ಬ್ರೇಕಿಂಗ್ ನ್ಯೂಸ್
17-02-24 12:30 pm Mangalore Correspondent ಕರಾವಳಿ
ಮಂಗಳೂರು, ಫೆ.18: ರಾಜಕೀಯದಲ್ಲಿ ಯಾವುದೂ ಶಾಶ್ವತ ಹಾಗೂ ಅಸಾಧ್ಯವಾದ್ದು ಇಲ್ಲ. ರಾಜಕಾರಣ ಸಾಧ್ಯತೆಗಳ ಕಲೆ, ಇಲ್ಲಿ ಈ ಬಾರಿ ಬದಲಾವಣೆಯ ವಿಶ್ವಾಸವಿದೆ. ಹೀಗಾಗಿ ಮಂಗಳೂರಿನಲ್ಲಿ ಈ ಬಾರಿ ಸಮಾವೇಶ ಮಾಡ್ತಾ ಇದೀವಿ. ಈ ಭಾಗದಲ್ಲಿ ನಾವು ಗೆಲ್ಲೋ ಸಾಧ್ಯತೆ ಹೆಚ್ಚಿದೆ, ಹಾಗಾಗಿ ಸಮಾವೇಶ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಂಗಳೂರಿನ ಅಡ್ಯಾರ್ ನಲ್ಲಿ ನಡೆಯುವ ಕಾಂಗ್ರೆಸ್ ಸಮಾವೇಶ ಮೈದಾನದ ಬಳಿ ಮಾಧ್ಯಮಕ್ಕೆ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಿ ನಿರುದ್ಯೋಗ ಇದೆ, ಇಲ್ಲಿನ ಜನ ಬೇರೆ ಕಡೆ ಉದ್ಯೋಗಕ್ಕೆ ಹೋಗ್ತಾ ಇದಾರೆ. ಸೌದಿ, ಬೆಂಗಳೂರು, ಮುಂಬೈ ಕಡೆ ಇಲ್ಲಿನವರು ಹೋಗ್ತಾ ಇದಾರೆ. ಇಲ್ಲಿ ಎಷ್ಟೇ ಶಿಕ್ಷಣ ಸಂಸ್ಥೆಗಳಿದ್ರೂ ಮಕ್ಕಳು ಡ್ರಾಪ್ ಔಟ್ ಆಗ್ತಿದಾರೆ. ಇದರ ಬಗ್ಗೆ ಆಲೋಚನೆ ಮಾಡಬೇಕಿದೆ. ಇಲ್ಲಿ ಧರ್ಮ ರಾಜಕೀಯ ಇದೆ, ಬಿಜೆಪಿ ಅಭಿವೃದ್ಧಿ ಬಗ್ಗೆ ಆಲೋಚನೆ ಮಾಡ್ತಾ ಇಲ್ಲ.
ಈ ಜಿಲ್ಲೆಯ ಬಗ್ಗೆ ನಾವು ಹೊಸ ಅಲೋಚನೆ ಮಾಡ್ತೀವಿ. ಉದ್ಯೋಗ ಸೃಷ್ಟಿಸ್ತೇವೆ, ಸಂಜೆ ಏಳು ಗಂಟೆ ಬಳಿಕ ಮಂಗಳೂರು ಡೆಡ್ ಸಿಟಿ ಆಗಿದೆ. ವ್ಯಾಪಾರ ವಹಿವಾಟು ನಡೆದು ಜನರಿಗೆ ಉದ್ಯೋಗ ಸಿಗಬೇಕು. ಇಲ್ಲಿನ ಬ್ಯಾಂಕ್ ಗಳು ಕೂಡ ಇಲ್ಲಿಂದ ಬೇರೆ ಕಡೆ ಹೋಗ್ತಾ ಇದೆ. ದೇವಸ್ಥಾನಗಳಲ್ಲಿ ಭಕ್ತಿಯಿಂದ ಇರ್ತಾರೆ, ಅದೇ ರೀತಿಯ ಭಕ್ತಿಯ ಭಾವನೆ ವ್ಯವಹಾರಗಳಲ್ಲೂ ಇರಬೇಕು ಎಂದು ಹೇಳಿದರು.
ಜೆರೋಸಾ ಶಾಲೆಯ ವಿವಾದ ಕುರಿತ ಪ್ರಶ್ನೆಗೆ, ಈ ವಿಚಾರದಲ್ಲಿ ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಯಾರೇ ರಾಜಕೀಯ ಮಾಡಿದ್ರೂ ಕಾನೂನು ಕೆಲಸ ಮಾಡಲಿದೆ. ಅವರು ಹೋರಾಟ ಮಾಡ್ತಾ ಇರಲಿ, ಕಾನೂನು ಕೆಲಸ ಮಾಡುತ್ತದೆ. ನಾನು ಪೊಲೀಸ್ ಕೆಲಸ ಮಾಡಲು ಆಗಲ್ಲ, ಏನು ಆಗಬೇಕೋ ಅದನ್ನು ಪೊಲೀಸರು ಮಾಡ್ತಾರೆ ಎಂದರು.
ಬಜೆಟಲ್ಲಿ ಕರಾವಳಿಗೆ ಅನ್ಯಾಯ ಆಗಿದೆ ಎಂಬ ಬಿಜೆಪಿ ಆರೋಪದ ಬಗ್ಗೆ, ನಮ್ಮ ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯ ಆದಾಗ ಬಿಜೆಪಿಯವರು ಮಾತನಾಡಿಲ್ಲ. ದ.ಕ ಜಿಲ್ಲೆಗೂ ಬಜೆಟಲ್ಲಿ ಕೊಟ್ಟಿದ್ದೇವೆ, ಮುಸ್ಲಿಮರಿಗೆ ಏನೂ ಕೊಡಲೇ ಬಾರದಾ? ಬಿಜೆಪಿ ಈ ವಿಚಾರದಲ್ಲಿ ರಾಜಕಾರಣ ಮಾಡ್ತಾ ಇದೆ, ಅದು ಮಾಡಲಿ ಎಂದರು.
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಕುಮಾರಸ್ವಾಮಿ ಸ್ಪರ್ಧಿಸುವ ಕುರಿತು ಕೇಳಿದ್ದಕ್ಕೆ, ನಾನು ದೇವೇಗೌಡ, ಕುಮಾರಸ್ವಾಮಿ ವಿರುದ್ಧ ಹೋರಾಟ ಮಾಡಿಕೊಂಡು ಬಂದವನು. ಅನಿತಾ ಕುಮಾರಸ್ವಾಮಿ ಹಿಂದೆ ನನ್ನ ಸಹೋದರನ ವಿರುದ್ಧ ನಿಂತರೂ ಗೆದ್ದಿದ್ದಾನೆ. ಬಿಜೆಪಿ-ಜೆಡಿಎಸ್ ಒಟ್ಟಾಗಿ ನನ್ನ ಸಹೋದರನ ವಿರುದ್ದ ನಿಂತಾಗಲೂ ಗೆದ್ದಿದ್ದಾನೆ. ಸುರೇಶ್ ದೆಹಲಿಯಲ್ಲಿ ಕೂರುವಂತಹ ಎಂಪಿ ಅಲ್ಲ, ಅವನು ಹಳ್ಳಿಯ ಎಂಪಿ. ಸುರೇಶ್ ಗೆ ಮತದಾರರ ಭಾವನೆ ಗೊತ್ತಿದೆ. ದೇವೇಗೌಡ, ಕುಮಾರಸ್ವಾಮಿ ನಮ್ಮಲ್ಲಿ ಎಂಪಿ ಆಗಿದ್ದರು. ಹಳೆಯ ಎಂಪಿಗಳು ಹಾಗೂ ಈ ಎಂಪಿಯ ವ್ಯತ್ಯಾಸವನ್ನು ಜನ ನೋಡಿದ್ದಾರೆ. ಪ್ರತೀ ಹಳ್ಳಿ, ರಸ್ತೆ, ಅಭಿವೃದ್ಧಿ, ಮನೆಗಳ ಅಭಿವೃದ್ಧಿ ಆಗಿದೆ. ಯಾರನ್ನೇ ನಿಲ್ಲಿಸಿದ್ರೂ ಮತದಾರ ಉತ್ತರ ಕೊಡ್ತಾನೆ, ಮತದಾರ ಪ್ರಜ್ಞಾವಂತ ಇದಾನೆ. ಕುಮಾರಸ್ವಾಮಿ ನಿಂತರೂ ನನಗೆ ಯಾವುದೇ ಬೇಜಾರಿಲ್ಲ. ಯಾರೇ ನಿಂತರೂ ನಾವು ಸ್ವಾಗತ ಮಾಡ್ತೇವೆ ಎಂದರು.
ದ.ಕ ಜಿಲ್ಲೆಯಲ್ಲಿ ಯಾರು ಅಭ್ಯರ್ಥಿ ಎಂಬ ಪ್ರಶ್ನೆಗೆ, ಮೂರು ನಾಲ್ಕು ಹೆಸರುಗಳನ್ನು ಶಾರ್ಟ್ ಲಿಸ್ಟ್ ಮಾಡಿದ್ದೇವೆ, ಸರ್ವೇ ಟೀಂ ಸರ್ವೇ ಬಳಿಕ ನೋಡೋಣ. ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ ಎಂದರು.
Mangalore has become a dead city, development in city quenched after BJP came to power slams Dk Shivakumar in Mangalore was come to Sahyadri to attend the Mega election program of Congress shayadri college in Adyar.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 05:22 pm
Mangalore Correspondent
Akanksha Suicide, Dharmasthala, Mangalore: ಏರ...
19-05-25 12:31 pm
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
19-05-25 03:35 pm
HK News Desk
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm