ಬ್ರೇಕಿಂಗ್ ನ್ಯೂಸ್
28-03-24 07:12 pm Mangalore Correspondent ಕರಾವಳಿ
ಬಂಟ್ವಾಳ, ಮಾ.28: ಸರಕಾರಿ ಉದ್ಯೋಗ ತೆಗೆಸಿ ಕೊಡುವುದಾಗಿ ಹೇಳಿ ಯುವಕನೊರ್ವನಿಗೆ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ ಆರೋಪದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡನ ವಿರುದ್ಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ನಿವಾಸಿ ಕಾರ್ತಿಕ್ ಎಂಬವರು ವಾಮದಪದವು ನಿವಾಸಿ, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಪದ್ಮನಾಭ ಸಾಮಂತ್ ಎಂಬವರು ಲಕ್ಷಾಂತರ ರೂ. ವಂಚನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಕುಕ್ಕಿಪಾಡಿ ನಿವಾಸಿ ಕಾರ್ತಿಕ್ ಬಡ ಕುಟುಂಬದ ಯುವಕನಾಗಿದ್ದು, ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದ. ಸರಕಾರಿ ಉದ್ಯೋಗದ ಕನಸು ಹೊಂದಿದ್ದ ಈತನಿಗೆ ಪರಿಚಯದ ಪದ್ಮನಾಭ ಸಾಮಂತ ಸರಕಾರಿ ಉದ್ಯೋಗ ನೀಡುವ ಭರವಸೆ ನೀಡಿದ್ದು ಬೆಂಗಳೂರಿನ ಕಾವೇರಿ ಭವನದಲ್ಲಿರುವ ನೀರಾವರಿ ನಿಗಮದಲ್ಲಿ ಗುಮಾಸ್ತ ಉದ್ಯೋಗ ತೆಗೆಸಿಕೊಡುವುದಾಗಿ ಹೇಳಿದ್ದ.
ಸರಕಾರಿ ಉದ್ಯೋಗ ತೆಗೆಸಿಕೊಡಲು 2 ಲಕ್ಷ ಹಣ ನೀಡುವಂತೆ ತಿಳಿಸಿದ್ದಲ್ಲದೆ, ನಂಬಿಕೆಯನ್ನು ಮೂಡಿಸಲು ನೀರಾವರಿ ನಿಗಮದ ಹೆಸರಿನಲ್ಲಿ ಛಾಪ ಕಾಗದವನ್ನು ತೋರಿಸಿದ್ದ. ಉದ್ಯೋಗ ಸಿಕ್ಕಿದ ಮೇಲೆ ತಂದೆ, ತಾಯಿಗೆ ಇ.ಎಸ್.ಐ ಸೌಲಭ್ಯಕ್ಕಾಗಿ ಇಬ್ಬರ ಬ್ಯಾಂಕ್ ಪಾಸ್ ಪುಸ್ತಕ, ಜೆರಾಕ್ಸ್ ಪ್ರತಿ ಹಾಗೂ ಕಾರ್ತಿಕ್ ನ ಬ್ಯಾಂಕ್ ಜೆರಾಕ್ಸ್ ಪಾಸ್ ಪುಸ್ತಕ ಪಡೆದಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಜೊತೆಗೆ ನಿಗಮದ ಎಂ.ಡಿ. ಅವರಿಗೆ ಹಣ ನೀಡುವ ನೆಪದಲ್ಲಿ ಹಂತ ಹಂತವಾಗಿ ರೂ. 1,51,750 ಲಕ್ಷ ರೂ. ಪಡೆದಿದ್ದ. ಆದರೆ ಕೆಲಸ ಸಿಗುವುದು ಕಂಡುಬರದ ಹಿನ್ನೆಲೆಯಲ್ಲಿ ವಿಚಾರಿಸಿದಾಗ ಇನ್ನೂ ಒಂದು ಲಕ್ಷ ಹಣವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದ.
ಇದರಿಂದ ಸಂಶಯಗೊಂಡ ಕಾರ್ತಿಕ್ ಬೆಂಗಳೂರಿನ ಕಾವೇರಿ ನಿಗಮದಲ್ಲಿರುವ ನೀರಾವರಿ ಇಲಾಖೆಯನ್ನು ವಿಚಾರಿಸಿದಾಗ ಅಲ್ಲಿ ಯಾವುದೇ ಉದ್ಯೋಗದ ಅವಕಾಶ ಇಲ್ಲದಿರುವುದು ಮತ್ತು ಈತನ ಅರ್ಜಿ ಹೋಗದಿರುವುದು ತಿಳಿದುಬಂತು. ವಂಚನೆ ವಿಚಾರ ತಿಳಿದು, ಸಾಮಾಜಿಕ ಜಾಲತಾಣದಲ್ಲಿ ಅನ್ಯಾಯವನ್ನು ಹೇಳಿಕೊಂಡಿದ್ದ. ಇದೀಗ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.
A youth was duped of lakhs of rupees on the pretext of getting him a government job. A complaint has been registered against the district Congress leader at Punjalakatte police station for allegedly duping him of money.
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 11:04 pm
Mangaluru Staffer
ಎಂಆರ್ ಪಿಎಲ್ ದುರಂತ ; ಮೃತ ರಾಜೇಶ್ ಡಿಸಿಲ್ವ ಕುಟುಂಬ...
17-10-26 07:34 pm
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
18-10-26 09:45 pm
HK News Staffer
Kokkada Fight, Mangalore: ಕೊಕ್ಕಡ ; ಹೂವಿನ ವ್ಯಾ...
18-10-26 09:32 pm
Fr Cyprian Pinto Arrest, POCSO: ಬಾಲಕರಿಗೆ ಲೈಂಗ...
18-10-26 10:36 am
ಎಂಆರ್ ಪಿಎಲ್ ಘಟಕದಲ್ಲಿ ಸ್ಫೋಟ ಘಟನೆ ; ತೀವ್ರ ಗಾಯಗೊ...
17-10-26 11:09 am
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm