ಬ್ರೇಕಿಂಗ್ ನ್ಯೂಸ್
13-02-24 04:37 pm Mangalore Correspondent ಕರಾವಳಿ
ಮಂಗಳೂರು, ಫೆ.13: ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಸಾರಿಗೆ ಉದ್ದೇಶಕ್ಕೆ ಇಲೆಕ್ಟ್ರಿಕ್ ಬಸ್ ಗಳನ್ನು ರಸ್ತೆಗಿಳಿಸಲು ಕೇಂದ್ರ ಸರಕಾರ ಮುಂದಾಗಿದೆ. ಆರಂಭಿಕವಾಗಿ ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಸೇರಿದಂತೆ ಐದು ಜಿಲ್ಲೆಗಳಿಗೆ ಇಲೆಕ್ಟ್ರಿಕ್ ಸಾರಿಗೆ ಬಸ್ ಗಳನ್ನು ಇಳಿಸಲು ವಿಶೇಷ ಯೋಜನೆ ರೂಪಿಸಲಾಗಿದೆ. ಎಲ್ಲವೂ ಅಂದ್ಕೊಂಡಂತೆ ಆದಲ್ಲಿ ಜೂನ್ ವೇಳೆಗೆ ಮಂಗಳೂರಿನಲ್ಲಿ ಹೊಗೆಯುಗುಳುವ ಕೆಎಸ್ಸಾರ್ಟಿಸಿ ಬಸ್ ಗಳ ಬದಲಿಗೆ ಗ್ರೀನ್ ಬಸ್ ಸಂಚಾರ ನಡೆಸಲಿದೆ.
ಕೇಂದ್ರ ಸರಕಾರದ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಗೆ 100 ಬಸ್, ಬೆಳಗಾವಿಗೆ 50, ಹುಬ್ಬಳ್ಳಿ- ಧಾರವಾಡಕ್ಕೆ 50, ಮೈಸೂರಿಗೆ 100, ಶಿವಮೊಗ್ಗಕ್ಕೆ 50 ಬಸ್ ಗಳನ್ನು ನೀಡಲು ಉದ್ದೇಶಿಸಲಾಗಿದೆ. ಮಂಗಳೂರು, ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗಕ್ಕೆ 100 ಇಲೆಕ್ಟ್ರಿಕ್ ಬಸ್ ಗಳನ್ನು ನೀಡಲಾಗುತ್ತಿದ್ದು, ಅದರ ಸಂಪೂರ್ಣ ನಿರ್ವಹಣೆಯನ್ನು ವಿಭಾಗವು ನೋಡಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಚಾರ್ಜಿಂಗ್ ಯೂನಿಟ್ ಇನ್ನಿತರ ಸೌಲಭ್ಯಗಳನ್ನು ಮಾಡಿಕೊಳ್ಳಬೇಕಾಗಿದೆ. ಮಂಗಳೂರು – ಉಡುಪಿ ಒಳಗೊಂಡ ಮಂಗಳೂರು ಕೆಎಸ್ಸಾರ್ಟಿಸಿ ಡಿಪೋಗೆ 45 ಬಸ್ ಗಳು, ಮಂಗಳೂರು- ಪುತ್ತೂರು –ಮಡಿಕೇರಿ ಒಳಗೊಂಡ ಪುತ್ತೂರು ಡಿಪೋಗೆ 40 ಬಸ್ ಗಳು ಮಂಜೂರಾಗಿವೆ ಎನ್ನುವ ಮಾಹಿತಿ ಇದೆ.
ಸದ್ಯಕ್ಕೆ ಯಾವೆಲ್ಲ ರೂಟಿನಲ್ಲಿ ಹೊಸ ಗ್ರೀನ್ ಬಸ್ ಗಳು ಸಂಚಾರ ನಡೆಸಲಿವೆ ಎನ್ನೋದರ ಬಗ್ಗೆ ಅಂತಿಮ ಆಗಿಲ್ಲ. ಪ್ರಯಾಣಿಕರ ದಟ್ಟಣೆ ಇರುವ ಧರ್ಮಸ್ಥಳ, ಕಾಸರಗೋಡು, ಪುತ್ತೂರು, ಉಡುಪಿ ರಸ್ತೆಯಲ್ಲಿ ಇಲೆಕ್ಟ್ರಿಕ್ ಬಸ್ ಸಂಚಾರ ನಡೆಸುವ ಸಾಧ್ಯತೆಯಿದೆ. ಹೊಗೆಯುಗುಳುತ್ತ ಸಾಗುವ ಬಹುತೇಕ ಹಳೆ ವಾಹನಗಳನ್ನು ಬದಿಗಿಟ್ಟು ಮಾಲಿನ್ಯ ತಪ್ಪಿಸುವ ಉದ್ದೇಶದಿಂದ ಗ್ರೀನ್ ಬಸ್ ಗಳನ್ನು ಸಂಚಾರಕ್ಕಿಳಿಸಲು ಅಧಿಕಾರಿಗಳು ಉತ್ಸುಕರಾಗಿದ್ದಾರೆ. ಈ ಬಸ್ಸುಗಳನ್ನು ಮಂಗಳೂರಿನ ಬಿಜೈ ಕೆಎಸ್ಸಾರ್ಟಿಸಿ ಮತ್ತು ಕುಂಟಿಕಾನ ಡಿಪೋದಲ್ಲಿ ಚಾರ್ಜಿಂಗ್ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ಈ ಬಗ್ಗೆ ಖಾಸಗಿ ಕಂಪನಿಗೆ ಟೆಂಡರ್ ನೀಡಲಾಗುತ್ತಿದ್ದು ರಿಪೇರಿ ಮತ್ತು ಚಾರ್ಜಿಂಗ್ ವ್ಯವಸ್ಥೆಯನ್ನು ಆ ಕಂಪನಿ ನೋಡಿಕೊಳ್ಳಲಿದೆ.
ಕುಂಟಿಕಾನ ಡಿಪೋದಲ್ಲಿ ಏಕಕಾಲಕ್ಕೆ 15 ಬಸ್ ಗಳನ್ನು ಚಾರ್ಜ್ ಮಾಡಲು ವ್ಯವಸ್ಥೆಗಳಿದ್ದರೆ, ಬಿಜೈನಲ್ಲಿ 5 ಬಸ್ ಗಳನ್ನು ಸಂಚಾರ ಸಂದರ್ಭದಲ್ಲಿ ಚಾರ್ಜಿಂಗ್ ಮಾಡಿಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ. ಇದಲ್ಲದೆ, ಮಂಗಳೂರು ಸಿಟಿ ಸರ್ವಿಸ್ ಆಗಿಯೂ ಒಂದಷ್ಟು ಇಲೆಕ್ಟ್ರಿಕ್ ಬಸ್ ಗಳನ್ನು ರಸ್ತೆಗಿಳಿಸಲು ಮಂಗಳೂರು ಕೆಎಸ್ಸಾರ್ಟಿಸಿ ಡಿಪೋ ಮುಂದಾಗಿದೆ. ನಗರ ಭಾಗದಲ್ಲಿ ಮಾಲಿನ್ಯ ತಗ್ಗಿಸುವ ದೃಷ್ಟಿಯಿಂದ ಇಲೆಕ್ಟ್ರಿಕ್ ಬಸ್ಸುಗಳಿಗೆ ಒತ್ತು ನೀಡಲಾಗಿದೆ. ಕೆಎಸ್ಸಾರ್ಟಿಸಿಯಿಂದ ಮಂಜೂರಾಗಿರುವ ಬಸ್ ಗಳು ಬಹುತೇಕ ಜೂನ್ ವೇಳೆಗೆ ರಸ್ತೆಗಿಳಿಯುವ ಸಾಧ್ಯತೆಯಿದೆ ಎಂದು ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ಅಧಿಕಾರಿ ರಾಜೇಶ್ ಶೆಟ್ಟಿ ತಿಳಿಸಿದ್ದಾರೆ.
The central government has decided to introduce electric buses for transport purposes in major cities across the country. Initially, a special plan has been chalked out to drop electric transport buses to five districts including Dakshina Kannada in Karnataka. If all goes according to plan, green buses will replace the smoky KSRTC buses in Mangaluru by June.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm