ಬ್ರೇಕಿಂಗ್ ನ್ಯೂಸ್
21-09-23 10:11 pm Mangalore Correspondent ಕರಾವಳಿ
ಉಳ್ಳಾಲ, ಸೆ.21: ಮಂಜನಾಡಿ ನಿವಾಸಿ ಯುವಕನಿಗೆ ಕೇರಳದ 25 ಕೋಟಿ ರೂ. ಲಾಟರಿ ಒಲಿದಿರುವ ಸುದ್ದಿ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಯುವಕನಿಗೆ ಅಭಿನಂದನೆ ಹೇಳಿ ಸ್ನೇಹಿತರು ಫೋನ್ ಮಾಡಲೆತ್ನಿಸಿದಾಗ ಅಸಲಿಯತ್ತು ಹೊರಬಿದ್ದಿದೆ.
ಮಂಜನಾಡಿ ಮೊಂಟೆಪದವು ನಿವಾಸಿ ಆಸೀಫ್ ಎಂಬವರಿಗೆ ಸೆ.20ರಂದು ಡ್ರಾಗೊಂಡಿದ್ದ 25 ಕೋಟಿ ಲಾಟರಿ ಒಲಿದಿರುವುದಾಗಿ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ಹರಿದಾಡಿತ್ತು. ಬೆಂಗಳೂರಿನಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿರುವ ಆಸೀಫ್, ನಿನ್ನೆ ಊರಿಗೆ ಕಾರಿನಲ್ಲಿ ಬರುತ್ತಿದ್ದಾಗ ಮೊಬೈಲ್ ಗೆ ಕರೆಗಳ ಮೇಲೆ ಕರೆಗಳು ಬರುತ್ತಲೇ ಇತ್ತು. ಕರೆ ಸ್ವೀಕರಿಸುತ್ತಿದ್ದಂತೆ ಶುಭಾಶಯಗಳ ಸರಮಾಲೆಯೇ ಬರುತಿತ್ತು. ಹೆಚ್ಚು ವಿಚಾರಿಸುತ್ತಿದ್ದಂತೆಯೇ, ರೂ. 25 ಕೋಟಿ ಲಾಟರಿ ಟಿಕೆಟ್ ಒಲಿದಿರುವುದಾಗಿ ಸ್ನೇಹಿತರೊಬ್ಬರು ತಿಳಿಸಿದ್ದಾರೆ.

ಕೇರಳ ಲಾಟರಿಯನ್ನೇ ಖರೀದಿಸದ ನನಗೆ ಹೇಗೆ 25 ಕೋಟಿ ಒಲಿಯುವುದು ಎಂದು ತನ್ನಷ್ಟಕ್ಕೆ ಆಸಿಫ್ ಮೌನವಾಗಿದ್ದರು. ಹೀಗೆ ರಾತ್ರಿ ವರೆಗೂ ಕರೆಗಳು ನಿರಂತರವಾಗಿ ಬರುತ್ತಲೇ ಇದ್ದವು. ಇವರ ಮೌನದಿಂದಾಗಿ ಕೋಟಿ ಗೆದ್ದಿರುವುದು ಖಾತ್ರಿಯಾದ ಜನರು ಮೆಸೇಜ್, ಫೋನ್ ಮಾಡುತ್ತಲೇ ಇದ್ದರು. ನಿಜವಾಗಿಯೂ ಲಾಟರಿ ಒಲಿಯುತ್ತಿದ್ದರೆ ಮೊಬೈಲ್ ಸ್ವಿಚ್ ಆಫ್ ಮಾಡಿ ಪೊಲೀಸ್ ಠಾಣೆಯಲ್ಲಿ ಕೂರಬೇಕಿತ್ತು.
ಈ ಕುರಿತು ಆಸೀಫ್ ಸ್ನೇಹಿತರಲ್ಲಿ ವಿಚಾರಿಸಿದಾಗ, ವಾಟ್ಸ್ ಆ್ಯಪ್ ಲಿಂಕ್ ಬರುತ್ತಿದ್ದು, ಅದನ್ನು ಬಳಸಿ ತಮ್ಮ ಸ್ನೇಹಿತರ ಭಾವಚಿತ್ರ ಹಾಗೂ ಹೆಸರನ್ನು ಹಾಕಿ ಮಜಾ ತೆಗೆದುಕೊಳ್ಳುವ ಪರಿಪಾಠ ನಡೆಯುತ್ತಿರುವುದು ತಿಳಿದುಬಂದಿದೆ. ಈ ಹಿಂದೆಯೂ ಇಂತಹದ್ದೇ ಪ್ರಕರಣ ನಡೆದಿರುವ ಬಗ್ಗೆ ಕೆಲವರು ಹೇಳುತ್ತಿದ್ದಾರೆ.
Mangalore Manjanady youth wins 25 crore lottery, goes viral on social media.
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 11:04 pm
Mangaluru Staffer
ಎಂಆರ್ ಪಿಎಲ್ ದುರಂತ ; ಮೃತ ರಾಜೇಶ್ ಡಿಸಿಲ್ವ ಕುಟುಂಬ...
17-10-26 07:34 pm
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
17-10-26 11:09 am
HK News Staffer
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am