ಬ್ರೇಕಿಂಗ್ ನ್ಯೂಸ್
17-11-20 01:10 pm Mangaluru Crime Correspondant ಕರಾವಳಿ
ಮಂಜೇಶ್ವರ, ನವೆಂಬರ್ 17: ಬಜರಂಗದಳ ಕಾರ್ಯಕರ್ತರು ವಾರ್ನ್ ಮಾಡಿದ್ದು , ಫೋಟೊ ವೈರಲ್ ಮಾಡಿದ್ದು ಕಾರಣವೋ ಗೊತ್ತಿಲ್ಲ. ಅಂತೂ, ಲವ್ ಕಂ ಜಿಹಾದಿಯ ಪ್ರೇಮ ಪಾಶಕ್ಕೆ ಸಿಲುಕಿ ಮುಸ್ಲಿಂ ಹುಡುಗನ ಜೊತೆ ಪರಾರಿಯಾಗಿದ್ದ ಹಿಂದು ಯುವತಿ ಮರಳಿ ಮನೆಗೆ ಬಂದಿದ್ದಾಳೆ.
ಕಣ್ಣೂರಿನಲ್ಲಿ ನಿಗೂಢ ಜಾಗದಲ್ಲಿ ಉಳಿದುಕೊಂಡಿದ್ದ ಯುವತಿ ಮತ್ತು ಯುವಕ ಮಂಜೇಶ್ವರ ಠಾಣೆಗೆ ಬಂದು ಸರೆಂಡರ್ ಆಗಿದ್ದು ಅವರನ್ನು ಪೊಲೀಸರು ಕಾಸರಗೋಡಿನ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಕೋರ್ಟಿನಲ್ಲಿ ಯುವತಿ ತಾನು ತನ್ನ ಹೆತ್ತವರ ಜೊತೆಗೆ ತೆರಳುವುದಾಗಿ ಹೇಳಿಕೆ ನೀಡಿದ್ದು ಅದರಂತೆ ಪೊಲೀಸರು ಆಕೆಯನ್ನು ಕಡಂಬಾರಿನಲ್ಲಿರುವ ಮನೆಗೆ ತಂದು ಬಿಟ್ಟಿದ್ದಾರೆ.

ವಾರದ ಹಿಂದೆ 22 ವರ್ಷದ ಯುವತಿಯನ್ನು ಮುಸ್ಲಿಂ ಯುವಕ ಅಪಹರಿಸಿದ ಬಗ್ಗೆ ವ್ಯಾಪಕ ವದಂತಿ ಕೇಳಿಬಂದಿತ್ತು. ರಾತ್ರಿ ಮಲಗಿದ್ದವಳು ದಿಢೀರ್ ಕಾಣೆಯಾಗಿದ್ದು ಹೆತ್ತವರನ್ನು ದಂಗುಬಡಿಸಿತ್ತು. ಇದರಿಂದ ತಾಯಿ ಆಘಾತಗೊಂಡು ಆಸ್ಪತ್ರೆಗೆ ದಾಖಲಾಗಿದ್ದೂ ಆಗಿತ್ತು. ಮನೆಯವರು ಬಳಿಕ ಮಂಜೇಶ್ವರ ಠಾಣೆಗೆ ತೆರಳಿ ನಾಪತ್ತೆ ಕೇಸು ದಾಖಲಿಸಿದ್ದರು. ಆದರೆ, ಅಲ್ತಾಫ್ ಎನ್ನುವ ಯುವಕ ಅಪಹರಿಸಿದ್ದಾಗಿ ಸ್ಥಳೀಯರು ಮಾಹಿತಿ ನೀಡಿದ್ದರಿಂದ ಬಜರಂಗದಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಆಕೆ ಮತ್ತು ಯುವಕನ ಫೋಟೊಗಳನ್ನು ವಾಟ್ಸಪ್ ಮತ್ತು ಫೇಸ್ಬುಕ್ ನಲ್ಲಿ ಹಾಕಿ ಎಲ್ಲಿಯಾದ್ರೂ ಕಂಡುಬಂದರೆ ಕೂಡಲೇ ಪೊಲೀಸರಿಗೆ ಅಥವಾ ಬಜರಂಗದಳ ಕಾರ್ಯಕರ್ತರಿಗೆ ಮಾಹಿತಿ ನೀಡಲು ಕೇಳಿಕೊಂಡಿದ್ದರು. ಈ ಫೋಟೊಗಳು ಭಾರೀ ವೈರಲ್ ಆಗಿತ್ತು. ಮಂಗಳೂರಿನ ಬಜರಂಗದಳ ಮತ್ತು ವಿಹಿಂಪ ಮುಖಂಡರು ಶರಣ್ ಪಂಪ್ವೆಲ್ ನೇತೃತ್ವದಲ್ಲಿ ಕಾಸರಗೋಡಿಗೆ ತೆರಳಿ, ಎಸ್ಪಿಯನ್ನು ಭೇಟಿಯಾಗಿ ಲವ್ ಜಿಹಾದ್ ಶಂಕೆ ವ್ಯಕ್ತಪಡಿಸಿ ಯುವಕನ ಬಂಧನಕ್ಕೆ ಒತ್ತಾಯಿಸಿದ್ದರು.

ಇವೆಲ್ಲ ವಿಚಾರ ಮಾಧ್ಯಮಗಳಲ್ಲಿ ಬಂದು ಯುವತಿಯ ಅಪಹರಣ ವಿಚಾರ ವ್ಯಾಪಕ ಚರ್ಚೆಗೀಡಾಗುತ್ತಿದ್ದಂತೆ ಯುವತಿ ಅಲರ್ಟ್ ಆಗಿದ್ದಾಳೆ. ಅಲ್ಲೀ ವರೆಗೂ ಯುವಕನ ಜೊತೆಗೇ ತೆರಳುವುದಾಗಿ ಮಂಜೇಶ್ವರದ ಪೊಲೀಸರಲ್ಲಿ ಹೇಳಿದ್ದ ಯುವತಿ ಈಗ ಯು ಟರ್ನ್ ಹೊಡೆದಿದ್ದಾಳೆ. ಅಲ್ಲದೆ, ದಿಢೀರ್ ಆಗಿ ಮನೆಗೆ ಮರಳಿ, ಹುಡುಕಾಟ ನಡೆಸುತ್ತಿದ್ದ ಹಿಂದು ಸಂಘಟನೆಯ ಕಾರ್ಯಕರ್ತರನ್ನು ನಿಟ್ಟುಸಿರು ಬಿಡುವಂತೆ ಮಾಡಿದ್ದಾಳೆ. ಆದರೆ, ಠಾಣೆಯಲ್ಲಿ ಆರೋಪಿ ಯುವಕನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಕಿಡ್ನಾಪ್ ಪ್ರಕರಣ ದಾಖಲಿಸಬೇಕೆಂದು ಮಾತು ಕೇಳಿಬಂದಿದೆ. ಆದರೆ, ಹೆತ್ತವರೇ ಅಂಥ ದೂರು ನೀಡಬೇಕೆ ಹೊರತು ಇತರರು ನೀಡಲು ಸಾಧ್ಯವಾಗಲ್ಲ. ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಪೊಲೀಸರು ಆರೋಪಿ ಯುವಕನನ್ನು ಬಿಡುಗಡೆ ಮಾಡಿದ್ದಾರೆ.
Also Read: ಲವ್ ಜಿಹಾದ್ ಬಲಿಯಾದ್ಲು ಮತ್ತೊಬ್ಳು ಸುಂದರಿ ; ರಾತ್ರೋರಾತ್ರಿ ಅಪಹರಿಸಿದ ಮುಸ್ಲಿಂ ಯುವಕ !!
Manjeshwar Love Jihad case takes a u-turn. The girl who went missing returns back home after their post became viral on social media.
30-01-26 10:37 pm
Bangalore Correspondent
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
ಲಕ್ಕುಂಡಿಯಲ್ಲಿ ನಿಧಿ ಕಾಯ್ತಿದೆಯಾ ಮೂರು ಹೆಡೆಯ ನಾಗರ...
30-01-26 12:38 pm
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
30-01-26 03:38 pm
HK News Desk
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
30-01-26 09:01 pm
Giridhar Shetty, Mangaluru
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
31-01-26 12:12 pm
Hk News Staffer
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm