ಬ್ರೇಕಿಂಗ್ ನ್ಯೂಸ್
13-02-24 08:43 pm Mangalore Correspondent ಕರಾವಳಿ
ಮಂಗಳೂರು, ಫೆ.13: ಕೊಚಿಮುಲ್ ನೇಮಕಾತಿ ವಿಚಾರದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದ ಆರೋಪದಲ್ಲಿ ಇತ್ತೀಚೆಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ರಾಜು ಚಲ್ಲನ್ನವರ್ ಅವರನ್ನು ಗುರಿಯಾಗಿಸಿ ತನಿಖೆಗೊಳಪಡಿಸಿದ್ದರು. ತನಿಖೆಯಲ್ಲಿ ರಾಜು ಚಲ್ಲನ್ನವರ್ ಗಂಭೀರ ಲೋಪ ಎಸಗಿದ್ದಾರೆಂದು ಮೇಲ್ನೋಟಕ್ಕೆ ತಿಳಿದುಬಂದಿದೆ ಎನ್ನಲಾಗುತ್ತಿದ್ದು, ಇಡಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಇಡಿ ದಾಳಿಯಿಂದಾಗಿ ಮಂಗಳೂರು ವಿವಿಯ ಘನತೆಗೆ ಧಕ್ಕೆ ಆಗಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರು ವಿವಿಯ ಸಿಂಡಿಕೇಟ್ ಸದಸ್ಯರು ಫೆ.5ರಂದು ನಡೆದ ಸಭೆಯಲ್ಲಿ ತನಿಖೆಗೆ ಉಪ ಸಮಿತಿ ನೇಮಕ ಮಾಡಿದ್ದರು. ಸಮಿತಿ ತನಿಖೆ ನಡೆಸಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ವಿಶ್ವವಿದ್ಯಾನಿಲಯದ ಕುಲಪತಿಗೆ ನೀಡಿದ್ದು, ಫೆ.23ರಂದು ನಡೆಯುವ ಸಿಂಡಿಕೇಟ್ ಸಭೆಯಲ್ಲಿ ಚರ್ಚೆಗೆ ಬರಲಿದೆ. ವರದಿ ಆಧರಿಸಿ ಆರೋಪಕ್ಕೀಡಾದ ರಾಜು ಚಲ್ಲನ್ನವರ್ ಬಗ್ಗೆ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆಂದು ತಿಳಿದುಬಂದಿದೆ.
ಫೆ.23ರ ಸಭೆಯಲ್ಲಿ ಮುಂದಿನ ನಿರ್ಧಾರ
ಉಪ ಸಮಿತಿಯಲ್ಲಿ ಸದಸ್ಯರಾಗಿರುವ ಸಿಂಡಿಕೇಟ್ ಸದಸ್ಯ ಸವಾದ್ ಸುಳ್ಯ ಅವರನ್ನು ಕೇಳಿದಾಗ, ನಾವು ವರದಿ ಕೊಟ್ಟಿದ್ದೇವೆ. ವರದಿಯ ಅಂಶಗಳನ್ನು ಹೇಳುವುದಕ್ಕೆ ಸಾಧ್ಯವಿಲ್ಲ. ಮುಚ್ಚಿದ ಲಕೋಟೆಯಲ್ಲಿ ಸಮಿತಿ ಸದಸ್ಯರು ವರದಿ ತಯಾರಿಸಿ ನೀಡಿದ್ದೇವೆ. ವರದಿಯ ಬಗ್ಗೆ ಫೆ.23ರಂದು ನಡೆಯುವ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.
ಪರೀಕ್ಷಾಂಗ ಹುದ್ದೆಯಿಂದ ತೆರವು
ಈ ಬಗ್ಗೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಯರಾಜ ಅಮೀನ್ ಅವರಲ್ಲಿ ಕೇಳಿದಾಗ, ಇಡಿಯವರು ವಿಚಾರಣೆ ನಡೆಸಿ ಹೋಗಿದ್ದಾರೆ. ನಾವು ಇಲ್ಲಿನ ಬೆಳವಣಿಗೆ ಬಗ್ಗೆ ಸರಕಾರಕ್ಕೆ ಬರೆದಿದ್ದು ಮುಂದಿನ ಕ್ರಮದ ನಿರೀಕ್ಷೆಯಲ್ಲಿದ್ದೇವೆ. ಸರಕಾರದ ಕಡೆಯಿಂದ ಯಾವುದೇ ನಿರ್ದೇಶನ ಬಂದಿಲ್ಲ. ಪರೀಕ್ಷಾಂಗ ಕುಲಸಚಿವರನ್ನು ಸರಕಾರವೇ ನೇಮಕ ಮಾಡಿರುವುದರಿಂದ ಅವರೇ ಮುಂದಿನ ಕ್ರಮ ಕೈಗೊಳ್ಳಬೇಕಾಗಿದೆ. ಸದ್ಯಕ್ಕೆ ಅವರನ್ನು ಆ ಸ್ಥಾನದಿಂದ ತೆರವು ಮಾಡಿದ್ದು, ಬೇರೆ ಜವಾಬ್ದಾರಿಯಲ್ಲಿದ್ದಾರೆ. ಹಣಕಾಸು ಅಧಿಕಾರಿ ಸಂಗಪ್ಪ ಅವರಿಗೆ ಪರೀಕ್ಷಾಂಗ ಕುಲಸಚಿವ ಸ್ಥಾನದ ಜವಾಬ್ದಾರಿ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಖಾಸಗಿ ಪರೀಕ್ಷೆಯನ್ನೇ ನಡೆಸುವಂತಿಲ್ಲ
ಒಟ್ಟು ಬೆಳವಣಿಗೆ ಬಗ್ಗೆ ಈ ಹಿಂದಿನ ಸಿಂಡಿಕೇಟ್ ಸದಸ್ಯ ರಮೇಶ್ ಬಿ.ಕೆ. ಅವರನ್ನು ಪ್ರಶ್ನಿಸಿದಾಗ, ಇಡಿ ಅಧಿಕಾರಿಗಳು ಬಂದು ತನಿಖೆ ನಡೆಸುತ್ತಾರಂದ್ರೆ, ಗಂಭೀರ ಪ್ರಮಾದ ಆಗಿರಲೇಬೇಕು. ದೊಡ್ಡ ಮಟ್ಟದ ಹಣದ ವರ್ಗಾವಣೆ ಆಗಿರುವುದರಿಂದಲೇ ಇಡಿ ಅಧಿಕಾರಿಗಳು ವಿಚಾರಣೆಗೆ ಬಂದಿದ್ದಾರೆ. ಖಾಸಗಿಯಾಗಿ ಯಾವುದೇ ಪರೀಕ್ಷೆಯನ್ನು ಯುನಿವರ್ಸಿಟಿಯಲ್ಲಿ ನಡೆಸಬಾರದು ಎಂದು ನಾವು ಹಿಂದೆ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಮಾಡಿದ್ದೆವು. ಇವರು ಆರೇಳು ತಿಂಗಳಲ್ಲಿ ಐದಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಿದ್ದಾರೆ. ಇದೆಲ್ಲ ಮಂಗಳೂರು ವಿವಿಯ ಕುಲಪತಿಗೆ ತಿಳಿಯದೇ ನಡೆಯಲು ಸಾಧ್ಯವಿಲ್ಲ. ಇಡಿಯವರು ಕುಲಪತಿ ಮತ್ತು ಪರೀಕ್ಷಾಂಗ ಕುಲಸಚಿವರನ್ನು ತನಿಖೆ ನಡೆಸಿದ್ದಾರೆ. ಯಾರು ತಪ್ಪು ಮಾಡಿದ್ದಾರೆಂದು ಸದ್ಯದಲ್ಲೇ ತಿಳಿಯಲಿದೆ ಎಂದಿದ್ದಾರೆ.
ಘಟನೆ ಬಗ್ಗೆ ರಾಜ್ಯ ಸರಕಾರ ನಿರ್ಲಕ್ಷ್ಯ
ಪರೀಕ್ಷಾಂಗ ಕುಲಸಚಿವ ರಾಜು ಚಲ್ಲನ್ನವರ್ ಬಗ್ಗೆ ಗಂಭೀರ ಆರೋಪ ಕೇಳಿಬಂದಿದ್ದರೂ, ರಾಜ್ಯ ಸರಕಾರ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವಂತೆ ತೋರುತ್ತಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರದ ಹಾಲು ಒಕ್ಕೂಟಕ್ಕೆ (ಕೊಚಿಮುಲ್) 180 ಹುದ್ದೆಗಳಿಗೆ ನೇಮಕಾತಿ ನಡೆಸಲು ಮಂಗಳೂರು ವಿವಿಯ ಮೂಲಕ ಪರೀಕ್ಷೆ ನಡೆಸಲಾಗಿತ್ತು. ಸೆಪ್ಟಂಬರ್ ತಿಂಗಳಲ್ಲಿ ಪರೀಕ್ಷೆ ನಡೆಸಿದ್ದು, ಅದರ ಪ್ರಶ್ನೆಪತ್ರಿಕೆ ಲೀಕ್ ಆಗಿರುವ ಆರೋಪಗಳಿವೆ. ಇದರ ಬೆನ್ನಲ್ಲೇ ಕೊಚಿಮುಲ್ ಅಧ್ಯಕ್ಷರೂ, ಕೋಲಾರದ ಕಾಂಗ್ರೆಸ್ ಶಾಸಕರನ್ನು ಇಡಿ ಅಧಿಕಾರಿಗಳು ತನಿಖೆ ನಡೆಸಿದ್ದು ಪರೀಕ್ಷೆ ಹೆಸರಲ್ಲಿ ಭಾರೀ ಹಣದ ವ್ಯವಹಾರ ಆಗಿರುವ ಬಗ್ಗೆ ಮಾಹಿತಿ ನೀಡಿತ್ತು. ಜನವರಿ ತಿಂಗಳ ಕೊನೆಯಲ್ಲಿ ಇಡಿಯವರು ಮಂಗಳೂರು ವಿವಿಗೆ ಬಂದು ದಾಖಲೆಗಳ ಪರಿಶೀಲನೆ ನಡೆಸಿದ್ದಲ್ಲದೆ, ರಾಜು ಚಲ್ಲನ್ನವರ್ ಮತ್ತು ವಿಸಿ ಜಯರಾಜ್ ಅಮೀನ್ ಅವರನ್ನು ತನಿಖೆಗೆ ಒಳಪಡಿಸಿದ್ದರು.
Kochimul scam, Mangalore Univercity, ed raid, Chances of action against Dr Raju Krishna Chalannavar. The university has been conducting written tests to recruit staff for Kolar-Chickballapur Milk Producers Union Limited (KOCHIMUL) and other cooperative institutions without framing any regulations for conducting the tests. The recruitment to KOCHIML is now being inquired by the Enforcement Directorate
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
17-08-25 09:09 pm
HK News Desk
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
17-08-25 05:26 pm
Mangalore Correspondent
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
Landslide at Shiradi Ghat: ಭಾರೀ ಮಳೆಗೆ ಶಿರಾಡಿ...
16-08-25 11:11 pm
Dharmasthala, BJP MLA S.R. Vishwanath: ಸೌಜನ್ಯ...
16-08-25 09:19 pm
ಕಾವೂರು ಮೊಸರು ಕುಡಿಕೆ ಉತ್ಸವದಲ್ಲಿ ಡಿಜೆ ಬಳಕೆ ; ಸೌ...
16-08-25 08:26 pm
16-08-25 10:49 pm
Mangalore Correspondent
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm