ಬ್ರೇಕಿಂಗ್ ನ್ಯೂಸ್
09-02-24 02:16 pm Mangalore Correspondent ಕರಾವಳಿ
ಮಂಗಳೂರು, ಫೆ.9: ಬೈಂದೂರಿನಲ್ಲಿ ನಕ್ಸಲ್ ಚಟುವಟಿಕೆ ಕಂಡುಬಂದಿದ್ದರಿಂದ ದಕ್ಷಿಣ ಕನ್ನಡದಲ್ಲಿಯೂ ನಿಗಾ ಇರಿಸಲಾಗಿದೆ. ಯಾರಿಗೂ ಕಾನೂನು ಕೈಗೆ ತೆಗೆದುಕೊಳ್ಳೋದನ್ನು ಸಹಿಸಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಕ್ಸಲ್ ಚಳವಳಿಯನ್ನು ಪೊಲೀಸ್ ಇಲಾಖೆಗೆ ತಡೆಯುವ ಶಕ್ತಿ ಇದೆ ಎಂದು ಹೇಳಿದರು. ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ನೈತಿಕ ಪೊಲೀಸ್ ಗಿರಿ ಅನ್ನೋದು ದ.ಕ ಜಿಲ್ಲೆಗೆ ಕಳಂಕ. ಅದಕ್ಕೆ ಜನ, ಉದ್ಯಮಗಳು ದ.ಕ ಜಿಲ್ಲೆಗೆ ಬರೋದಿಲ್ಲ. ನೈತಿಕ ಪೊಲೀಸ್ ಗಿರಿ ಇದೆಲ್ಲಾ ಆರ್ ಎಸ್ಎಸ್, ಬಜರಂಗದಳ ಕುತಂತ್ರವಾಗಿದೆ. ಮಡಿಕೇರಿಯಲ್ಲಿ ವೈಯಕ್ತಿಕ ಕಾರಣಕ್ಕೆ ಜಗಳವಾಗಿ ಮುಸ್ಲಿಂ ಸತ್ತು ಹೋಗಿದ್ದ. ಅದೇ ಹಿಂದೂ ಆಗಿದ್ರೆ ಊರೆಲ್ಲಾ ಬೆಂಕಿ ಹಚ್ಚುತ್ತಿದ್ರು. ಹಿಂದೂ ಮುಸ್ಲಿಂ ಆದರೆ ಅದರ ಅರ್ಥನೇ ಬೇರೆ ಆಗುತ್ತಿತ್ತು. ನೈತಿಕ ಪೊಲೀಸ್ ಗಿರಿ ಯಾರೇ ಮಾಡಿದರೂ ಕ್ರಮ ತೆಗೆದುಕೊಳ್ಳುತ್ತೇವೆ.
ದ್ವೇಷದಿಂದ ಅನಂತ್ ಕುಮಾರ್ ಹೆಗಡೆ, ಸಿಟಿ ರವಿ, ಸುನಿಲ್ ಕುಮಾರ್, ನಳಿನ್ ಕುಮಾರ್ ಲಾಭ ಪಡೆದುಕೊಳ್ಳುತ್ತಾರೆ. ಅವರಿಗೆ ಇದೇ ಬಂಡವಾಳ, ಅಭಿವೃದ್ಧಿ ವಿಚಾರದಲ್ಲಿ ಮಾತನಾಡೋದಿಲ್ಲ. ಇದನ್ನೇ ಇಡ್ಕೊಂಡು ಜನರ ಭಾವನೆಯಲ್ಲಿ ಚೆಲ್ಲಾಟ ಆಡುತ್ತಿದ್ದಾರೆ. ಈ ರೀತಿಯ ರಾಜಕಾರಣ ಎಷ್ಟರ ಮಟ್ಟಿಗೆ ಒಳ್ಳೆಯದು ಅನ್ನೋದು ಜನರೇ ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬಿಜೆಪಿಯವರು ವಿರೋಧ ಪಕ್ಷ ರಹಿತ ದೇಶ ಮಾಡೋಕೆ ಹೊರಟಿದ್ದಾರೆ. ಈ ರೀತಿಯ ಪ್ರಜಾಪ್ರಭುತ್ವ ದೇಶಕ್ಕೆ ಒಳ್ಳೆಯದಲ್ಲ. ಎಷ್ಟು ಜನರಿಗೆ ತೊಂದರೆ ಕೊಡುತ್ತಿದ್ದಾರೆ ಅನ್ನೋದು ಗೊತ್ತಿದೆ. ಈ ಎಲ್ಲಾ ತಪ್ಪುಗಳನ್ನು ಧರ್ಮದ ಅಡಿಯಲ್ಲಿ ತಂದು ಮುಚ್ಚಿ ಹಾಕುತ್ತಿದ್ದಾರೆ. ಪ್ರಧಾನಿ ಮೋದಿ ಅಧಿವೇಶನದಲ್ಲಿ ಕಾಂಗ್ರೆಸ್ ಗೆ ಬಯ್ಯೋದು ಬಿಟ್ಟು ಬೇರೇನೂ ಹೇಳಿಲ್ಲ. ಮುತ್ಸದ್ದಿ ಪ್ರಧಾನಿ ಯಾವ ರೀತಿ ಮಾತನಾಡುತ್ತಾರೆ ಆ ರೀತಿ ಮೋದಿ ಮಾತಿಲ್ಲ. ಕ್ಷುಲ್ಲಕ, ಸೇಡಿನ ರಾಜಕಾರಣವಷ್ಟೇ ಮೋದಿ ಮಾತಿನಲ್ಲಿದೆ ಎಂದು ಟೀಕಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಕೋಳಿ ಅಂಕ ನಿರ್ಬಂಧಿಸುವ ಕುರಿತ ಪ್ರಶ್ನೆಗೆ, ಕೋಳಿ ಅಂಕದ ವಿಚಾರ ನನಗೆ ಯಾವುದೇ ದೂರು ಬಂದಿಲ್ಲ. ನನ್ನ ಗಮನಕ್ಕೆ ಯಾರೂ ತಂದಿಲ್ಲ, ಬಂದ್ರೆ ಚರ್ಚೆ ಮಾಡ್ತೇನೆ. ಆಟಕ್ಕೋಸ್ಕರ ಮತ್ತು ಜೂಜಿಗಾಗಿ ಕೋಳಿ ಅಂಕ ಮಾಡಲಾಗುತ್ತೆ. ಆಟ ನಮ್ಮ ಕಲೆ ಮತ್ತು ಸಂಪ್ರದಾಯ, ಕ್ರೀಡೆ ಅಂತ ಒಪ್ಪಿಕೊಳ್ಳಬೇಕು. ಕಂಬಳ, ಜಲ್ಲಿಕಟ್ಟು ಮಾಡ್ತಾರೆ, ಆದರೆ ಜೂಜು ಹೆಚ್ಚಾದಾಗ ಕ್ರಮ ಆಗುತ್ತದೆ ಎಂದರು.
Naxal activity in Udupi byndopr Dinesh Gundu rao reacts in Mangalore. Says no one will be spared. Naxal activities have quietly reappeared in parts of Udupi district, after being off the grid for over a decade. Villagers in the Kollur police station limits have informed that armed Naxals in green fatigues visited some houses recently, which led to the suspicion of their presence and movements in the region. The Chikkamagaluru Anti-Naxal Force (ANF) has been directed by SP Jitendra Kumar Dayam to be more alert and vigilant.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm