ಬ್ರೇಕಿಂಗ್ ನ್ಯೂಸ್
24-09-23 04:51 pm Mangalore Correspondent ಕರಾವಳಿ
ಮಂಗಳೂರು, ಸೆ.24: ಪ್ರಣವಾನಂದ ಸ್ವಾಮೀಜಿ ನಮ್ಮ ಸಮುದಾಯದ ನಾಯಕ ಅಲ್ಲ, ಸುಮ್ಮನೆ ಬುರುಡೆ ಬಿಟ್ಟುಕೊಂಡು ಓಡಾಡಿದ್ರೆ ನಾಯಕ ಆಗಲ್ಲ ಎಂದು ಶಿಕ್ಷಣ ಸಚಿವ, ಈಡಿಗ ಜನಾಂಗದ ನಾಯಕ ಮಧು ಬಂಗಾರಪ್ಪ ಲೇವಡಿ ಮಾಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ವೇಳೆ ಪ್ರಣವಾನಂದ ಸ್ವಾಮೀಜಿ ಬಗ್ಗೆ ಶಿವಮೊಗ್ಗದಲ್ಲಿ ಈಡಿಗ ಸಂಘದವರು ವಿರೋಧ ವ್ಯಕ್ತಪಡಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ, ಆ ವ್ಯಕ್ತಿಯನ್ನೂ ನಾನೂ ವಿರೋಧಿಸುತ್ತೇನೆ. ನಮ್ಮ ಈಡಿಗ, ಬಿಲ್ಲವ ಸಮಾಜಕ್ಕೆ ಸೇರಿದ ವ್ಯಕ್ತಿಯಲ್ಲ. ನಮ್ಮ ಸಮಾಜ ಆತನನ್ನು ಈಡಿಗ ಸಮುದಾಯದ ಸ್ವಾಮೀಜಿ ಎಂದು ಒಪ್ಪಿಕೊಂಡಿಲ್ಲ. ಸುಮ್ನೆ ಬುರುಡೆ ಬಿಟ್ಕೊಂಡು ಪ್ರಚಾರ ಪಡೆಯೋದಷ್ಟೆ ಆತನ ಕಾಯಕ. ಯಾರೇ ಆಗಲಿ, ಸಮಾಜವನ್ನು ದಾರಿ ತಪ್ಪಿಸುತ್ತಾನಂದ್ರೆ, ಅಂಥವರನ್ನು ಕಟ್ ಮಾಡಬೇಕು. ನಾನು ಇವರನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಇಂಥವರನ್ನು ಹೇಟ್ ಮಾಡ್ತೀನಿ ಎಂದರು.



ಚುನಾವಣೆ ಸಮಯದಲ್ಲಿ ಪ್ರಣವಾನಂದ ಪಾದಯಾತ್ರೆ ಮಾಡಿದಾಗ ನೀವ್ಯಾರೂ ಅಲ್ಲಗಳೆಯುವ ಕೆಲಸ ಮಾಡಿಲ್ಲ ಎಂದು ಕೇಳಿದ್ದಕ್ಕೆ, ನಾನು ವೈಯಕ್ತಿಕವಾಗಿ ಆತನನ್ನು ಚುನಾವಣೆ ಲಾಭಕ್ಕೆ ಬಳಸಿಕೊಂಡಿಲ್ಲ. ಪ್ರಚಾರಕ್ಕೋಸ್ಕರ ಕಿಡಿಗೇಡಿ ರೀತಿ ಮಾಡ್ತಾರೆ. ಬಿಕೆ ಹರಿಪ್ರಸಾದ್ ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಇಟ್ಟುಕೊಂಡಿರುವ ವ್ಯಕ್ತಿ. ಅವರೇನು ಹೇಳಿದರೂ, ಪ್ರಣವಾನಂದ ಪರವಾಗಿ ಅಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಎರಡು ಸಾವಿರದಷ್ಟು ಪಬ್ಲಿಕ್ ಶಾಲೆಗಳನ್ನು ತೆರೆಯಲಿದ್ದು, ಆಮೂಲಕ ಎಲ್ಕೆಜಿಯಿಂದ ಹಿಡಿದು ಪಿಯುಸಿ ವರೆಗೆ ಗುಣಮಟ್ಟದ ಶಿಕ್ಷಣ ಬಡವರಿಗೆ ಸಿಗುವಂತೆ ಮಾಡುತ್ತೇನೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ತಲಾ ಮೂರು ಶಾಲೆಗಳನ್ನು ತೆರೆಯಲಿದ್ದು, ಮುಂದಿನ ವರ್ಷವೇ 300 ಶಾಲೆ ಅಸ್ತಿತ್ವಕ್ಕೆ ಬರಲಿದೆ ಎಂದು ಮಧು ಬಂಗಾರಪ್ಪ ಹೇಳಿದರು.
Karnataka Education Minister Madhu Bangarappa has said that Pranavananda Swamiji is not the leader of our community and if he just walks around with his skull, he will not become a leader.
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 11:04 pm
Mangaluru Staffer
ಎಂಆರ್ ಪಿಎಲ್ ದುರಂತ ; ಮೃತ ರಾಜೇಶ್ ಡಿಸಿಲ್ವ ಕುಟುಂಬ...
17-10-26 07:34 pm
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
17-10-26 11:09 am
HK News Staffer
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am