ಬ್ರೇಕಿಂಗ್ ನ್ಯೂಸ್
22-09-23 10:00 pm Mangalore Correspondent ಕರಾವಳಿ
ಮಂಗಳೂರು, ಸೆ.22: ನಂತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿ ಬಿದ್ದು ಕಳೆದ ಎರಡು ವಾರಗಳಲ್ಲಿ ವಾಹನ ಸವಾರರು ಚಲಿಸಲಾಗದ ಸ್ಥಿತಿ ಉಂಟಾಗಿತ್ತು. ತಿರುವಿನ ಭಾಗದಲ್ಲಿಯೇ ಇಂತಹ ಸ್ಥಿತಿಯಾಗಿದ್ದರಿಂದ ಅಲ್ಲಿ ಟ್ರಾಫಿಕ್ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬಂದಿಯೂ ಭಾರೀ ತ್ರಾಸ ಪಡುತ್ತಿದ್ದರು. ಅಲ್ಲದೆ, ಟ್ರಾಫಿಕ್ ಜಾಮ್ ಸಮಸ್ಯೆಗೂ ಕಾರಣವಾಗಿತ್ತು. ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಪೊಲೀಸ್ ಸಿಬಂದಿಯೇ ಗುಂಡಿ ಬಿದ್ದ ಜಾಗಕ್ಕೆ ಜಲ್ಲಿ ಹುಡಿ ತಂದು ತಾತ್ಕಾಲಿಕ ರಿಪೇರಿ ಕೆಲಸ ಮಾಡಿದ್ದಾರೆ.
ಟ್ರಾಫಿಕ್ ಕರ್ತವ್ಯದಲ್ಲಿದ್ದ ಕದ್ರಿ ಸಂಚಾರಿ ಠಾಣೆ ವಿಭಾಗದ ಎಸ್ಐ ಈಶ್ವರ ಸ್ವಾಮಿ ಮತ್ತು ಎಎಸ್ಐ ವಿಶ್ವನಾಥ ರೈ ಅವರು ಹಾರೆ, ಗುದ್ದಲಿಯನ್ನು ಹಿಡಿದು ತಾವೇ ದುರಸ್ತಿ ಕೆಲಸ ಮಾಡಿದ್ದಾರೆ. ವಾಹನಗಳ ಸಾಗಾಟದ ನಡುವೆಯೇ ಗುಂಡಿ ಬಿದ್ದ ರಸ್ತೆಯನ್ನು ಮುಚ್ಚಿ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದಾರೆ.



ನಂತೂರು ವೃತ್ತದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿ ಜೊತೆಗೂಡುವುದರಿಂದ ಸಾವಿರಾರು ವಾಹನಗಳು ಸಂಚಾರ ನಡೆಸುತ್ತವೆ. ಉಡುಪಿ ಕಡೆಯಿಂದ ಬರುವ ದೊಡ್ಡ ಗಾತ್ರದ ವಾಹನಗಳು ಬೆಂಗಳೂರು, ಪುತ್ತೂರು, ಮಡಿಕೇರಿ ಕಡೆಗೆ ಸಾಗಲು ನಂತೂರು ವೃತ್ತದಲ್ಲಿ ಎಡಕ್ಕೆ ತಿರುವು ಪಡೆಯುತ್ತದೆ. ಅದೇ ಜಾಗದಲ್ಲಿ ಪೂರ್ತಿ ಡಾಮರು ಕಿತ್ತು ಹೋಗಿದ್ದರಿಂದ ಗುಂಡಿ ಬಿದ್ದು ಜಲ್ಲಿ ಜಾರಿ ಹೋಗಿತ್ತು. ಇದರಿಂದ ದ್ವಿಚಕ್ರ ವಾಹನ ಸವಾರರಂತೂ ಪ್ರಾಣ ಕೈಯಲ್ಲಿ ಹಿಡಿದು ಸಾಗುವ ಸ್ಥಿತಿಯಾಗಿತ್ತು. ಇತ್ತೀಚೆಗೆ 15 ದಿನಗಳಲ್ಲಿ ಮಳೆ ಹೆಚ್ಚು ಬಿದ್ದಿದ್ದರಿಂದ ಸಂಚಾರವೇ ದುಸ್ತರವಾಗಿತ್ತು. ಮಹಿಳೆಯರು ದ್ವಿಚಕ್ರ ವಾಹನದಲ್ಲಿ ಸಾಗುವಾಗ ಅಲ್ಲಿಯೇ ನಿಂತು ಪೊಲೀಸರು ಜಾಗ್ರತೆ ವಹಿಸಬೇಕಾದ ಸ್ಥಿತಿಯಿತ್ತು.


ಹೆದ್ದಾರಿ ಅಧಿಕಾರಿಗಳಿಗೆ ಪೊಲೀಸರು ತಿಳಿಸಿದ್ದರೂ, ನಿರ್ಲಕ್ಷ್ಯ ವಹಿಸಿದ್ದರಿಂದ ಇದೀಗ ಪೊಲೀಸ್ ಸಿಬಂದಿಯೇ ಜಲ್ಲಿಯನ್ನು ತಂದು ರಸ್ತೆ ರಿಪೇರಿ ಮಾಡಿಸಿದ್ದಾರೆ. ಪೊಲೀಸರ ಕೆಲಸದ ಬಗ್ಗೆ ಸಾರ್ವಜನಿಕರ ಕಡೆಯಿಂದ ಅಭಿನಂದನೆಗಳ ಮಹಾಪೂರ ಜಾಲತಾಣದಲ್ಲಿ ಹರಿದು ಬಂದಿದೆ. ಇದೇ ಮಳೆಗಾಲದಲ್ಲಿ ಮೂರನೇ ಬಾರಿ ರಸ್ತೆ ಕಿತ್ತು ಹೋಗಿದ್ದು, ಹೆದ್ದಾರಿ ಅಧಿಕಾರಿಗಳ ಕಳಪೆ ಕಾಮಗಾರಿಯನ್ನೂ ಇದು ಎತ್ತಿತೋರಿಸಿದೆ.
Mangalore Traffic police fix dangerous potholes near Nanthoor circle. Video of the city traffic police repairing a pothole has gone viral on social media. The cops filled a dangerous pothole at Nanthoor on Friday September 22.
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 11:04 pm
Mangaluru Staffer
ಎಂಆರ್ ಪಿಎಲ್ ದುರಂತ ; ಮೃತ ರಾಜೇಶ್ ಡಿಸಿಲ್ವ ಕುಟುಂಬ...
17-10-26 07:34 pm
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
17-10-26 11:09 am
HK News Staffer
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am