ಬ್ರೇಕಿಂಗ್ ನ್ಯೂಸ್
20-01-24 10:38 pm Udupi Correspondent ಕರಾವಳಿ
ಉಡುಪಿ, ಜ.20: ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ತನ್ನ ಮೂಲ ಮನೆಯಲ್ಲಿ ದೈವದ ಕೋಲದಲ್ಲಿ ಭಾಗಿಯಾಗಿದ್ದು ಈ ವೇಳೆ ಸ್ವತಃ ದೈವದ ಮುಖವಾಡವನ್ನು ಹೊತ್ತು ದೈವದ ಕೆಲಸ ಮಾಡಿದ್ದಾರೆ. ಕುಟುಂಬದ ಮೂಲ ಮನೆಯಲ್ಲಿ ನಡೆದ ದೈವದ ಉತ್ಸವದಲ್ಲಿ ಸ್ವತಃ ತಾವೇ ನಿಂತು ದೈವದ ಮುಖವಾಡವನ್ನು ಹೊತ್ತು ಸೇವೆ ಮಾಡಿದ್ದಾರೆ.
ರಕ್ಷಿತ್ ಶೆಟ್ಟಿ ನಟನಾಗಿ ಹೆಸರು ಮಾಡಿದ್ದರೂ ತುಳುನಾಡಿನ ದೈವಗಳ ಕಾರಣಿಕ ಅರಿತು ಸೇವೆಯನ್ನು ತಪ್ಪಿಸಿಲ್ಲ. ಉಡುಪಿ ಜಿಲ್ಲೆಯ ಅಲೆವೂರು ದೊಡ್ಡ ಮನೆ ಇವರ ಮೂಲಮನೆಯಾಗಿದ್ದು ಸದ್ಯ ದೈವಗಳ ಆರಾಧನೆ ನಡೆಯುತ್ತಿದೆ. ಗುತ್ತಿನ ಮನೆಯ ಪ್ರತಿಯೊಬ್ಬರಿಗೂ ಈ ಆಚರಣೆಯಲ್ಲಿ ಜವಾಬ್ದಾರಿಗಳಿರುತ್ತವೆ. ತುಳುನಾಡಿನಲ್ಲಿ ಮಾತೃ ಪ್ರಧಾನ ವ್ಯವಸ್ಥೆ ಇದ್ದರೂ, ರಕ್ಷಿತ್ ಶೆಟ್ಟಿ ತನ್ನ ತಂದೆಯ ಮನೆಯ ದೈವದ ಚಾಕರಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ದೈವದ ಮನೆಯಲ್ಲಿ ಪ್ರತಿಷ್ಠಾಪನೆಯ ವೇಳೆ ಮುಖವಾಡವನ್ನು ತಾನೇ ಕೈಯಾರೆ ಹಿಡಿದು ಸೇವೆ ನಡೆಸಿದ್ದಾರೆ. ಕಳೆದ ಮೂರು ದಿನಗಳಿಂದ ವಿವಿಧ ಪೂಜೆಗಳು ನಡೆಯುತ್ತಿದ್ದು ಪ್ರತಿ ಕೆಲಸದಲ್ಲೂ ಹಾಜರಿದ್ದು ಮನೆ ಮಗನ ಕರ್ತವ್ಯ ನಿಭಾಯಿಸಿದ್ದಾರೆ.




ರಕ್ಷಿತ್ ಶೆಟ್ಟಿಯ ತಂದೆ ಶ್ರೀಧರ ಶೆಟ್ಟಿ ಅವರು ಈ ದೊಡ್ಡ ಮನೆ ಕುಟುಂಬಕ್ಕೆ ಸೇರಿದವರು. ಸುಮಾರು ಏಳು ಶತಮಾನಗಳ ಇತಿಹಾಸ ಇರುವ ಈ ಗುತ್ತಿನ ಮನೆಯಲ್ಲಿ ಪಂಜುರ್ಲಿ, ಧೂಮಾವತಿ ಸೇರಿದಂತೆ ಅನೇಕ ದೈವಗಳು ಇವೆ. ವರ್ಷಂಪ್ರತಿ ಇಲ್ಲಿ ದೈವಗಳ ಉತ್ಸವ ನಡೆಯುತ್ತದೆ. ಈಗ ದೈವದ ಗುಡಿ ಮತ್ತು ಗುತ್ತಿನ ಮನೆ ಜೀರ್ಣಾವಸ್ಥೆ ತಲುಪಿದ ಕಾರಣ ಕುಟುಂಬಿಕರೆಲ್ಲ ಸೇರಿ ನೂತನ ಕಟ್ಟಡ ನಿರ್ಮಿಸಿದ್ದಾರೆ.
ಮೂಲ ಮನೆಯಲ್ಲೀಗ ದೈವಗಳ ಕೋಲ ನಡೆಯುತ್ತಿದ್ದು ಹೆತ್ತವರ ಜೊತೆಗೆ ಮನೆ ಮಗನಾಗಿ ರಕ್ಷಿತ್ ಶೆಟ್ಟಿ ದೈವದ ಕೈಂಕರ್ಯ ನಡೆಸಿದ್ದಾರೆ.
Sandalwood actor Rakshit Shetty, who participated in the deity's kola at his original home, performed the divine work by carrying the mask of the deity himself. He stood by himself at the deity's festival held at the family's original home and served with the mask of the deity.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
29-08-26 03:36 pm
HK News Staffer
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
29-08-26 04:39 pm
HK News Staffer
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm