ ನಿಷೇಧ ಇದ್ದರೂ ಬಡ್ಡಿ ಮೊತ್ತ ಸೇರಿಸಿ 38 ಸಾವಿರ ರಿಯಾಲ್ ಬಾಕಿಯೆಂದು ದೂರು ನೀಡಿದ್ದಾರೆ. ಆ ಹಣವನ್ನು ಕೋರ್ಟಿಗೆ ಕಟ್ಟಿದರೆ ಬಿಡುಗಡೆ ಆಗಬಹುದು. ನಮ್ಮವರು ಯಾರೂ ಸೌದಿಯಲ್ಲಿ ಇಲ್ಲ. ಇದರಿಂದಾಗಿ ತೊಂದರೆಯಾಗಿದೆ ಎಂದು ಹೇಳಿದ್ದಾರೆ. ಈಗ ಆರೋಗ್ಯದಲ್ಲಿ ಏರುಪೇರಾಗಿದ್ದು ಇಸ್ಮಾಯಿಲ್ ಅವರೇ ಫೋನ್ ಕರೆ ಮಾಡಿದ್ದರು ಎಂದವರು ತಿಳಿಸಿದ್ದಾರೆ.
Mangalore 65-year-old Dandakere Ismail was arrested in Saudi Arabia over a financial dispute 10 months ago, and his health has been badly affected due to diabetes. His daughter, Mangalore Shainaz, writes a letter to External Affairs Minister Jaishankar, seeking help for his release.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm