ಬ್ರೇಕಿಂಗ್ ನ್ಯೂಸ್
19-03-24 02:13 pm Mangalore Correspondent ಕರಾವಳಿ
ಮಂಗಳೂರು, ಮಾ.19: ಕೊಡಗು- ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಕೂಜುಮಲೆ ಎಸ್ಟೇಟ್ ಪರಿಸರಕ್ಕೆ ಬಂದಿದ್ದವರು ನಕ್ಸಲರು ಎಂಬುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಅರಣ್ಯ ಇಲಾಖೆ ಸಿಬಂದಿಯ ಸೋಗಿನಲ್ಲಿ ಬಂದಿದ್ದ ನಾಲ್ವರಿದ್ದ ತಂಡ ಸ್ಥಳೀಯ ದಿನಸಿ ಅಂಗಡಿಯಿಂದ 3500 ರೂಪಾಯಿ ಮೌಲ್ಯದ ಸಾಮಗ್ರಿಯನ್ನು ಖರೀದಿಸಿ ತೆರಳಿದ್ದಾರೆ.
ಮಡಿಕೇರಿ ತಾಲೂಕು ವ್ಯಾಪ್ತಿಯ ಕೂಜುಮಲೆ ಎಸ್ಟೇಟ್ ಬಳಿಯ ರಾಮಲಿಂಗ ಎಂಬವರ ಅಂಗಡಿಗೆ ಬಂದಿದ್ದ ಇಬ್ಬರು ಮಹಿಳೆಯರು, ಇಬ್ಬರು ಪುರುಷರಿದ್ದ ತಂಡವು 25 ಕೇಜಿ ಅಕ್ಕಿ, ಬಟಾಣಿ, ಸಕ್ಕರೆ, ಕಡಲೆ ಬೇಳೆ, ಸಜ್ಜಿಗೆ, ಬೇಕರಿ ತಿಂಡಿ ಮತ್ತಿತರ ದಿನಸಿ ಸಾಮಗ್ರಿಗಳನ್ನು ಖರೀದಿಸಿ, 3500 ರೂ. ಪಾವತಿಸಿ ಅಲ್ಲಿಂದ ತೆರಳಿದ್ದರು. ಅರಣ್ಯ ಇಲಾಖೆ ಸಿಬಂದಿ ಎಂದು ತಮ್ಮನ್ನು ಪರಿಚಯಿಸಿಕೊಂಡಿದ್ದ ಅವರು, ಇಲಾಖೆ ಸಿಬಂದಿ ರೀತಿ ಸಮವಸ್ತ್ರ ಧರಿಸಿದ್ದರು. ಕೈಯಲ್ಲಿ ಕೋವಿಯನ್ನೂ ಹಿಡಿದುಕೊಂಡಿದ್ದರು. ಅಂಗಡಿಗೆ ಬಂದವರು, ಇನ್ನೂ ನಾಲ್ವರು ಫಾರೆಸ್ಟ್ ರೂಮಲ್ಲಿದ್ದಾರೆ ಎಂದು ಹೇಳಿ ದಿನಸಿ ಸಾಮಗ್ರಿ ಒಯ್ದಿದ್ದರು.
ಶನಿವಾರ ಸಂಜೆ ಘಟನೆ ನಡೆದಿದ್ದರೂ, ಅಂಗಡಿ ಮಾಲೀಕ ಅರಣ್ಯ ಸಿಬಂದಿ ಎಂದೇ ನಂಬಿಕೊಂಡಿದ್ದರು. ಅರಣ್ಯ ಇಲಾಖೆ ಕಚೇರಿ ಅಲ್ಲಿಯೇ ಹತ್ತಿರ ಇದ್ದುದರಿಂದ ಸಾಮಾನ್ಯವಾಗಿ ಅಲ್ಲಿನ ಸಿಬಂದಿಯೂ ಅಂಗಡಿಗೆ ಬರುತ್ತಿದ್ದರು. ಭಾನುವಾರ ಸಂಜೆಯ ವೇಳೆ ಅರಣ್ಯ ಇಲಾಖೆ ಸಿಬಂದಿಯೊಬ್ಬರು ಅಂಗಡಿಗೆ ಬಂದಿದ್ದು, ಅವರಲ್ಲಿ ನಿನ್ನೆ ಸಂಜೆ ನಿಮ್ಮ ಸಿಬಂದಿ ಬಂದು ತುಂಬಾ ಸಾಮಗ್ರಿ ಒಯ್ದಿದ್ದಾರೆ ಎಂದು ಹೇಳಿದ್ದರು. ಆ ಸಂದರ್ಭದಲ್ಲಿ ನಮ್ಮ ಸಿಬಂದಿ ಯಾರೂ ಬರಲು ಸಾಧ್ಯವಿಲ್ಲ ಎಂದು ತಿಳಿಸಿದರಲ್ಲದೆ, ತಂಡದ ಬಗ್ಗೆ ಅನುಮಾನಪಟ್ಟು ಮೇಲಧಿಕಾರಿಗಳಿಗೆ ವಿಷಯ ತಿಳಿಸಿದ್ದರು.
ತನಿಖೆಯ ಸಂದರ್ಭದಲ್ಲಿ ಬಂದವರು ನಕ್ಸಲರು ಎಂದು ದೃಢಪಟ್ಟಿದ್ದು, ಕೂಡಲೇ ಪೊಲೀಸರು ಮತ್ತು ಕಾರ್ಕಳದ ಎಎನ್ಎಫ್ ತಂಡಕ್ಕೆ ಮಾಹಿತಿ ನೀಡಿದ್ದರು. ಕನ್ನಡದಲ್ಲಿದ್ದ ಮಾತನಾಡುತ್ತಿದ್ದ ಆ ನಾಲ್ವರ ತಂಡ, ಜೊತೆಗೆ ಮಲಯಾಳಿ, ಹಿಂದಿ ಭಾಷೆಯಲ್ಲೂ ಮಾತನಾಡುತ್ತಿದ್ದರು. ಅಂಗಡಿಗೆ ಬಂದಿದ್ದ ನಾಲ್ವರನ್ನು ಹೊರತುಪಡಿಸಿ ಉಳಿದ ನಾಲ್ವರನ್ನು ಯಾರೂ ಕಂಡದ್ದಿಲ್ಲ. ಅಷ್ಟೊಂದು ಸಾಮಗ್ರಿ ಹಿಡಿದುಕೊಂಡು ಕಾಡಿನ ಮಧ್ಯೆಯೇ ಪರಾರಿಯಾಗಿದ್ದಾರೆಯೇ ಎನ್ನುವುದೂ ಖಚಿತವಾಗಿಲ್ಲ. ಪೊಲೀಸರ ಸೂಚನೆಯಂತೆ ಕಾರ್ಕಳದ ನಕ್ಸಲ್ ನಿಗ್ರಹ ಪಡೆಯ 60 ಸಿಬಂದಿ ಆಗಮಿಸಿದ್ದು ಕೂಜುಮಲೆ ಎಸ್ಟೇಟ್ ಆಸುಪಾಸಿನಲ್ಲಿ ಕೂಂಬಿಂಗ್ ಆರಂಭಿಸಿದೆ. ಸ್ಥಳಕ್ಕೆ ಕೊಡಗು ಎಸ್ಪಿ ರಾಮರಾಜನ್, ಎಎನ್ಎಫ್ ಡಿವೈಎಸ್ಪಿ ರಾಘವೇಂದ್ರ, ಕೊಡಗು ಎಎಸ್ಪಿ ಸುಂದರಾಜನ್, ಮಡಿಕೇರಿ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಸುಬ್ರಹ್ಮಣ್ಯ ಎಸ್ಐ ಕಾರ್ತಿಕ್ ಕಾರ್ತಿಕ್ ಮತ್ತಿತರರಿದ್ದರು.
ಪೊಲೀಸರು ಮತ್ತು ಎಎನ್ಎಫ್ ಸಿಬಂದಿಯವರು ಅಂಗಡಿ ಮತ್ತು ಪರಿಸರದ ನಿವಾಸಿಗಳನ್ನು ಪ್ರಶ್ನೆ ಮಾಡಿದ್ದು, ನಕ್ಸಲರ ತಂಡದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಕೂಜುಮಲೆಗೆ ಆಗಮಿಸಿದ್ದು ವಿಕ್ರಂ ಗೌಡ ನೇತೃತ್ವದ ನಕ್ಸಲರ ತಂಡ ಇರಬಹುದು ಎಂದು ಶಂಕೆ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿದ್ದಾರೆ. ನಕ್ಸಲರ ತಂಡದಲ್ಲಿ ಜಿಷಾ ಮತ್ತು ಲತಾ ಮುಂಡುಗಾರು ಇದ್ದಿರುವುದು ಖಚಿತವಾಗಿದ್ದು, ಇಬ್ಬರು ಪುರುಷರು ಯಾರೆಂದು ಖಚಿತವಾಗಿಲ್ಲ. ಸಂತೋಷ್, ವಿಕ್ರಂ ಗೌಡ ಆಗಿರಬಹುದೆಂದು ಶಂಕೆ ಪಡಲಾಗಿದೆ.
Four suspected naxals visit Koojimale in Sullia Mangalore, ANF operation. The four have posed like forest officers and have purchased 25 kilos of rice and provision items. It has been confirmed that four individuals believed to be naxals visited Koojimale Estate near Subramanya, falling under the jurisdiction of the Madikeri police station, on the border of Kodagu and Dakshina Kannada districts on Saturday evening.
14-07-25 10:44 pm
Bangalore Correspondent
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm