ಬ್ರೇಕಿಂಗ್ ನ್ಯೂಸ್
07-02-24 06:25 pm Udupi Correspondent ಕರಾವಳಿ
ಉಡುಪಿ, ಫೆ.7: ಬೈಂದೂರಿನ ಮುದೂರು, ಜಡ್ಕಲ್ ಪರಿಸರದಲ್ಲಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಎಲರ್ಟ್ ಆಗಿದ್ದಾರೆ. ಅಲ್ಲದೆ, ಸ್ಥಳಕ್ಕೆ ಕಾರ್ಕಳ, ಹೆಬ್ರಿಯಲ್ಲಿದ್ದ ಏಂಟಿ ನಕ್ಸಲ್ ಫೋರ್ಸ್ ದಳದವರು ತೆರಳಿದ್ದು ಕೂಂಬಿಂಗ್ ಆರಂಭಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ಮುದೂರು, ಜಡ್ಕಲ್ ಮತ್ತು ಬೆಳ್ಕಳ್ ಪ್ರದೇಶದ ಕಾಡು ಪರಿಸರದಲ್ಲಿ ಹಸುರು ಯೂನಿಫಾರ್ಮ್ ಹಾಕ್ಕೊಂಡಿದ್ದ ನಾಲ್ಕೈದು ಮಂದಿಯಿದ್ದ ನಕ್ಸಲರು ಕಳೆದ ಒಂದು ತಿಂಗಳಿನಿಂದ ಆಗಿಂದಾಗ್ಗೆ ಜನರಿಗೆ ಕಾಣ ಸಿಕ್ಕಿದ್ದಾರೆ. ಈ ಬಗ್ಗೆ ಅಲ್ಲಿನ ಜನರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿದ್ದು ಮಾಹಿತಿ ಕಲೆಹಾಕಿದ್ದಾರೆ. ಕೆಲವರು ಶಸ್ತ್ರ ಹಿಡಿದುಕೊಂಡಿದ್ದವರನ್ನು ಕಂಡಿದ್ದಾಗಿ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅದು ನಕ್ಸಲರದ್ದೇ ತಂಡ ಆಗಿರಬಹುದು ಎನ್ನುವ ಶಂಕೆ ಮೂಡಿದೆ.
ಆದರೆ ಕಳೆದ ಹತ್ತು ವರ್ಷಗಳಿಂದ ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಉಡುಪಿ ಭಾಗದಲ್ಲಿ ನಕ್ಸಲರು ಕಾಣಿಸಿಕೊಂಡಿರಲಿಲ್ಲ. ಕೇರಳದ ವಯನಾಡು, ಕಣ್ಣೂರು ಭಾಗದ ಕಾಡುಗಳಲ್ಲಿ ನಕ್ಸಲರಿದ್ದರೂ ಇಲ್ಲಿ ಎಎನ್ಎಫ್ ಠಿಕಾಣಿ ಹೂಡಿದ್ದರಿಂದ ಮತ್ತೆ ಪ್ರತ್ಯಕ್ಷ ಆಗಿರಲಿಲ್ಲ. ಕಳೆದ ಎರಡು ತಿಂಗಳಲ್ಲಿ ಕೇರಳ ಭಾಗದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ತೀವ್ರಗೊಂಡಿದ್ದರಿಂದ ಆ ಕಡೆಯಿಂದ ಕರ್ನಾಟಕಕ್ಕೆ ನಕ್ಸಲರು ಬಂದಿರಬಹುದು ಎನ್ನುವ ಗುಮಾನಿಯಿದೆ. ಹಾಗೆ ಬಂದಿದ್ದೇ ಆದಲ್ಲಿ ಕೇರಳದಿಂದ ಕೊಡಗಿನ ಮೂಲಕವೇ ಕರ್ನಾಟಕಕ್ಕೆ ಬರಬೇಕಿದೆ. ಇಂಥ ಮಾಹಿತಿ ಅಧಿಕೃತವಾಗಿ ಸಿಕ್ಕಿಲ್ಲವಾದರೂ, ಕೊಡಗು, ದಕ್ಷಿಣ ಕನ್ನಡದ ಪಶ್ಚಿಮ ಘಟ್ಟದ ಕಾಡುಗಳಿಂದಲೇ ಉಡುಪಿ ಸೇರಿರುವ ಸಾಧ್ಯತೆಯಿದೆ. ಅಲ್ಲದೆ, ನಕ್ಸಲರ ತಂಡವನ್ನು ಹಳೆ ನಕ್ಸಲ್ ವಿಕ್ರಂ ಗೌಡ ಅಥವಾ ರಾಯಚೂರು ಮೂಲದ ರಾಜಣ್ಣ ಮುನ್ನಡೆಸುತ್ತಿರುವ ಸಾಧ್ಯತೆ ಬಗ್ಗೆ ಹೇಳಲಾಗುತ್ತಿದೆ.
ಸದ್ಯಕ್ಕೆ ಕಾರ್ಕಳ, ಹೆಬ್ರಿ ಮತ್ತು ಅಮಾಸೆಬೈಲು ಪರಿಸರದಲ್ಲಿ ಕ್ಯಾಂಪ್ ಹಾಕಿದ್ದ ಎಎನ್ಎಫ್ ಪಡೆ ಅಲರ್ಟ್ ಆಗಿದ್ದು, ಕುಂದಾಪುರ, ಬೈಂದೂರಿನತ್ತ ತೆರಳಿದೆ. ಕಾಡು ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆಗೆ ಮುಂದಾಗಿದೆ ಎನ್ನುವ ಮಾಹಿತಿ ಇದೆ. ಆದರೆ ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಅಧಿಕೃತವಾಗಿ ದೃಢಪಡಿಸಿಲ್ಲ.
The Anti-Naxal Force (ANF) has been put on high alert after movement of Naxals was reported in parts of Chikkamagalur and Udupi. It is suspected that the Naxals, led by Vikram Gowda, are preparing to organise a ‘Martyr’s Day’ to honour Naxal leader Saket Rajan who was killed in an early morning encounter on February 6, 2005 near Menasinahadya in Koppa taluk.
05-02-26 05:52 pm
HK News Desk
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
ಹಿಂದಿ ಲ್ಯಾಂಡ್ ಉತ್ತರ ಭಾರತೀಯರು ಮಾತ್ರ ನೈಜ ಇಂಡಿಯನ...
05-02-26 01:15 pm
ಸರ್ಕಾರಿ ಆಸ್ಪತ್ರೆಯಲ್ಲೇ ಔಷಧಿ ಕೊರತೆ ; ಅನುದಾನ ಇಲ್...
05-02-26 10:37 am
54 ಸಾವಿರಕ್ಕೂ ಹೆಚ್ಚು RTI ಅರ್ಜಿಗಳು ಬಾಕಿ ; ಮಾಹಿತ...
03-02-26 08:17 pm
04-02-26 03:42 pm
HK News Desk
ಕೊರಿಯನ್ ಆನ್ಲೈನ್ ಗೇಮ್ ಗೀಳು ; 9ನೇ ಮಹಡಿಯಿಂದ ಕೆಳ...
04-02-26 02:02 pm
ನೆಲದ ಕಾನೂನು ಗೌರವಿಸಿ ಉಳಿದುಕೊಳ್ಳಿ, ಇಲ್ಲಾಂದ್ರೆ ದ...
03-02-26 09:06 pm
ಬಾಲಕನ ಮೊಮೋಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್...
03-02-26 11:55 am
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
05-02-26 11:03 pm
Mangalore Correspondent
ಅತಿದೊಡ್ಡ ಸೈಬರ್ ನೆಟ್ವರ್ಕ್ ಪತ್ತೆಹಚ್ಚಿದ ಮಂಗಳೂರು...
05-02-26 10:01 pm
ಆಯುಷ್ ಇಲಾಖೆಯಲ್ಲಿ ಅವ್ಯವಹಾರ ; ಜಿಲ್ಲಾ ಆಯುಷ್ ಅಧಿಕ...
05-02-26 09:29 pm
Nantoor Accident, Protest: ನಂತೂರಿನಲ್ಲಿ ಬಸ್ಸಿನ...
05-02-26 06:20 pm
Accident in Mangalore, Nantoor: ನಂತೂರಿನಲ್ಲಿ ಭ...
04-02-26 10:15 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm